Bengaluru Rail Project: ಉಪನಗರ ರೈಲು ಕಾರಿಡಾರ್-3 'ಪಾರಿಜಾತ'ಗೆ ಅನುಮೋದನೆ, ವೈಟ್ಫಿಲ್ಡ್-ಕೆಂಗೇರಿಗೆ ಸಂಪರ್ಕ
ಬೆಂಗಳೂರು: ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಎರಡು ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಮೂರನೇ ಕಾರಿಡಾರ್ 'ಪಾರಿಜಾತ'ಗೆ ಜೋಡಣೆ ಅನುಮೋದನೆ ನೀಡಲಾಗಿದೆ. ಆದರೆ ಈ ಮಾರ್ಗವು ಕಂಟೋನ್ಮೆಂಟ್ ನಿಂದ ವೈಟ್ಫೀಲ್ಡ್ ವಿಭಾಗವನ್ನು ಹೇಗೆ ಸಂಪರ್ಕಿಸುತ್ತದೆ ಎಂಬುದರ ಸ್ಪಷ್ಟತೆ ಇಲ್ಲ. ಇತ್ತೀಚೆಗೆ ಕೆಂದ್ರ ಬಜೆಟ್ 2026ನಲ್ಲಿ ಈ ಬಿಎಸ್ಆರ್ಪಿಗೆ 500 ಕೋಟಿ ರೂಪಾಯಿ ಅನುದಾನ ಘೋಷಣೆ ಆಗಿದೆ.
'ಪಾರಿಜಾತ' ಮಾರ್ಗ ಎಂದೂ ಕರೆಯಲಾಗುವ ಈ ಮಾರ್ಗವು 35.52 ಕಿಲೋ ಮೀಟರ್ ಇದೆ. ಕೆಂಗೇರಿಯಿಂದ ಕೆಎಸ್ಆರ್ ಬೆಂಗಳೂರು, ಕಂಟೋನ್ಮೆಂಟ್ ಮೂಲಕ ವೈಟ್ಫೀಲ್ಡ್ ಸಂಪರ್ಕಿಸಲು ಯೋಜಿಸಲಾಗಿದೆ. ಈ ಕಾರಿಡಾರ್ ವಿವರವಾದ ಯೋಜನಾ ವರದಿಯಲ್ಲಿ (ಡಿಪಿಆರ್) 18.47 ಕಿಲೋ ಮೀಟರ್ ಕೆಂಗೇರಿ-ಕಂಟೋನ್ಮೆಂಟ್ ಮಾರ್ಗವನ್ನು ಮಾತ್ರ ಪರಿಶೀಲನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಡಿಪಿಆರ್ ಪ್ರಕಾರ 10.4 ಕಿ.ಮೀ.ನಲ್ಲಿ ಎತ್ತರಿಸಿದ ಮಾರ್ಗ, 8.07 ಕಿ.ಮೀ. (ಟನಲ್) ಗ್ರೇಡ್ನಲ್ಲಿರುತ್ತದೆ ಎಂದು ಹೇಳಲಾಗಿದೆ.

ಬಾಕಿ 17.05 ಕಿ.ಮೀ. ಕಂಟೋನ್ಮೆಂಟ್-ವೈಟ್ಫೀಲ್ಡ್ ವಿಭಾಗವನ್ನು ಭಾರತೀಯ ರೈಲ್ವೆಯ ನಡೆಯುತ್ತಿರುವ ಚತುಷ್ಪಥ (ನಾಲ್ಕು-ಪಥ) ಕೆಲಸಗಳಿಂದಾಗಿ ಹೊರಗಿಡಲಾಗಿದೆ. ಭೂಮಿ ಲಭ್ಯತೆಯು ಮೀಸಲಾದ ಉಪನಗರ ಹಳಿಗಳನ್ನು ನಿರ್ಮಿಸಲು ಕಷ್ಟವಾಗಿದೆ ಎಂದು ಡಿಪಿಆರ್ನಲ್ಲಿ ತಿಳಿಸಲಾಗಿದೆ. ಕಂಟೋನ್ಮೆಂಟ್ನಲ್ಲಿ ಉಪನಗರ ರೈಲು ಮಾರ್ಗಗಳು ವಿಲೀನಗೊಳ್ಳುತ್ತವೆ. ಗಮನಿಸಬೇಕಾದ ವಿಷಯವೆಂದರೆ ನೈಋತ್ಯ ರೈಲ್ವೆ (SWR) ಈ ಕಾರಿಡಾರ್ನಲ್ಲಿ ಕಂಟೋನ್ಮೆಂಟ್-ವೈಟ್ಫೀಲ್ಡ್ ವಿಭಾಗ ಕೈ ಬಿಟ್ಟಿರುವುದಾಗಿ ಡಿಪಿಆರ್ನಲ್ಲಿದೆ. ಇದೆಲ್ಲ ನೋಡಿದಾಗ ಯೋಜನೆ ಕುರಿತು ಇನ್ನಷ್ಟು ಸ್ಪಷ್ಟತೆ ದೊರೆಯಬೇಕಿದೆ.
