Bengaluru Second Airport: ಬೆಂಗಳೂರಿನ ಈ ಭಾಗಗಳಲ್ಲಿ ಭೂಮಿ ಬೆಲೆ ಕೋಟಿ.. ಕೋಟಿಗೆ ಜಿಗಿತ!
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬೆನ್ನಲ್ಲೇ ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿಯ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಜಾಗಗಳು ಸೇರಿದಂತೆ ಬೆಂಗಳೂರಿನ ಹಲವು ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ನಗರದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರ ಚರ್ಚೆಯಾದ ಬೆನ್ನಲ್ಲೇ ವಿವಿಧ ಭಾಗದಲ್ಲಿ ಭೂಮಿಗೆ ಬೆಲೆ ಬಂದಿದೆ. ವಿಮಾನ ನಿಲ್ದಾಣ ನಿರ್ಮಾಣದ ಜಾಗ ಮಾತ್ರವಲ್ಲದೇ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಹ ಭೂಮಿಯ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡವನ್ನು ತಪ್ಪಿಸುವುದು ಹೊಸ ವಿಮಾನ ನಿಲ್ದಾಣ ನಿರ್ಮಾಣದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ಹೊಸ ವಿಮಾನ ನಿಲ್ದಾಣ ನಿರ್ಮಾಣ ಬೆನ್ನಲ್ಲೇ ರಿಯಲ್ ಎಸ್ಟೇಟ್ ಬೆಂಗಳೂರಿನಲ್ಲಿ ಚಿಗುರೊಡೆದಿತ್ತು. ಆದರೆ, ಏಳು ಜಾಗಗಳನ್ನು ಗುರುತಿಸಲಾಗಿತ್ತು. ಹೀಗಾಗಿ ವಿಮಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಚಿತ್ರಣ ಸಿಕ್ಕಿರಲಿಲ್ಲ. ಇದೀಗ ಮೂರು ಜಾಗಗಳು ಫೈನಲ್ ಆಗಿದ್ದು ಇದರಲ್ಲಿ ಯಾವುದಾದರು ಒಂದು ಜಾಗದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು. ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ ತಂಡದ ಅಧಿಕಾರಿಗಳು ಬಂದು ಇಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಇದೀಗ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದಲ್ಲಿನ ಭೂಮಿಯ ಬೆಲೆ ಏರಿಕೆಯಾಗುತ್ತಿದೆ.
ಕನಕಪುರದಲ್ಲಿ ಭೂಮಿ ಬೆಲೆ ಜಿಗಿತ: ರಾಮನಗರ ಹಾಗೂ ಕನಕಪುರ ಭಾಗದಲ್ಲಿ ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರಾಟ ಮಾಡಬೇಡಿ ಎಂದು ಹೇಳಿದ ಮೇಲೆ ಈ ಭಾಗದಲ್ಲೂ ಭೂಮಿಗೆ ದಾಖಲೆಯ ಬೆಲೆ ಬಂದಿದೆ. ಅಲ್ಲದೆ ಕನಕಪುರ ಎರಡನೇ ವಿಮಾನ ನಿಲ್ದಾಣದ ಶಾರ್ಟ್‌ಲಿಸ್ಟ್‌ನಲ್ಲಿ ಟಾಪ್‌ನಲ್ಲಿ ಇದೆ. ಕನಕಪುರ ರಸ್ತೆಯಲ್ಲಿ ಭೂಮಿಯ ಬೆಲೆಗಳು ಪ್ರತಿ ಚದರ ಅಡಿಗೆ ಸುಮಾರು 3650-13000 ರೂಪಾಯಿಯ ವರೆಗೆ ಇದೆ.
ಕನಕಪುರ ರಸ್ತೆಯಲ್ಲಿರುವ ಭೂಮಿಯು 45 ಲಕ್ಷದಿಂದ ಬರೋಬ್ಬರಿ 10 ಕೋಟಿಯವರೆಗೆ ಇದೆ. ಸರಾಸರಿ ಬೆಲೆ 3.22 ಕೋಟಿ ರೂಪಾಯಿ ಇದೆ.
