Rain Alert: ವೀಕೆಂಡ್ ಮೋಜಿಗೆ ಬ್ರೇಕ್ ಹಾಕಿದ ತುಂತುರು ಮಳೆ! ಬೆಂಗಳೂರು ಹವಾಮಾನ ಮುನ್ಸೂಚನೆ

ಬೆಂಗಳೂರು, ಜುಲೈ 06: ಕರ್ನಾಟಕದಾದ್ಯಂತ ಮುಂದುವರಿದ ಮುಂಗಾರು ಮಳೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನವೇ ಜಿಟಿ ಜಿಟಿ ಮಳೆ ಸುರಿದಿದೆ. ಇಂದು ರಾತ್ರಿ ಸಹ ವ್ಯಾಪಕ ಮಳೆ ಸುರಿಯುವ ಎಲ್ಲ ಲಕ್ಷಣಗಳು ಇವೆ. ಇಂದು ಕೆಲ ಕಾಳ ಬಿಸಿಲಿನ ದರ್ಶನವಾದರು ಸಹಿತ ಮಬ್ಬು ಕವಿದ ವಾತಾವರಣ ಕಂಡು ಬಂದಿದೆ. ನಗರದ ಒಟ್ಟು ಸುಮಾರು 81 ವಾರ್ಡ್‌ಗಳಲ್ಲಿ ಮಧ್ಯಾಹ್ನ ಮಳೆ ಆಗಿದ್ದು, ವೀಕೆಂಡ್ ಜನರ ಮೋಜು, ಮಸ್ತಿಗೆ ಮಳೆ ಬ್ರೇಕ್ ಹಾಕಿದೆ.

ರಾಜ್ಯದ ಮಲೆನಾಡು, ಕರಾವಳಿ ಭಾಗಕ್ಕೆ ಮಳೆ ಕಡಿಮೆ ಆಗಿದ್ದು, ಬೆಂಗಳೂರಿಗೆ ವಿಸ್ತರಣೆ ಆಗಿದೆ. ಬದಲಾದ ಹವಾಮಾನ ವೈಪರೀತ್ಯದಿಂದ ಇಷ್ಟು ದಿನ ಸುರಿದಿದ್ದ ಮಳೆಗೆ ಬ್ರೇಕ್ ಬಿದ್ದಿದೆ. ಬೆಂಗಳೂರಿನಲ್ಲಿ ತುಂತುರು ಮಳೆ ಮುಂದುವರಿದಿದೆ. ಇಂದು ಜಕ್ಕೂರು, ಚೌಡೇಶ್ವರಿ ನಗರ, ವಿಜ್ಞಾನ ನಗರ, ಆಗರ, ಎಚ್‌ಎಸ್‌ಆರ್ ಬಡಾವಣೆ, ಕೋರಮಂಗಳ, ಆರ್‌ಆರ್ ನಗರ, ಸಂಕೇನಹಳ್ಳಿ, ಸಂಪಂಗಿರಾಮನಗರ, ರಾಜಗೋಪಾಲನಗರ, ಕೆ.ಆರ್‌.ಪುರಂ, ಕೊಡುಗೆಹಳ್ಳಿ, ಬಾಣಸವಾಡಿ, ಜ್ಞಾನಭಾರತಿ, ಹೆಮ್ಮಿಗೆ ಪುರ ಸೇರಿದಂತೆ ಹತ್ತಾರು ಬಡಾವಣೆಗಳಲ್ಲಿ ಹಗುರ ಮಳೆ ಆಗಿದೆ. ಇಂದು ತಡರಾತ್ರಿವರೆಗೆ ಕೆಲವೆಡೆ ಜಿಟಿಜಿಟಿ, ಇನ್ನು ಒಂದೆರಡು ಕಡೆಗಳಲ್ಲಿ ಜೋರು ಮಳೆ ಆಗುವ ನಿರೀಕ್ಷೆ ಇದೆ.

Bengaluru Sunday Face Light Rain in 81 wards Rain Will Continue until next 48 hours

ಬೆಂಗಳೂರು ಹವಾಮಾನ, ಮಳೆ ಮುನ್ಸೂಚನೆ

ಮುಂದಿನ ಎರಡು ದಿನಗಳ ಕಾಲ ನಗರದಲ್ಲಿ ಇದೇ ರೀತಿ ತಂಪು ವಾತಾವರಣ, ತುಂತುರು ಮಳೆಯಾಗುವ ಎಲ್ಲ ಸಾಧ್ಯತೆ ಇದೆ. ತಂಪು ಗಾಳಿ ಬೀಸಲಿದ್ದು, ಅಲ್ಲಲ್ಲಿ ಲಘು ಮಳೆ, ಇಲ್ಲವೇ ಹಗುರದಿಂದ ಸಾಮಾನ್ಯ ಮಳೆ ಆಗುವ ಮುನ್ಸೂಚನೆ ಇದೆ. ತಾಪಮಾನ ಕನಿಷ್ಠ 21 ಹಾಗೂ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ. ಇದರ ಹೊರತು ಬೆಂಗಳೂರಿಗೆ ಜೋರು ಮಳೆ, ಭಾರೀ ಮಳೆಯ ಲಕ್ಷಣ ಸದ್ಯಕ್ಕೆ ಇಲ್ಲ ಎಂದು ಹವಾಮಾನ ತಜ್ಞರು ಭಾನುವಾರ ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯ ಲಕ್ಷಣ..

ಸದ್ಯದ ಮಾಹಿತಿ ಪ್ರಕಾರ, ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ ಯಾವುದೇ ತೀವ್ರ ಸ್ವರೂಪದ ವೈಪರೀತ್ಯ, ಚಂಡಮಾರುತ ಪ್ರಸರಣ, ವಾಯುಭಾರ ಕುಸಿತಗಳು ಸಂಭವಿಸಿಲ್ಲ. ಅದರಲ್ಲೂ ದಕ್ಷಿಣ ಭಾರತದ ಯಾವೊಂದು ರಾಜ್ಯಗಳ ಮೇಲೆ ವಿಪರೀತ ಮಳೆ ಅಬ್ಬರದ ಗುಣಲಕ್ಷಣಗಳು ಇಲ್ಲ ಎಂದು ಐಎಂಡಿ ವರದಿ ತಿಳಿಸಿದೆ.

ಕೇರಳ, ಪಶ್ಚಿಮ ಘಟ್ಟಗಳು, ಮಲೆನಾಡು ಭಾಗದಲ್ಲಿ ಈವರೆಗೆ ಸುರಿದ ನಿರಂತರ ಉತ್ತಮ ಮಳೆಯಿಂದಾಗಿ ಕಾವೇರಿ, ಕಬಿನಿ, ಹಾರಂಗಿ, ಹೇಮಾವತಿ, ಭದ್ರ, ಕದ್ರಾ ಜಲಾಶಯಗಳು ತುಂಬಿ ಹರಿಯುತ್ತಿದೆ. ಆಯಾ ನದಿಗಳಿಗೆ ಅಡ್ಡಲಾಗಿ ಕಟ್ಟಲಾದ ಜಲಾಶಯಗಳು ಭರ್ತಿಯಾಗಿವೆ. ಒಳ ಮತ್ತು ಹೊರ ಹರಿವು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+