Bengaluru: ಬೆಂಗಳೂರಿನಿಂದ ಕಾಣೆಯಾಗಿದ್ದ ಟೆಕ್ಕಿ ನೊಯ್ಡಾದಲ್ಲಿ ಪತ್ತೆ; ಕಥೆಗೆ ರೋಚಕ ಟ್ವಿಸ್ಟ್!
ಬೆಂಗಳೂರಿನ ಮಹಿಳೆಯೊಬ್ಬರು ಕಾಣೆಯಾಗಿರು ಪತಿಯನ್ನು ಹುಡುಕಿಕೊಡುವಂತೆ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಕಾಣೆಯಾಗಿದ್ದ ಪತಿ ವಿಪಿನ್ ಗುಪ್ತಾ ನೊಯ್ಡಾದ ಮಾಲ್ ಒಂದರಲ್ಲಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ಪೊಲೀಸರು ಕಾಣೆಯಾದ ಟೆಕ್ಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಪಿನ್ ಗುಪ್ತಾರನ್ನು ಯಾರು ಕಿಡ್ನಾಪ್ ಮಾಡಿಲ್ಲ ಬದಲಾಗಿ ಅವರೇ ಬೇಸತ್ತು ಮನೆ ಬಿಟ್ಟುಹೋಗಿದ್ದಾರೆ ಎನ್ನಲಾಗಿದೆ.
ತಮ್ಮ ಪತಿ ಕಾಣೆಯಾಗಿದ್ದಾರೆ ಎಂದು ಶ್ರೀಪರ್ಣಾ ದತ್ತಾ ಎನ್ನುವವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಪತಿಯನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ, ನನಗೆ ಹಣ ಕೊಡುವಂತೆ ಕರೆಗಳು ಕೂಡ ಬಂದಿವೆ ಎಂದು ಹೇಳಿದ್ದರು. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಇದೀಗ ಪೊಲೀಸರು ಕಾಣೆಯಾಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪತಿಯನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಆದರೆ ವಿಪಿನ್ ಗುಪ್ತಾ ಮಾತ್ರ ತನ್ನನ್ನು ಜೈಲಿಗೆ ಹಾಕಿದರೂ ಮನೆಗೆ ಹೋಗಲ್ಲ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ, ತಾನೇ ಮನೆ ಬಿಟ್ಟು ಹೋಗಿದ್ದೇನೆ ಪತ್ನಿಯಿಂದ ತನಗೆ ಮಾನಸಿಕ ಕಿರುಕುಳ ಇದೆ ಎಂದು ಆರೋಪಿಸಿದ್ದಾರೆ.
ಪೊಲೀಸರ ಮುಂದೆ ಆರೋಪಿ ಅಳಲು
ವಿಪಿನ್ ಗುಪ್ತಾ ಅವರ ವಯಸ್ಸು 34 ವರ್ಷ ಆದರೆ ಆತನ ಪತ್ನಿ ಶ್ರೀಪರ್ಣಾ ದತ್ತಾ ವಯಸ್ಸು 42 ವರ್ಷ. ಪತಿಯನ್ನು ಶ್ರೀಪರ್ಣಾ ಸಿಕ್ಕಾಪಟ್ಟೆ ಕಂಟ್ರೋಲ್ ಮಾಡುತ್ತಿದ್ದರು ಎನ್ನಲಾಗಿದೆ. ಪತಿಯ ಮೇಲಿನ ಅನುಮಾನದಿಂದ ಮನೆಗೆ ಸಿಸಿಟಿವಿ ಕೂಡ ಹಾಕಿಸಿದ್ದರು. ಪತ್ನಿ ನಡೆಯಿಂದ ಬೇಸತ್ತಿದ್ದ ವಿಪಿನ್ ಗುಪ್ತಾ ಮನೆ ಬಿಟ್ಟು ಹೋಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮಹಿಳೆ ಹೈಡ್ರಾಮಾ?
ಲಕ್ನೋ ಮೂಲಕ ಟೆಕ್ಕಿ ಕೊಡಿಗೇಹಳ್ಳಿಯ ಟಾಟಾ ನಗರದಲ್ಲಿ ಪತ್ನಿ, ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಆಗಸ್ಟ್ 4ರಂದು ಮನೆಯಿಂದ ಹೊರಟ ಕೆಲವು ಕ್ಷಣಗಳಲ್ಲಿ ಅವರ ಅಕೌಂಟ್‌ನಿಂದ 1.80 ಲಕ್ಷ ರೂಪಾಯಿ ಡ್ರಾ ಮಾಡಿದ್ದರು ಇದು ಪತ್ನಿಯ ಆತಂಕಕ್ಕೆ ಕಾರಣವಾಗಿತ್ತು. ತನ್ನ ಗಂಡನನ್ನು ಹುಡುಕಿಕೊಡಿ, ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿದ್ದರು. ಗೃಹ ಸಚಿವ ಪರಮೇಶ್ವರ, ಪ್ರಧಾನಿ ಮಂತ್ರಿಯನ್ನು ಕೂಡ ಅವರು ಟ್ಯಾಗ್ ಮಾಡಿದ್ದರು.












Click it and Unblock the Notifications