* ಕನಕಪುರ ರಸ್ತೆಯಲ್ಲಿರುವ ವಸತಿ ಪ್ಲಾಟ್‌ಗಳ ಬೆಲೆಯು 45 ಲಕ್ಷದಿಂದ 10 ಕೋಟಿ ರೂಪಾಯಿ ವರೆಗೆ ಇದೆ.
* ವಸತಿ ಭೂಮಿ/ಪ್ಲಾಟ್‌ಗಳ ಸರಾಸರಿ ಬೆಲೆಯು 3.22 ಕೋಟಿ ರೂಪಾಯಿ ಇದೆ.
ಬಿಡದಿಯಲ್ಲಿ ಭೂಮಿ ಬೆಲೆ ಹೆಚ್ಚಳ: ಸಮೀಪದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ. ನಗರ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಕ್ಕೆ ಈಗಾಗಲೇ ಬಿಡದಿಯಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದೆ. ಬಿಡದಿಯಲ್ಲಿ ಇದೀಗ ಪ್ರತಿ ಚದರ ಮೀ. ಭೂಮಿ ಬೆಲೆಯು 3,000 ಸಾವಿರ ರೂಪಾಯಿಯಿಂದ 4,500 ರೂಪಾಯಿ ಆಗಿದೆ.
* ಇನ್ನು ಬಿಡದಿಯಲ್ಲಿ 1200 ಚದರ ಅಡಿ ವಿಸ್ತೀರ್ಣದ ನಿವೇಶನವು ಅಂದಾಜು 54 ಲಕ್ಷ ರೂಪಾಯಿಗೆ ಸಿಗುತ್ತದೆ. ಅಂದರೆ ಪ್ರತಿ ಚದರ ಅಡಿಗೆ ಅಂದಾಜು 4,500 ರೂಪಾಯಿ ಇದೆ.
* ಬಿಎಂಆರ್‌ಡಿಎ ಅನುಮೋದಿತ ನಿವೇಶನಗಳು ಬಿಡದಿಯಲ್ಲಿ 23.93 ಲಕ್ಷಕ್ಕೆ ಮಾರಾಟವಾಗುತ್ತಿವೆ.
ನೆಲಮಂಗಲದಲ್ಲೂ ಭೂಮಿಗೆ ಚಿನ್ನದ ಬೆಲೆ: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಲಿಸ್ಟ್‌ನಲ್ಲಿ ಮೊದಲಿನಿಂದಲೂ ಇರುವ ಪ್ರದೇಶಗಳ ಹೆಸರಿನಲ್ಲಿ ನೆಲಮಂಗಲವೂ ಒಂದಾಗಿದೆ. ಇಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಪ್ರತಿ ಚದರ ಅಡಿಗೆ ಇಲ್ಲಿ 1900 ರಿಂದ 3500 ರವರೆಗೆ ಇದೆ. ಆದರೆ ಫ್ಲಾಟ್ ಬೆಲೆಗಳು ಪ್ರತಿ ಚದರ ಅಡಿಗೆ 5,550 ರಿಂದ 6,400 ರೂಪಾಯಿ ವರೆಗೆ ಇದೆ.
* ಕೆಲವು ಪ್ಲಾಟ್‌ಗಳ ಬೆಲೆಯು 20 ಲಕ್ಷ ರೂಪಾಯಿಯಿಂದ 40 ಲಕ್ಷ ರೂಪಾಯಿಯ ವರೆಗೆ ಇದೆ. ಫ್ಲಾಟ್ ಬೆಲೆಗಳು ಪ್ರತಿ ಚದರ ಅಡಿಗೆ 5550-6400 ಒಳಗೆ ಇವೆ.












Click it and Unblock the Notifications