Bengaluru Suburban Rail Project: ಯೋಜನೆಯ ವೇಗ ಹೆಚ್ಚಿಸಲಿರುವ 'ತ್ರಿಪಕ್ಷೀಯ ಒಪ್ಪಂದ'ಕ್ಕೆ ಸಹಿ, ಏನಿದು? ಮಾಹಿತಿ, ವಿವರ
ಬೆಂಗಳೂರು, ನವೆಂಬರ್ 16: ವಿವಿಧ ಹಂತಗಳಲ್ಲಿ ರೂಪಿಸಲಾಗಿರುವ ಬೆಂಗಳೂರು ಉಪನಗರ ರೈಲು ಯೋಜನೆಗೆ (BSRP) ಮತ್ತುಷ್ಟು ವೇಗ ಸಿಗಲಿದೆ. ಯೋಜನೆ ಕಾರ್ಯಗತಗೊಳಿಸುವ ಸಂಬಂಧ ತ್ರಿಪಕ್ಷೀಯ ಒಪ್ಪಂದ ಏರ್ಪಟ್ಟಿದೆ. ಒಪ್ಪಂದ ಮಾಡಿಕೊಂಡ ಸಂಸ್ಥೆ, ಇಲಾಖೆಗಳು, ಪ್ರಯೋಜನ ಕುರಿತು ಇಲ್ಲಿದೆ ಮಾಹಿತಿ.
ಬೆಂಗಳೂರು ಉಪನಗರ ರೈಲು ಯೋಜನೆ ಕುರಿತು ಕೇಂದ್ರ ರೈಲ್ವೆ ಸಚಿವಾಲಯ, ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (K-RIDE) ಮತ್ತು ಕರ್ನಾಟಕ ಸರ್ಕಾರ ಈ ತ್ರೀಪಕ್ಷೀಯ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದವು ಎಂದು ಪ್ರಜಾವಾಣಿ ವರದಿ ಮಾಡಿದೆ.

ಹಣಕಾಸು ವಿಚಾರವಾಗಿ ಯೋಜನೆ ಕೈಗೆತ್ತಿಕೊಳ್ಳಲು ಈ ತ್ರಿಪಕ್ಷೀಯ ಒಪ್ಪಂದ ಹೆಚ್ಚು ಸಹಾಯಕ್ಕೆ ಬರಲಿದೆ. ಸದ್ಯ ಈ ಒಪ್ಪಂದ ಮೂಲಕ ಯೋಜನೆಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಕೈ ರೈಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐದು ವರ್ಷಗಳ ಹಿಂದೆ (2018) ರಾಷ್ಟ್ರಿಯ ಉಪನಗರ ರೈಲು ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂತು. ಅದಾದ ಬಳಿಕ ಬೆಂಗಳೂರು ಉಪನಗರ ರೈಲು ಯೋಜನೆ (BSRP) ದೇಶದ ಮೊದಲ ಯೋಜನೆಯಾಗಿ ರೂಪಿಸಲಾಯಿತು. ಕಳೆದ ವರ್ಷ ಈ ಯೋಜನೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದರು. ಒಟ್ಟು ನಾಲ್ಕು ಹಂತಗಳಲ್ಲಿ (ಕಾರಿಡಾರ್) ಈಗಾಗಲೇ ಎರಡನೇ ಕಾರಿಡಾರ್ ಆರಂಭಕ್ಕೆ ಚಾಲನೆ ಸಿಕ್ಕಿದೆ.
2025ರಲ್ಲಿ ಕಾರಿಡಾರ್ ಪೂರ್ಣ
ಒಟ್ಟು ನಾಲ್ಕು ಕಾರಿಡಾರ್ ಗಳಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಪೂರ್ಣಗೊಳ್ಳಿದೆ. ಈ ಪೈಕಿ 202ರಲ್ಲಿ ಚುರುಕುಗೊಂಡಿದ್ದ ಬೈಯಪ್ಪನಹಳ್ಳಿ ಚಿಕ್ಕಬಾಣಾವರವರೆಗಿನ ಕಾರಿಡರ್ 2 ಯೋಜನೆಯಲ್ಲಿ ಒಟ್ಟು ಶೇಕಡಾ 8ರಷ್ಟು ಕಾರ್ಯ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಕೆಲಸ ಭರದಿಂದ ಸಾಗಿದೆ.

ಈ ಕಾರಿಡಾರ್ 2025ರ ಹೊತ್ತಿಗೆ ಪೂರ್ಣಗೊಳ್ಳುವ ನೀರಿಕ್ಷೆ ಇದೆ. ಇದಕ್ಕೆ ಸಂಬಂಧ ರೈಲ್ವೆ ಇಲಾಖೆ ಡಿಪಿಆರ್ ಮಾಡಿ ಅದನ್ನು ಕರ್ನಾಟಕ ರೈಲ್ವೆ ಮೂಲಸೌಕರ್ಯ ನಿಯಮಿತ (K-RIDE)ಗೆ ನೀಡಲಾಯಿತು. ಸದ್ಯ ಖಾಸಗಿ ಕಂಪನಿಯು ಮುಂದಿನ ಎರಡು ವರ್ಷದಲ್ಲಿ ಯೋಜನೆ ಮುಗಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಟ್ರಾಫಿಕ್ ಇಳಿಕೆ, ಹೊರ ಪ್ರದೇಶಗಳಿಗೆ ಸಂಪರ್ಕ
ಕಂಗೇರಿಯಿಂದ-ವೈಟ್‌ಫಿಲ್ಡ್‌ವರೆಗೆ ಉಪನಗರ ರೈಲು ಯೋಜನೆ ಕಾರಿಡಾರ್ -3 ಆದರೆ, ಹೀಲಲಿಗೆ-ರಾಜಾನುಕುಂಟೆ ವರೆಗಿನ ಯೋಜನೆಗೆ ಕಾರಿಡಾರ್ 4 ಎಂದು ವಿಂಗಡಿಸಲಾಗಿದೆ. ಈ ಯೋಜನೆಯಿಂದ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕುವ ಜೊತೆಗೆ ಬೆಂಗಳೂರು ಸುತ್ತಲಿನ ಪ್ರದೇಶಗಳಿಗೆ ಸಂಪರ್ಕ ಸಾಧಿಸುವ ಉದ್ದೇಶ ಹೊಂದಲಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆ ಜೊತೆಗೆ ಬೆಂಗಳೂರು ಸುತ್ತಲೂ ವೃತ್ತಾಕಾರ (ಸರ್ಕುಲರ್) ರೈಲ್ವೆ ಯೋಜನೆ ಇತ್ತೀಚೆಗೆ ಘೋಷಣೆ ಆಗಿದೆ. ಅದರ ಸ್ಥಳ ಸಮೀಕ್ಷೆ ನಡೆಸಬೇಕಿದೆ. ಇದು ಒಟ್ಟು 287 ಕಿಲೋ ಮಿಟರ್ ವ್ಯಾಪ್ತಿಯಲ್ಲಿ ನಡೆಸಲು ಚಿಂತನೆ ಇದೆ. ಈ ಸಂಬಂಧ ಪ್ರಸ್ತಾವ ಸಲ್ಲಿಕೆ ಆಗಿದೆ.












Click it and Unblock the Notifications