Bengaluru: ಮಹಿಳೆಯರೇ ನಡೆಸುವ 'ಸಖಿ' ಆಟೋ ಸೇವೆ ಫೆ.14ರಿಂದ ಆರಂಭ: ಇಲ್ಲಿದೆ ಬುಕಿಂಗ್ ವಿವರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಲಕ್ಷಾಂತರ ಮಹಿಳೆಯರು ಉದ್ಯೋಗ, ಶಿಕ್ಷಣ ಮತ್ತು ಇತರೆ ಕೆಲಸಗಳಿಗಾಗಿ ಪ್ರಯಾಣಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಟ್ಯಾಕ್ಸಿ ಅಥವಾ ಆಟೋಗಳಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಮಹಿಳೆಯರ ಮೇಲೆ ನಡೆಯುತ್ತಿರುವ ಅಹಿತಕರ ಘಟನೆಗಳು, ದೌರ್ಜನ್ಯ ಮತ್ತು ವಂಚನೆಯ ಪ್ರಕರಣಗಳು ಆತಂಕ ಮೂಡಿಸಿವೆ. ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಅಥವಾ ಅಪರಿಚಿತ ಸ್ಥಳಗಳಿಗೆ ತೆರಳುವಾಗ ಮಹಿಳೆಯರು ಭಯಪಡುವಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಇದೀಗ ನಗರದಲ್ಲಿ 'ಸಖಿ ಮಹಿಳಾ ಆಟೋ ಸೇವೆ' (Sakhi Women Auto Service) ಆರಂಭವಾಗುತ್ತಿದೆ.
ಫೆಬ್ರವರಿ 14ರಂದು ಈ ವಿನೂತನ ಸೇವೆಗೆ ಅಧಿಕೃತವಾಗಿ ಚಾಲನೆ ಸಿಗಲಿದ್ದು, ಇದು ಮಹಿಳೆಯರಿಗಾಗಿಯೇ, ಮಹಿಳೆಯರೇ ನಡೆಸುವ ವಿಶೇಷ ಸಾರಿಗೆ ವ್ಯವಸ್ಥೆಯಾಗಿದೆ.

ಏನಿದು 'ಸಖಿ'? ಇದರ ವಿಶೇಷತೆಯೇನು?
'ಸಖಿ' ಎಂದರೆ ಗೆಳತಿ ಎಂದರ್ಥ. ಹೆಸರಿಗೆ ತಕ್ಕಂತೆ ಈ ಸೇವೆಯು ಮಹಿಳಾ ಪ್ರಯಾಣಿಕರಿಗೆ ಗೆಳತಿಯಂತೆ ಸುರಕ್ಷತೆಯ ಭರವಸೆ ನೀಡಲಿದೆ. ಇದು ಓಲಾ ಮತ್ತು ಉಬರ್‌ನಂತಹ ಸವಾರಿಯಾಗಿದ್ದು, ಇಲ್ಲಿ ಚಾಲಕರೂ ಮಹಿಳೆಯರೇ, ಪ್ರಯಾಣಿಕರೂ ಮಹಿಳೆಯರೇ ಆಗಿರುತ್ತಾರೆ. ಜನವರಿ ತಿಂಗಳಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ನಡೆಸಲಾಗಿದ್ದು, ಕೇವಲ ಒಂದು ವಾರದಲ್ಲಿ ಸುಮಾರು 17 ಯಶಸ್ವಿ ಟ್ರಿಪ್‌ಗಳನ್ನು ಪೂರ್ಣಗೊಳಿಸಿ ಭರವಸೆ ಮೂಡಿಸಿದೆ. ಸದ್ಯ 21 ರಿಂದ 40 ವರ್ಷ ವಯಸ್ಸಿನ ಸುಮಾರು 50 ಮಂದಿ ಅನುಭವಿ ಮಹಿಳಾ ಚಾಲಕರು 'ಸಖಿ' ತಂಡದಲ್ಲಿದ್ದಾರೆ.
ಈ ಐಡಿಯಾ ಹುಟ್ಟಿದ್ದು ಹೇಗೆ?
ಮಹಿಳೆಯರು ಎದುರಿಸುವ ಸುರಕ್ಷತಾ ಸಮಸ್ಯೆಗಳೇ ಈ ಹೊಸ ಆಲೋಚನೆಗೆ ನಾಂದಿ ಹಾಡಿದೆ. 'ಸಖಿ' ರೈಡಿಂಗ್ ಪ್ಲಾಟ್‌ಫಾರ್ಮ್‌ನ ಸಂಸ್ಥಾಪಕಿ ಕೃಷ್ಣವಿ ಪರೇಖ್ ಅವರು ಮುಂಬೈನಲ್ಲಿ ಓದುತ್ತಿದ್ದಾಗ ಮತ್ತು ಕೆಲಸ ಮಾಡುತ್ತಿದ್ದಾಗ ಸ್ವತಃ ಎದುರಿಸಿದ ಕಷ್ಟಗಳೇ ಅವರನ್ನು ಈ ದಿಕ್ಕಿನಲ್ಲಿ ಯೋಚಿಸುವಂತೆ ಮಾಡಿವೆ.
