Rail-Coach Restaurant: ಬೆಂಗಳೂರಿನ ಈ ನಿಲ್ದಾಣಗಳಲ್ಲಿ ರೈಲು-ಕೋಚ್ ರೆಸ್ಟೋರೆಂಟ್ ಸ್ಥಾಪನೆ

ಬೆಂಗಳೂರು, ಜುಲೈ 26: ನಗರದ ಎರಡು ಪ್ರಮುಖ ರೈಲು ನಿಲ್ದಾಣಗಳಲ್ಲಿ ಅಕ್ಟೋಬರ್ ಅಂತ್ಯದ ವೇಳೆಗೆ ರೈಲು-ಕೋಚ್ ರೆಸ್ಟೋರೆಂಟ್‌ಗಳನ್ನು ಆರಂಭಿಸಲು ನೈಋತ್ಯ ರೈಲ್ವೆ ಇಲಾಖೆ ಯೋಜಿಸಿದೆ. ಇವು ಥೀಮ್ ಆಧಾರಿತ ಹವಾನಿಯಂತ್ರಿತ ರೈಲು-ಕೋಚ್ ರೆಸ್ಟೋರೆಂಟ್ ಆಗಿರಲಿವೆ.

ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣ ಮತ್ತು ಹೊಸದಾಗಿ ಉದ್ಘಾಟನೆಗೊಂಡ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಲ್ಲಿ (ಎಸ್‌ಎಂವಿಬಿ) ಈ ರೆಸ್ಟೋರೆಂಟ್ ಆರಂಭವಾಗಲಿದ್ದು, ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

rail-coach-restaurant

ಪ್ರಸ್ತುತ ಅಂತಹ ಎರಡು ರೆಸ್ಟೋರೆಂಟ್‌ಗಳನ್ನು ಆರಂಭಿಸಲು ಮಾತ್ರ ಯೋಜಿಸಲಾಗಿದೆ. ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿದ ನಂತರ, ಅಲ್ಲಿ ಕೂಡ ಇಂತಹ ರೆಸ್ಟೋರೆಂಟ್ ಸ್ಥಾಪನೆ ಬಗ್ಗೆ ಯೋಜಿಸಲಾಗುವುದು ಎಂದು ಹೇಳಿದ್ದಾರೆ. ರೈಲ್ವೇ ಅಧಿಕಾರಿಗಳ ಪ್ರಕಾರ, ಬೆಂಗಳೂರು ವಿಭಾಗದ ಎರಡು ನಿಗದಿತ ರೈಲು ನಿಲ್ದಾಣಗಳ ಚಿತ್ರಗಳನ್ನು ಒಳಗೊಂಡ ಎರಡು ರೈಲು-ಕೋಚ್ ರೆಸ್ಟೋರೆಂಟ್‌ಗಳು ಆರಂಭವಾಗಲಿವೆ.

ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಈ ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಗುತ್ತಿಗೆ ನೀಡಲಾಗಿದ್ದು, ರೈಲ್ವೇ ಇಂಜಿನಿಯರಿಂಗ್ ವಿಭಾಗ ಶೀಘ್ರದಲ್ಲೇ ಹಳಿ ಹಾಕುವ ಕಾಮಗಾರಿ ನಡೆಸಲಿದೆ. ಪ್ರಯಾಣಿಕರಿಗೆ ಹೊಸ ಮತ್ತು ವಿಭಿನ್ನ ಭೋಜನದ ಅನುಭವವನ್ನು ನೀಡುವುದು ಅಂತಹ ರೆಸ್ಟೋರೆಂಟ್‌ಗಳ ಹಿಂದಿನ ಮುಖ್ಯ ಆಲೋಚನೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

