Greater Bengaluru Authority: ಅಪಾಯಕಾರಿ ಮರ-ಕೊಂಬೆಗಳ ತೆರವು ಚುರುಕು – ಸಾರ್ವಜನಿಕ ಸುರಕ್ಷತೆಗೆ ಆದ್ಯತೆ
Greater Bengaluru Authority: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಣಗಿದ ಹಾಗೂ ಅಪಾಯಕಾರಿ ಮರ/ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಕೆಲಸ ವೇಗವಾಗಿ ನಡೆಯುತ್ತಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿ ಹಾಗೂ ಸರ್ಕಾರಿ ಜಾಗಗಳಲ್ಲಿ ಇರುವ ಒಣಗಿದ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಮತ್ತು ರೆಂಬೆ-ಕೊಂಬೆಗಳನ್ನು ಗುರುತಿಸಿ, ಸಾರ್ವಜನಿಕರ ಜೀವ ಹಾಗೂ ಆಸ್ತಿ ಸುರಕ್ಷತೆಯ ದೃಷ್ಟಿಯಿಂದ ತೆರವುಗೊಳಿಸುವ ಕಾರ್ಯವನ್ನು ನಗರ ಪಾಲಿಕೆಯ ಅರಣ್ಯ ವಿಭಾಗದಿಂದ ಚುರುಕುಗೊಳಿಸಲಾಗಿದೆ ಎಂದು ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಅಕಾಲಿಕ ಮಳೆ ಹಾಗೂ ಗಾಳಿಯಿಂದ ಮರಗಳು ಮತ್ತು ರೆಂಬೆ-ಕೊಂಬೆಗಳು ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆಯನ್ನು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ತೆರವುಗೊಳಿಸಿದ ವಿವರಗಳು
(02.09.2025 ರಿಂದ 31.03.2026ರವರೆಗೆ):
ವಲಯ-1 (ಬ್ಯಾಟರಾಯನಪುರ, ಸರ್ವಜ್ಞನಗರ, ಪುಲಕೇಶಿನಗರ)
* ಅಪಾಯಕಾರಿ ಮರಗಳು - 86
* ಅಪಾಯಕಾರಿ ರೆಂಬೆ-ಕೊಂಬೆಗಳು - 1315
ವಲಯ-2 (ಯಲಹಂಕ, ಹೆಬ್ಬಾಳ, ದಾಸರಹಳ್ಳಿ ಭಾಗಶಃ, ರಾಜರಾಜೇಶ್ವರಿ ಭಾಗಶಃ)
* ಅಪಾಯಕಾರಿ ಮರಗಳು - 97
* ಅಪಾಯಕಾರಿ ರೆಂಬೆ-ಕೊಂಬೆಗಳು - 1193
ಒಟ್ಟು:
* ಅಪಾಯಕಾರಿ ಮರಗಳು - 183
* ಅಪಾಯಕಾರಿ ರೆಂಬೆ-ಕೊಂಬೆಗಳು - 2508
ನಗರದಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಲು ಈ ಕಾರ್ಯಾಚರಣೆಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ಮುಂದುವರೆದ ಅವಧಿಯಲ್ಲಿಯೂ ಪರಿಶೀಲನೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣಗಿದ ಅಥವಾ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ರೆಂಬೆ-ಕೊಂಬೆಗಳು ಕಂಡುಬಂದಲ್ಲಿ, ಸಾರ್ವಜನಿಕರು ಕೆಳಗಿನ ಸಹಾಯವಾಣಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪಾಲಿಕೆ ಮನವಿ ಮಾಡಿದೆ.
📞 ಸಹಾಯವಾಣಿ: 1533 / 9480685705
📲 ವಾಟ್ಸ್‌ಆಪ್ ಮೂಲಕ ಜಿಪಿಎಸ್ ಫೋಟೋ ಸಹಿತ ಮಾಹಿತಿ ಕಳುಹಿಸಬಹುದು












Click it and Unblock the Notifications