ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು, ಜನವರಿ 27: ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಗೆ, ವಿಪರೀತ ಚಳಿ ಹಾಗೂ ಶೀತಗಾಳಿಗೆ ಹೈರಾಣಾಗಿ ಹೋಗಿದ್ದಾರೆ. ಇದರ ನಡುವೆ ನಗರದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ. ಈಗ ಮತ್ತೆ ಜನವರಿ 27ರ ಗುರುವಾರದಂದು ಮತ್ತೆ ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತ ಮಾಡಲು ಬೆಸ್ಕಾಂ ಮುಂದಾಗಿದೆ. ಹೀಗಾಗಿ ಗುರುವಾರ ಯಾವ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ನಗರದ ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್‌, ಭೂಮಿಕ ಲೇಔಟ್‌, ಪಟ್ಟಣಗೆರೆ, ಬಿ.ಎಚ್‌.ಇ.ಎಲ್‌. ಲೇಔಟ್‌, ಹರ್ಷ ಲೇಔಟ್‌, ವಿದ್ಯಾಪೀಠ ರಸ್ತೆ, ಬಿ.ಜಿ.ಎಸ್‌. ಆಸ್ಪತ್ರೆ ರಸ್ತೆ, ಮೈಸೂರು ಹೆದ್ದಾರಿ, ಸಿದ್ದಾರ್ಥ ಶಾಲೆ ರಸ್ತೆ, ಮುನೇಶ್ವರ ಲೇಔಟ್‌, ಪ್ರಸನ್ನ ಲೇಔಟ್‌, ಮಾರುತಿನಗರ, ಕೆಂಪೇಗೌಡ ನಗರ, ಸನ್‌ಸಿಟಿ, ಬಿ.ಡಿ.ಕಾಲೊನಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಗಾಂಧಿನಗರ, ಉಲ್ಲಾಳನಗರ, ಭುವನೇಶ್ವರಿನಗರ, ದೊಡ್ಡಬಸ್ತಿ ಮುಖ್ಯರಸ್ತೆ, ಕಲ್ಯಾಣಿ ಲೇಔಟ್‌, ಆರ್‌.ಆರ್‌.ಲೇಔಟ್‌, ಉಪಾಧ್ಯಾಯ ಲೇಔಟ್‌, ಕುವೆಂಪು ಮುಖ್ಯರಸ್ತೆ, ಜಿ.ಕೆ.ಗಲ್ಲಿ ರಸ್ತೆ, ಗಂಗಾನಗರ, ಯಮುನಾಗರ ಶಾಲೆ, ಬಿ.ಇ.ಎಲ್‌. 1 ಮತ್ತು 2ನೇ ಹಂತ, ಗಾಂಧಿ ಪಾರ್ಕ್‌-1, ಸರ್‌.ಎಂ.ವಿ. 3 ಮತ್ತು 5ನೇ ಬ್ಲಾಕ್‌, ಭವಾನಿನಗರ, ಅಮ್ಮ ಆಶ್ರಮ ರಸ್ತೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಸಮಸ್ಯೆ ಇರಲಿದೆ.

Bengaluru To Face Power Cuts On January 27; Full Details

ಬಾಲಾಜಿ ನಗರ, ಬಿಸ್ಮಿಲ್ಲಾ ನಗರ, ಸಿದ್ದಗುಂಟೆಪಾಳ್ಯ ಮತ್ತು ಕುವೆಂಪು ರಸ್ತೆ, ಕಮ್ಮನಹಳ್ಳಿ ರಸ್ತೆ, ಆರ್.ಎಸ್. ಪಾಳ್ಯ ಸೇರಿದಂತೆ ಸಾಯಿ ಶಕ್ತಿ ಬಡಾವಣೆ, ಬೆಟ್ಟದಾಸಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಹೊಸದಲ್ಲ. ಕಳೆದ ಹಲವಾರು ತಿಂಗಳಿನಿಂದ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ (ವರ್ಕ್ ಫ್ರಂ ಹೋಮ್) ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

Bengaluru To Face Power Cuts On January 27; Full Details

Recommended Video

      Shikhar Dhawan ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದು ಯಾರು? | Oneindia Kannada

      ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಅಷ್ಟೊಂದು ಕಷ್ಟವೆನಿಸದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ತಿಗಳುಗಳಿಂದ ವಿದ್ಯುತ್ ಕಡಿತ ಸಮಸ್ಯೆಯಾಗಿದ್ದು, ಬೆಸ್ಕಾಂನ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+