24 ಗಂಟೆಯೂ ಆಹಾರ ಲಭ್ಯತೆ

ಈ ರೆಸ್ಟೋರೆಂಟ್‌ಗಳು ಹಲವು ಬಗೆಯ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿವೆ ಮತ್ತು ರೈಲ್ವೆ ನಿಲ್ದಾಣದ ಹೊರಗೆ ಲಭ್ಯವಿರುವ ಆಹಾರ ಮತ್ತು ನಿಲ್ದಾಣದ ಆವರಣದಲ್ಲಿ ಲಭ್ಯವಿರುವ ಆಹಾರಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಂದು ಹೆಚ್ಚುವರಿ ವಿಭಾಗೀಯ ರೈಲ್ವೆ ನೈಋತ್ಯ ರೈಲ್ವೆ (ಬೆಂಗಳೂರು ವಿಭಾಗ) ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಪಿಟಿಐಗೆ ತಿಳಿಸಿದ್ದಾರೆ.

"ಈ ರೈಲ್ ಕೋಚ್ ರೆಸ್ಟೊರೆಂಟ್‌ಗಳು ರೈಲ್ವೇಯ ಶುಲ್ಕರಹಿತ ಆದಾಯದ ವಿಧಾನವಾಗಿದೆ, ಇದರಲ್ಲಿ ಹಳೆಯ ಮತ್ತು ಸ್ಕ್ರ್ಯಾಪ್ ಮಾಡಲಾದ ರೈಲ್ವೇ ಕೋಚ್‌ಗಳನ್ನು ರೆಸ್ಟೋರೆಂಟ್‌ಗಳಾಗಿ ಮಾರ್ಪಡಿಸಲಾಗಿದೆ ಮತ್ತು ಪ್ರಯಾಣಿಕರಿಗೆ ಹೊಸ ಭೋಜನದ ಅನುಭವವನ್ನು ನೀಡಲು ಸಾಕಷ್ಟು ಆಸನ ಸೌಲಭ್ಯಗಳನ್ನು ಹೊಂದಿರುವ ರೆಸ್ಟೋರೆಂಟ್‌ಗಳಾಗಿ ಪರಿವರ್ತಿಸಲು ನವೀಕರಿಸಲಾಗಿದೆ" ಎಂದು ಅವರು ಹೇಳಿದರು.

ಈ ಹವಾನಿಯಂತ್ರಿತ ರೈಲು ಕೋಚ್ ರೆಸ್ಟೋರೆಂಟ್‌ಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಾರ್ವಜನಿಕರಿಗೆ 24x7 ಸಮಯ ಆಹಾರ ಪೂರೈಸುತ್ತವೆ. ಇಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರ ಎರಡನ್ನೂ ನೀಡಲಾಗುವುದು ಎಂದು ಅವರು ಹೇಳಿದರು. ಈ ಎರಡೂ ರೈಲು ನಿಲ್ದಾಣಗಳ ಪ್ರವೇಶ ದ್ವಾರದ ಬಳಿ ಸ್ಥಾಪಿಸಲಾಗುವ ರೈಲ್ ಕೋಚ್ ರೆಸ್ಟೊರೆಂಟ್‌ಗಳು ಕೋಚ್‌ನ ಒಳಗೆ 50 ಮತ್ತು ಕೋಚ್‌ನ ಹೊರಗೆ ಇನ್ನೂ ಕೆಲವು ಆಸನ ಸಾಮರ್ಥ್ಯದೊಂದಿಗೆ ಉತ್ತರ ಮತ್ತು ದಕ್ಷಿಣ ಭಾರತದ ತಿನಿಸುಗಳನ್ನು ಪೂರೈಸಲಿವೆ.

ಈ ರೆಸ್ಟೊರೆಂಟ್‌ಗಳಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ತಿಂಡಿ ಮತ್ತು ರಾತ್ರಿಯ ಊಟ ದೊರೆಯಲಿದೆ. 2023 ಜೂನ್‌ನಲ್ಲಿ ರೈಲ್ವೆ ಮಂಡಳಿಯ ಇ-ಹರಾಜು ಮಾಡ್ಯೂಲ್ ಅಡಿಯಲ್ಲಿ ಈ ರೈಲು-ಕೋಚ್ ರೆಸ್ಟೋರೆಂಟ್‌ಗಳ ಗುತ್ತಿಗೆಗಳನ್ನು ನೀಡಲಾಯಿಗಿದೆ ಮತ್ತು ಬಿಡ್‌ದಾರರ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7.54 ಕೋಟಿ ರೂಪಾಯಿ ಆದಾಯ

"ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ರೈಲ್ ಕೋಚ್ ರೆಸ್ಟೋರೆಂಟ್‌ನ ಗುತ್ತಿಗೆಯನ್ನು ಓಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾಯಿತು ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದ (ಎಸ್‌ಎಂವಿಬಿ) ಗುತ್ತಿಗೆಯನ್ನು ಗೌರವ್ ಎಂಟರ್‌ಪ್ರೈಸಸ್‌ಗೆ ನೀಡಲಾಯಿತು. ಐದು ವರ್ಷಗಳ ಒಪ್ಪಂದ ಇದಾಗಿದ್ದು, ಇದರಿಂದ ಇಲಾಖೆಗೆ 7.54 ಕೋಟಿ ರೂಪಾಯಿ ಆದಾಯ ಬಂದಿದೆ" ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

"ರೆಸ್ಟೋರೆಂಟ್‌ಗಳ ವಿನ್ಯಾಸವನ್ನು ಇ-ಹರಾಜು ಮೂಲಕ ಗುತ್ತಿಗೆ ಪಡೆದ ಖಾಸಗಿ ಕಂಪನಿಗಳು ಮಾಡುತ್ತವೆ. ಗುತ್ತಿಗೆ ಅವಧಿಗೆ ಕೋಚ್ ಮತ್ತು ಭೂಮಿಯನ್ನು ಮಾತ್ರ ರೈಲ್ವೇ ಒದಗಿಸುತ್ತದೆ. ಕೋಚ್ ಅಭಿವೃದ್ಧಿ ಮತ್ತು ರೆಸ್ಟೋರೆಂಟ್ ನಿರ್ವಹಣೆ ಪರವಾನಗಿದಾರರಿಂದ ಮಾಡಲಾಗಿದೆ," ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆಯ ಇಂಜಿನಿಯರಿಂಗ್ ವಿಭಾಗವು ಶೀಘ್ರದಲ್ಲೇ ಸ್ಥಳಗಳಲ್ಲಿ ಟ್ರ್ಯಾಕ್ ಹಾಕುವ ಕೆಲಸವನ್ನು ಪ್ರಾರಂಭಿಸುತ್ತದೆ, ನಂತರ ಪರವಾನಗಿದಾರರು ಲಭ್ಯವಿರುವ ಮತ್ತು ಸ್ಥಳಾಂತರಿಸಲು ಸಿದ್ಧವಾಗಿರುವ ಕೋಚ್‌ಗಳನ್ನು ಸ್ಥಳದಲ್ಲಿರುವ ಹಳಿಗಳಿಗೆ ಸ್ಥಳಾಂತರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಅವರು ಕೋಚ್‌ಗಳನ್ನು ಮಾರ್ಪಡಿಸಲು ಮತ್ತು ಸಿದ್ದಗೊಳಿಸಲು 60 ದಿನಗಳನ್ನು ಬೇಕಾಗುತ್ತದೆ. ವಿನ್ಯಾಸದ ನಂತರ ರೆಸ್ಟೋರೆಂಟ್‌ಗಳ ಹೆಸರುಗಳನ್ನು ಪರವಾನಗಿದಾರರು ನಿರ್ಧರಿಸುತ್ತಾರೆ. ನೈಋತ್ಯ ರೈಲ್ವೆಯು ಈಗಾಗಲೇ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೇ ನಿಲ್ದಾಣದಲ್ಲಿ ಬೂಗಿ-ಬೂಗಿ ಹೆಸರಿನ ರೈಲ್ ಕೋಚ್ ರೆಸ್ಟೋರೆಂಟ್ ಅನ್ನು ಸ್ಥಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+