"ದ್ವಿಚಕ್ರ ವಾಹನ ಟ್ಯಾಕ್ಸಿಗಳಲ್ಲಿ ಅಪರಿಚಿತ ಪುರುಷ ಚಾಲಕರ ಹಿಂದೆ ಕುಳಿತು ಪ್ರಯಾಣಿಸುವುದು ನನಗೆ ಎಂದಿಗೂ ಆರಾಮದಾಯಕವಾಗಿರಲಿಲ್ಲ. ಅಷ್ಟು ಮಾತ್ರವಲ್ಲ, ತಡರಾತ್ರಿಯಲ್ಲಿ ಕ್ಯಾಬ್ ಬುಕ್ ಮಾಡಿದಾಗ, ಚಾಲಕರು ನಾವು ಹೇಳಿದ ಪಿಕ್-ಅಪ್ ಪಾಯಿಂಟ್ ಬಿಟ್ಟು ಕತ್ತಲಾದ ಅಥವಾ ನಿರ್ಜನ ಪ್ರದೇಶಕ್ಕೆ ಬರುವಂತೆ ಹೇಳಿದಾಗ ತುಂಬಾ ಭಯವಾಗುತ್ತಿತ್ತು. ನನಗೆ ಆದ ಅನುಭವ ಎಷ್ಟೋ ಮಹಿಳೆಯರಿಗೆ ಆಗಿರಬಹುದು. ಹೀಗಾಗಿ ಮಹಿಳೆಯರಿಗಾಗಿಯೇ ಒಂದು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಇದ್ದರೆ ಹೇಗೆ ಎಂಬ ಆಲೋಚನೆಯಿಂದ 'ಸಖಿ' ಜನ್ಮತಾಳಿತು," ಎಂದು ಕೃಷ್ಣವಿ ಪರೇಖ್ ವಿವರಿಸಿದ್ದಾರೆ.
ದರ ಎಷ್ಟು?
ಸಾಮಾನ್ಯವಾಗಿ ಪೀಕ್ ಅವರ್‌ಗಳಲ್ಲಿ ಅಥವಾ ಮಳೆ ಬಂದಾಗ ಇತರೆ ಆ್ಯಪ್‌ಗಳಲ್ಲಿ ದರ ದುಪ್ಪಟ್ಟಾಗುತ್ತದೆ. ಆದರೆ, ಸಖಿ ಆಟೋ ಸೇವೆಯಲ್ಲಿ ಅಂತಹ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ ಎಂಬುದು ಮಹಿಳೆಯರಿಗೆ ಸಮಾಧಾನಕರ ವಿಷಯ. ಮೊದಲ 2 ಕಿಲೋಮೀಟರ್‌ಗೆ ಕನಿಷ್ಠ 50 ರೂ. ನಿಗದಿಪಡಿಸಲಾಗಿದೆ. ಆ ಬಳಿಕ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 20 ರೂ. ದರ ವಿಧಿಸಲಾಗುತ್ತದೆ. ಸದ್ಯಕ್ಕೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೆ ಈ ಸೇವೆ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ನೋಡಿಕೊಂಡು 24 ಗಂಟೆಯೂ ಸೇವೆ ನೀಡಲು ನಿರ್ಧರಿಸಲಾಗಿದೆ.
ಬುಕ್ ಮಾಡುವುದು ಹೇಗೆ?
ಸಖಿ ಆಟೋ ಬುಕ್ ಮಾಡಲು ನೀವು ದುಬಾರಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಅವಲಂಬಿಸಬೇಕಿಲ್ಲ. ಅತ್ಯಂತ ಸರಳವಾಗಿ ವಾಟ್ಸಾಪ್ ಮೂಲಕ ಆಟೋ ಕರೆಸಿಕೊಳ್ಳಬಹುದು.
1.ವೆಬ್‌ಸೈಟ್: ride.sakhiwomen.in ವೆಬ್‌ಸೈಟ್‌ಗೆ ಭೇಟಿ ನೀಡಿ ಬುಕ್ ಮಾಡಬಹುದು.
2.ವಾಟ್ಸಾಪ್: ಈ 63619 33364 ಸಂಖ್ಯೆಗೆ ವಾಟ್ಸಾಪ್ ಮೆಸೇಜ್ ಮಾಡುವ ಮೂಲಕ ಆಟೋ ಬುಕ್ ಮಾಡಬಹುದು. ಸದ್ಯಕ್ಕೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಹಂತದಲ್ಲಿದ್ದು, ಸದ್ಯದಲ್ಲೇ ಬಳಕೆಗೆ ಸಿಗಲಿದೆ.
ಚಾಲಕಿಯರಿಗೂ ಲಾಭದಾಯಕ
ಈ ಯೋಜನೆಯು ಕೇವಲ ಪ್ರಯಾಣಿಕರ ಸುರಕ್ಷತೆಗಷ್ಟೇ ಅಲ್ಲ, ಮಹಿಳಾ ಚಾಲಕರ ಆರ್ಥಿಕ ಸಬಲೀಕರಣಕ್ಕೂ ಒತ್ತು ನೀಡಿದೆ. ಪ್ರಸ್ತುತ ರೈಡ್‌ಗಳಿಂದ ಬರುವ ಸಂಪೂರ್ಣ ಹಣ ಚಾಲಕರಿಗೆ ನೇರವಾಗಿ ಸೇರುತ್ತದೆ. ಅಷ್ಟೇ ಅಲ್ಲ, ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ 'ಟ್ರಾನ್ಸ್ಜೆಂಡರ್ ಮಹಿಳೆಯರನ್ನು' (Trans Women) ಕೂಡ ಚಾಲಕರನ್ನಾಗಿ ನೇಮಿಸಿಕೊಳ್ಳುವ ಉದಾತ್ತ ಧ್ಯೇಯವನ್ನು ಸಂಸ್ಥೆ ಹೊಂದಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications