ಬೆಂಗಳೂರು : ಯುವತಿ ಮೇಲೆ ಎಳನೀರು ಎಸೆದ ಪುಂಡರು
ಬೆಂಗಳೂರು, ಅಕ್ಟೋಬರ್. 27: ಜಿಮ್ ಗೆ ತೆರಳುತ್ತಿದ್ದ ಯುವತಿಯ ಮೇಲೆ ಎಳನೀರು ಎಸೆದು ಅಶ್ಲೀಲ ಪದಗಳನ್ನು ಪ್ರಯೋಗಿಸಿದ ಇಬ್ಬರ ಮೇಲೆ ಯುವತಿ ಸಾಮಾಜಿಕ ತಾಣ ಟ್ವಿಟ್ಟರ್ ಬಳಸಿಕೊಂಡು ದೂರು ದಾಖಲಿಸಿದ್ದಾರೆ.
ಅಕ್ಟೋಬರ್ 20 ರಂದೇ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಮುಂಜಾನೆ ಜಿಮ್ ಗೆ ತರಳುತ್ತಿದ್ದ ಯುವತಿಯನ್ನು ಅಣುಕಿಸಿದ ಕುಡುಕರಿಬ್ಬರು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ.[ಬೆಂಗಳೂರಲ್ಲಿ ಯುವತಿಯರು ಮಾತ್ರವಲ್ಲ, ಯುವಕರೂ ಅಸುರಕ್ಷಿತ!]

ಜಯನಗರ 7 ನೇ ಬ್ಲಾಕ್ ನ 11 ಕ್ರಾಸ್ ನಲ್ಲಿ ಘಟನೆ ನಡೆದಿದೆ. ಜಿಮ್ ಗೆ ತೆರಳುತ್ತಿದ್ದ ಯುವತಿ ಮೇಲೆ ಮನೆಯೊಂದರ ಮೊದಲನೇ ಮಹಡಿಯಲ್ಲಿದ್ದ ಯುವಕರು ಎಳೆನೀರು ಎಸೆದಿದ್ದಾರೆ. ಇದನ್ನು ಪ್ರತಿಭಟಿಸಿದ ಮಹಿಳೆಯನ್ನು ತಮ್ಮ ಬೈಕ್ ನಲ್ಲಿ ಹಿಂಬಾಲಿಸಿದ ಹುಡುಗರು ಖಾಲಿ ಸರಾಯಿ ಬಾಟಲಿಗಳನ್ನು ಎಸೆದಿದ್ದಾರೆ. ಯುವಕರ ಮುಖವನ್ನು ಮಹಿಳೆ ಸರಿಯಾಗಿ ಗುರುತಿಸಿಲ್ಲ. ಜತೆಗೆ ಬೈಕ್ ನಂಬರ್ ನ್ನು ಗಲಾಟೆ ವೇಳೆ ಬರೆದುಕೊಂಡಿಲ್ಲ.
ಆದರೆ ಅಕ್ಟೋಬರ್ 26 ರಂದು ಸಾಮಾಜಿಕ ತಾಣ ಟ್ವಿಟ್ಟರ್ ಮೂಲಕ ಸಕಲ ವಿವರಗಳನ್ನು ಒಳಗೊಂಡ ದೂರನ್ನು ಮಹಿಳೆ ಸಲ್ಲಿಕೆ ಮಾಡಿದ್ದಾರೆ. ಮಹಿಳೆಯನ್ನು ಸಂಪರ್ಕಿಸಿರುವ ಪೊಲೀಸರು ಸಮಗ್ರ ಮಾಹಿತಿ ಕಲೆ ಹಾಕಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
#assaulted,slapped & humiliated by a grp of yng #drunk #teenagers in #Jayanagara Is #bangalore really safe?@CPBlr @BlrCityPolice @bbmpcommr
— Pooja Shetty (@shettypooja077) October 26, 2015 











Click it and Unblock the Notifications