ಒಂದೆರೆಡು ದಿನಗಳಲ್ಲಿ 37 ಡಿಗ್ರಿಗೆ ಏರಲಿದೆ ಬೆಂಗಳೂರಿನ ಗರಿಷ್ಠ ತಾಪಮಾನ
ಬೆಂಗಳೂರು, ಮಾರ್ಚ್ 25: ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಗರಿಷ್ಠ ಉಷ್ಣಾಂಶ ಏರುತ್ತಿದೆ. ಬೆಂಗಳೂರಿನಲ್ಲಿ ಇನ್ನು ಒಂದೆರೆಡು ದಿನಗಳಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್‌ಗೆ ಏರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾನುವಾರದಂದು ತುಮಕೂರು, ಕೊಡಗು, ಚಿತ್ರದುರ್ಗ ಇನ್ನು ಹಲವೆಡೆ ಸಣ್ಣ ಪ್ರಮಾಣದ ಮಳೆಯಾಗಿದೆ. ಆದರೆ ಆ ಮಳೆ ಬೆಂಗಳೂರಿನ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.
ಇದರಿಂದ ಬೆಂಗಳೂರಲ್ಲಿ ತಾಪಮಾನ ಸ್ವಲ್ಪ ಕಡಿಮೆಯಾದಂತೆ ಕಂಡರೂ ಕೆಲವೇ ದಿನಗಳಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಬೆಂಗಳೂರು ಕೇಂದ್ರ ಭಾಗ, ಎಚ್‌ಎಎಲ್ ಹಾಗೂ ಕೆಐಎನಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಒಣಹವೆ ಮುಂದುವರೆಯಲಿದೆ. ಕೆಲವು ಭಾಗಗಳಲ್ಲಿ ಹಿಂದೆದೂ ಕಾಣದ ಗರಿಷ್ಠ ತಾಪಮಾನವನ್ನು ತಲುಪಿದೆ. ಕೊಪ್ಪಳ 40 ಡಿಗ್ರಿ ಸೆಲ್ಸಿಯಸ್ 2017ರ ಮಾರ್ಚ್ 30-31 ರಂದು 39 ಡಿಗ್ರಿ ದಾಖಲಾಗಿತ್ತು. ಕಲಬುರಗಿಯಲ್ಲಿ 41.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.












Click it and Unblock the Notifications