ಸುರಕ್ಷಾ 75 ಯೋಜನೆಯಡಿ ಬೆಂಗಳೂರಿನ 75 ಜಂಕ್ಷನ್‌ಗಳ ಅಭಿವೃದ್ಧಿ

ಸುರಕ್ಷಾ 75 ಯೋಜನೆಯಡಿ ಬೆಂಗಳೂರಿನ 75 ಜಂಕ್ಷನ್‌ಗಳ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಇಬ್ಲೂರು ಜಂಕ್ಷನ್‌ನಲ್ಲಿ ವಾಕಲೂರು ಯೋಜನೆಯ ಭಾಗವಾಗಿ ಪಾದಚಾರಿ ಸುಗಮವಾಗಿ ಹೋಗುವುದಕ್ಕೆ ಮತ್ತು ಸುರಕ್ಷಿತ ಸಂಚಾರ ಸುಧಾರಣಾ ಕಾರ್ಯಗಳ ಪ್ರಗತಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಭಾನುವಾರ (ಅಕ್ಟೋಬರ್ 12) ಪರಿಶೀಲಿಸಿದರು.

ಇಬ್ಲೂರು ಜಂಕ್ಷನ್ ಮೇಲ್ಸೇತುವೆ ಸುಂದರೀಕರಣ ಕಾರ್ಯದಲ್ಲಿ 100ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದು, ಅವರಲ್ಲಿ 13 ವರ್ಷದ ಮೂವರು ಮಕ್ಕಳು ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಮುಖ್ಯ ಆಯುಕ್ತರು ಈ ಮಕ್ಕಳ ಉತ್ಸಾಹಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಇಬ್ಲೂರು ಜಂಕ್ಷನ್ ದಕ್ಷಿಣ ಮತ್ತು ಪೂರ್ವ ನಗರ ಪಾಲಿಕೆಗಳ ಗಡಿಯಲ್ಲಿದ್ದು, ಪ್ರಮುಖ ಸಂಚಾರ ಮಾರ್ಗವಾಗಿದೆ. ಪಾಲಿಕೆ ಮತ್ತು ನಾಗರಿಕರ ಸಂಯುಕ್ತ ಪ್ರಯತ್ನದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಜಂಕ್ಷನ್ ಅನ್ನು ಪಾದಚಾರಿಗಳಿಗೆ ಸುರಕ್ಷಿತ ಮತ್ತು ನಾಗರಿಕ ಸ್ನೇಹಿಯಾಗಿ ರೂಪಿಸಲು ಸುರಕ್ಷಾ 75 ಯೋಜನೆ ಅಡಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ.

Bengaluru s Traffic Relief Plan 75 Junctions to Get a Makeover Under Suraksha 75

ಇನ್ನು ಪಾದಚಾರಿ ಮಾರ್ಗದಲ್ಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಬೇಕಿದೆ. ತ್ಯಾಜ್ಯ, ಮಣ್ಣು ಮತ್ತು ಅವಶೇಷಗಳ ತೆರವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ರಸ್ತೆಯಲ್ಲಿ ಹೈ-ರೈಸ್ ಜೀಬ್ರಾ ಕ್ರಾಸಿಂಗ್ ಅಳವಡಿಸಲು ಮುಖ್ಯ ಆಯುಕ್ತರು ಸೂಚಿಸಿದರು. ಅಲ್ಲದೇ ಇಬ್ಲೂರು ಜಂಕ್ಷನ್‌ನ ಖಾಲಿ ಜಾಗದಲ್ಲಿ ರಾಜಕಾಲುವೆ ನಿರ್ಮಿಸಿ, ಪ್ರದೇಶ ಜಲಾವೃತವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಈ ಪ್ರದೇಶದ ನೀರಿನ ಹರಿವು ಸುಧಾರಣೆಗಾಗಿ ಅಗತ್ಯ ತಾಂತ್ರಿಕ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ನಿರ್ದೇಶನ ನೀಡಿದರು.