ಬಿಎಸ್ಆರ್ಪಿ ರೈಲುಗಳಿಗೆ ಸಿಗ್ನಲಿಂಗ್ ವ್ಯವಸ್ಥೆ
ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಅನ್ನು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಕರ್ನಾಟಕ (K-RIDE) ಜಾರಿಗೆ ತರುತ್ತಿದೆ. ಭಾರತೀಯ ರೈಲ್ವೆ ಹಳಿಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಕಾರ್ಯಾಚರಣಾ ಸಮಸ್ಯೆಗಳನ್ನು ಪರಿಹರಿಸಲು ಸಿಗ್ನಲಿಂಗ್ ವ್ಯವಸ್ಥೆ ಬದಲಾಯಿಸುವ ಬಗ್ಗೆ ಕಂಪನಿ ಒಲವು ವ್ಯಕ್ತಪಡಿಸಿದೆ. ಏಕೆಂದರೆ ಭಾರತೀಯ ರೈಲುಗಳು ಸ್ವಯಂಚಾಲಿತ ಬ್ಲಾಕ್ ಸಿಗ್ನಲಿಂಗ್ ಬಳಸುತ್ತಿವೆ. ಬೆಂಗಳೂರು ಉಪನಗರ ರೈಲುಗಳು ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ವ್ಯವಸ್ಥೆಯಡಿ ಕಾರ್ಯಾಚರಣೆ ಆಗುತ್ತಿವೆ.
ಎಂಡ್-ಟು-ಎಂಡ್ ರೈಲು ಸೇವೆ: ಕೆ-ರೈಡ್
ಕೆಂಗೇರಿ ಮತ್ತು ವೈಟ್ಫೀಲ್ಡ್ ಮಧ್ಯ ಎಂಡ್-ಟು-ಎಂಡ್ ರೈಲು ಸೇವೆಗಳ ಕಾರ್ಯಾಚರಣೆಗೆ ಪ್ಲಾನ್ ಮಾಡಿದ್ದೇವೆ. ಕಂಟೋನ್ಮೆಂಟ್ನಲ್ಲಿ ಉಪನಗರ ಸೇವೆ ಕೊನೆಗೊಳಿಸುವುದನ್ನು ಮತ್ತು ವೈಟ್ಫೀಲ್ಡ್ಗೆ ಮುಂದಿನ ಪ್ರಯಾಣಕ್ಕಾಗಿ ಮೆಮು ರೈಲು ಕಾರ್ಯಾಚರಣೆ ಬಗ್ಗೆ ಯೋಚಿಸಿದ್ದೇವೆ ಎಂದು ಕೆ-ರೈಡ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಂಟೋನ್ಮೆಂಟ್ ನಂತರದ ಹೊರಗಿನ ಮಾರ್ಗದಲ್ಲಿನ ಚತುಷ್ಪಥ ನಿರ್ಮಾಣಕ್ಕೆ ಭೂಮಿ ಲಭ್ಯವಿಲ್ಲ. ಆ ನಿಲ್ದಾಣವರೆಗಿನ ಚತುಷ್ಪಥ ಮಾರ್ಗ ನಿರ್ಮಾಣ ಯೋಜನೆಯು ಡಿಸೆಂಬರ್ 2026 ರೊಳಗೆ ಪೂರ್ಣಗೊಳ್ಳಲಿದೆ. ವೈಟ್ಫೀಲ್ಡ್ನಿಂದ ಮೆಮು ರೈಲು ಓಡಾಟದ ಆಯ್ಕೆ ಉತ್ತಮವಾಗಿದೆ. ಬಿಎಸ್ಆರ್ಪಿಯ ಎತ್ತರದ ನಿಲ್ದಾಣವು ಈ ಟರ್ಮಿನಲ್ನಿಂದ ಸ್ವಲ್ಪ ದೂರದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ. ಮುಂದೆ ತಾಂತ್ರಿಕ ಮೌಲ್ಯಮಾಪನದ ನಂತರ ಕಂಟೋನ್ಮೆಂಟ್-ವೈಟ್ಫೀಲ್ಡ್ ಸಂಪರ್ಕದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರು ಡಿಚ್ಗೆ ತಿಳಿಸಿದ್ದಾರೆ.
ಸದ್ಯ ಅನುಮೋದನೆ ಪಡೆದ "ಕೆಂಗೇರಿ-ಕಂಟೋನ್ಮೆಂಟ್' ಉಪನಗರ ಕಾರಿಡಾರ್ಗೆ ಯೋಜನೆ ಆರಂಭಕ್ಕೆ ಭೂಮಿ ಮೌಲ್ಯಮಾಪನ ನಡೆಸಲಾಗುತ್ತಿದೆ. ಶೀಘ್ರವೇ ಟೆಂಡರ್ ಆಹ್ವಾನಿಸಲಾಗುತ್ತದೆ. ಈ ಯೋಜನೆ ಪೂರ್ಣಗೊಳ್ಳಲು ಮಾರ್ಚ್ 2030ರ ಗುಡುವು ನೀಡಲಾಗಿದೆ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್ಸೈಟ್ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್ಬುಕ್ ಮತ್ತು ಟ್ವಿಟರ್ನಲ್ಲೂ ಮೈಖೇಲ್ ಫಾಲೊ ಮಾಡಿ.
-
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ












Click it and Unblock the Notifications