Bengaluru Weather: 'ಪೆಂಗಾಲ್' ಚಂಡಮಾರುತ: ಡಿ. 1ರಂದು ಭಾರೀ ಮಳೆ ಎಚ್ಚರಿಕೆ, 'ಯೆಲ್ಲೋ ಅಲರ್ಟ್'

ಬೆಂಗಳೂರು, ನವೆಂಬರ್ 28: ರಾಜಧಾನಿ ಬೆಂಗಳೂರಿಗೂ ಸಹ ಬಂಗಾಳಕೊಲ್ಲಿಯಲ್ಲಿ ಎದ್ದಿರುವ 'ಪೆಂಗಾಲ್' ಚಂಡಮಾರುತದ ಪ್ರಭಾವ ಉಂಟಾಗುವುದು ಬಹುತೇಕ ಖಚಿತವಾಗಿದೆ. ಈ ವೈಪರಿತ್ಯ (Fengal Cyclone) ಕಾರಣದಿಂದ ಬೆಂಗಳೂರು ನಗರದಲ್ಲಿ ಅತ್ಯಧಿಕ ಮಳೆ ಆಗಲಿದೆ. ಒಂದೇ ದಿನ 110 ಮಿಲಿ ಮೀಟರ್‌ನಷ್ಟು ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಕೆ (IMD) ಮುನ್ಸೂಚನೆ ನೀಡಿದೆ.

ಹಿಂಗಾರು ಮಳೆ ಆರಂಭವಾದಾಗ ಸುರಿದ್ದ ಮಳೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಡಿಸೆಂಬರ್ 1ರಂದು ಮಳೆ ಸುರಿಯುವ ಲಕ್ಷಣಗಳು ಇವೆ. ಡಿಸೆಂಬರ್ ಮೊದಲ ವಾರವೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ ನೀಡಲಾಗಿದೆ.

Bengaluru to Experiance Heavy Rainfall on Dec 1st Due Cyclone Fengal

ಕಳೆದ ಭಾರಿ ಮೂರು ದಿನ ಮಳೆ ಆಗಿದ್ದ ವೇಳೆ ನಗರದ ಜನಜೀವನ ಅಸ್ತವ್ಯಸ್ತವಾಗಿತ್ತು. ವಾಟಾರ್‌ಲಾಗಿಂಗ್ ಸಮಸ್ಯೆಯಿಂದ ಜನರು, ವಾಹನ ಸವಾರರು ಹೈರಾಣಾಗಿದ್ದರು. ಸದ್ಯ ಸಿಕ್ಕಿರುವ ಭಾರೀ ಮಳೆ ಎಚ್ಚರಿಕೆಯಿಂದಾಗಿ ಈಗಲೂ ಅಂತದ್ದೇ ಪ್ರವಾಹ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಈಗಾಗಲೇ ಬೆಳಗ್ಗೆ ಮತ್ತು ರಾತ್ರಿಯಿಡೀ ಚಳಿಯ ವಾತಾವರಣ ಕಂಡು ಬರುತ್ತಿದೆ. ಇನ್ನೂ ಭಾರೀ ಮಳೆ ಸುರಿಯಲಾರಂಭಿಸಿದರೆ ಮತ್ತಷ್ಟು ಅನಾರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ಜನರಲ್ಲಿ ಕಾಡುತ್ತಿದೆ.

70ರಿಂದ 110 ಮಿಲಿ ಭಾರೀ ಮಳೆ

ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಡಿಸೆಂಬರ್ ಮೊದಲ ದಿನವೇ ಇನ್ನಿಲ್ಲದಂತೆ ಮಳೆ ಸುರಿಯುತ್ತದೆ. ಸುಮಾರು 70 ಮಿಲಿ ಮೀಟರ್‌ನಿಂದ 110 ಮಿಲಿ ಮೀಟರ್‌ವರೆಗೆ ಧಾರಾಕಾರ ಮಳೆಯ ಸಂಭವವಿದೆ ಎಂದು ಐಎಂಡಿ ಮುನ್ಸೂಚನೆ ತಿಳಿಸಿದೆ.

Bengaluru to Experiance Heavy Rainfall on Dec 1st Due Cyclone Fengal

ಬೆಂಗಳೂರಿನಲ್ಲಿ ಡಿಸೆಂಬರ್ 1ರವರೆಗೆ ಅಂದರೆ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಲಘು ಇಲ್ಲವೇ ಹಗುರ ಮಳೆ ಬರಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಇನ್ನೂ ನಗರದಲ್ಲಿ ಗರಿಷ್ಠ 26 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಬಹುದು ಎನ್ನಲಾಗಿದೆ.

ಡಿಸೆಂಬರ್ 2ರ ನಂತರ ನಗರದ ಸ್ಥಿತಿ!

ಒಂದು ವೇಳೆ ಚಂಡಮಾರುತದ ಪ್ರಭಾವ ಬೆಂಗಳೂರಿನ ಮೇಲೆ ಮುಂದುವರಿದರೆ, ಡಿಸೆಂಬರ್ 2ರಿಂದಲೂ ಮತ್ತೆ ವ್ಯಾಪಕ ಮಳೆ ಮುಂದುವರಿಬಹುದು. ಚಂಡಮಾರುತ ಫೆಂಗಲ್ ತೀವ್ರತೆ ಹೆಚ್ಚಾದಲ್ಲಿ ಮುಂದಿನ ಒಂದು ವಾರವು ಬೆಂಗಳೂರು ಭಾರೀ ಮಳೆ, ಮೈಕೊರೆವ ಚಳಿ ಎದುರಿಸಲೂಹುದು ಎಂದು ಹೇಳಲಾಗಿದೆ.

2 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಇನ್ನೂ ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭಾರೀ ಮಳೆ ಪ್ರಯುಕ್ತ 'ಆರೆಂಜ್ ಅಲರ್ಟ್' ನೀಡಲಾಗಿದೆ. ಉಳಿದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಡಿಸೆಂಬರ್ 1 ಮತ್ತು 2ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+