ಹೊಸ ರಸ್ತೆ ಸಂಪರ್ಕ ಯೋಜನೆ: ಹೊರವರ್ತುಲ ರಸ್ತೆಯಿಂದ ಸರ್ಜಾಪುರ ಮಾರ್ಗದತ್ತ ತೆರಳುವ ಜಂಕ್ಷನ್ ಬಳಿ ಖಾಲಿ ಜಾಗವಿದ್ದು, ಅಲ್ಲಿ ರಸ್ತೆ ನಿರ್ಮಿಸಿದರೆ ಜಂಕ್ಷನ್‌ಗೆ ಹೋಗದೆ ನೇರವಾಗಿ ಸರ್ಜಾಪುರ ರಸ್ತೆಗೆ ಸಂಪರ್ಕ ಕಲ್ಪಿಸಬಹುದಾಗಿದೆ. ಈ ಕುರಿತು ಖಾಲಿ ಜಾಗದ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿ ರಸ್ತೆ ನಿರ್ಮಾಣ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರು ಸೂಚಿಸಿದರು. ಇನ್ನು ಸರ್ಜಾಪುರ ರಸ್ತೆ ಭಾಗದಲ್ಲಿ ಈಗಾಗಲೇ ಸ್ಕೈವಾಕ್ ಇದ್ದು, ಹೊರವರ್ತುಲ ರಸ್ತೆ ಭಾಗದಲ್ಲೂ ಸ್ಕೈವಾಕ್ ನಿರ್ಮಿಸಿದರೆ ನಾಗರಿಕರಿಗೆ ಸುಗಮ ಸಂಚಾರ ಸಿಗಲಿದೆ. ಈ ಕುರಿತು ಸಾಧ್ಯತೆ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಎಲ್ಲರ ಸಹಕಾರದೊಂದಿಗೆ ಜಂಕ್ಷನ್ ಸುಂದರೀಕರಣ: ಇಬ್ಲೂರು ಜಂಕ್ಷನ್ ಸುಂದರೀಕರಣ ಕಾರ್ಯವು ಇಂದು 5ನೇ ದಿನವನ್ನು ಮುಟ್ಟಿದ್ದು, ಸೆಪ್ಟೆಂಬರ್ 27, ಅಕ್ಟೋಬರ್ 2, 4 ಮತ್ತು 5 ರಂದು ನಡೆದಿತ್ತು. ಪಾಲಿಕೆ ಅಧಿಕಾರಿಗಳು, ಎನ್‌ಜಿಒಗಳು, ಸ್ಥಳೀಯ ನಾಗರಿಕರು, ಸ್ವಯಂಸೇವಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಕಾರದಿಂದ ಮೇಲ್ಸೇತುವೆಯ ಕಂಬಗಳಿಗೆ ಬಣ್ಣ ಬಳಿದು ಸೌಂದರ್ಯವರ್ಧನೆ ಮಾಡಲಾಗಿದೆ.

ಬಾಕಿ ಕಾರ್ಯ ಎರಡು ವಾರಗಳಲ್ಲಿ ಪೂರ್ಣ: ಇನ್ನು ಮಣಿಪಾಲ್ ಆಸ್ಪತ್ರೆ ಬಳಿಯ ಸುಮಾರು 200 ಮೀಟರ್ ಉದ್ದದ ಕಾಮಗಾರಿಗಳು ಪೂರ್ಣಗೊಂಡಿವೆ. ಜಂಕ್ಷನ್ ಪಾದಚಾರಿ ಮಾರ್ಗದ ಮಟ್ಟ ಸುಧಾರಣೆಗೊಂಡಿದ್ದು, ನಾಲ್ಕು ಭಾಗಗಳಲ್ಲಿ ಮೂರು ಭಾಗಗಳ ಕೆಲಸ ಮುಗಿದಿದೆ. ಉಳಿದ ಭಾಗ ಮುಂದಿನ ಎರಡು ವಾರಗಳಲ್ಲಿ ಪೂರ್ಣಗೊಳ್ಳಲಿದೆ. ಸುರಕ್ಷಾ 75 ಯೋಜನೆಯಡಿ 75 ಜಂಕ್ಷನ್ ಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಿತರೆ ಜಂಕ್ಷನ್ ಗಳನ್ನು ಸಿಎಸ್ಆರ್ ಅನುದಾ‌ದಡಿ ಅಭಿವೃದ್ಧಿಪಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+