ಬೆಂಗಳೂರಿನಲ್ಲಿ ಗಗನಕ್ಕೇರುತ್ತಿರುವ ಮನೆಗಳ ಬಾಡಿಗೆ; ಮುಂಬೈಯನ್ನೇ ಮೀರಿಸುತ್ತಿದೆ ಸಿಲಿಕಾನ್ ಸಿಟಿ- ಅಂಕಿಅಂಶ, ವರದಿ, ವಿವರ
ಬೆಂಗಳೂರು, ಆಗಸ್ಟ್ 10: ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಗಗನಕ್ಕೇರುತ್ತಿದೆ. ಮಹಾನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಮನೆಗಳ ಬಾಡಿಗೆ ದರಗಳು ಮುಂಬೈಗಿಂತಲೂ ಹೆಚ್ಚಾಗಿವೆ ಎಂದು 'ಬ್ಯುಸಿನೆಸ್ ಟುಡೇ' ವರದಿ ಮಾಡಿದೆ.
ದಿಬ್ಯಾಂಗನಾ ಪೌಲ್ ಅವರು ಬೆಂಗಳೂರಿನಲ್ಲಿ ಒಂದು ರೂಮ್-ಕಿಚನ್ (1RK) ಅಪಾರ್ಟ್‌ಮೆಂಟ್‌ಗಾಗಿ ಹುಡುಕುತ್ತಿದ್ದರೂ, ಅವರಿಗೆ ಬೇಕಿರುವ ಬಾಡಿಕೆ ಮನೆ ಸಿಕ್ಕಿಲ್ಲವೆಂದು 'ಬ್ಯುಸಿನೆಸ್ ಟುಡೇ' ತಿಳಿಸಿದ್ದಾರೆ.

'1 ಆರ್‌ಕೆ ಅಪಾರ್ಟ್‌ಮೆಂಟ್‌ಗಳು 13,000ರಿಂದ 15,000 ರೂಪಾಯಿಗಳಲ್ಲಿ ಲಭ್ಯವಿದೆ. ಆದರೆ, 2 ಬಿಎಚ್‌ಕೆ ಮನೆಗಳು (ಎರಡು ಬೆಡ್‌ರೂಮ್-ಹಾಲ್-ಕಿಚನ್) 30,000 ರೂಪಾಯಿಗಿಂತ ಹೆಚ್ಚಾಗಿವೆ' ಎಂದು ಪೌಲ್ ಹೇಳಿದ್ದಾರೆ.
ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಗೃಹದಲ್ಲಿ ತಮ್ಮೊಬ್ಬರಿಗೆ ರೂ 7000 ಬಾಡಿಗೆಯನ್ನು ಪೌಲ್ ಪಾವತಿಸುತ್ತಿದ್ದಾರೆ. ನಗರದ ಪ್ರಮುಖ ಪ್ರದೇಶವಾದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಅವರು ವಾಸಿಸುತ್ತಿದ್ದಾರೆ.

ಅವರು ವಾಸಿಸುವ ಅದೇ ಪ್ರದೇಶದಲ್ಲಿ 1 ಆರ್‌ಕೆ ಅಪಾರ್ಟ್‌ಮೆಂಟ್‌ಗಳ ಬಾಡಿಗೆಗಳು ಈಗ 2 ಲಕ್ಷ ರೂಪಾಯಿ ಅಡ್ವಾನ್ಸ್‌ನೊಂದಿಗೆ ತಿಂಗಳಿಗೆ 24,000 ರೂಪಾಯಿಗಳನ್ನು ಮುಟ್ಟಿವೆ.
ಬೆಂಗಳೂರಿನ ಉಪನಗರಗಳಲ್ಲಿ (ಸರ್ಜಾಪುರ, ವೈಟ್‌ಫೀಲ್ಡ್ ಮತ್ತು ದಕ್ಷಿಣ ಭಾಗಗಳ ಹೊರವಲಯದಲ್ಲಿ) ಬಾಡಿಗೆಗಳು ಇನ್ನೂ ಕೈಗೆಟುಕುವ ದರದಲ್ಲಿವೆ. ನಗರದ ಕೇಂದ್ರ ಭಾಗಕ್ಕೆ ಸಮೀಪವಿರುವ ಪ್ರದೇಶಗಳಲ್ಲಿ ಬಾಡಿಗೆಗಳು 2 ಬಿಎಚ್‌ಕೆಗೆ 2.5 ಲಕ್ಷ ರೂಪಾಯಿ ಅಡ್ವಾನ್ ಜೊತೆಗೆ ತಿಂಗಳಿಗೆ 25 ಸಾವಿರ ರೂಪಾಯಿಗಳಾಗಿವೆ.

ಪೂರ್ವ ಬೆಂಗಳೂರಿನ ನಿಕೂ ಹೋಮ್ಸ್ ಪಾಜೆಕ್ಟ್ ಅಡಿಯಲ್ಲಿ ಸುಮಾರು 1,400 ಚದರ ಅಡಿ ವಿಸ್ತೀರ್ಣದ 1ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗೆ ಬಾಡಿಗೆಯು ತಿಂಗಳಿಗೆ 12 ಸಾವಿರ ರೂಪಾಯಿಗಳನ್ನು ದಾಟಿದೆ.
ಈ ಕುರಿತು ಮಾತನಾಡಿರುವ ಬ್ರೋಕರ್ ಒಬ್ಬರು, 'ನಾವು ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ಇಂತಹ ಬಾಡಿಗೆಗಳನ್ನು ನೋಡುತ್ತಿದ್ದೆವು. ಆದರೆ, ಅವು ಕನಿಷ್ಠ 4,000-6,000 ಚದರ ಅಡಿ ಅಪಾರ್ಟ್‌ಮೆಂಟ್‌ಗಳಾಗಿದ್ದವು. ಬೆಂಗಳೂರಿನ ಹೆಚ್ಚಿನ ಪ್ರೀಮಿಯಂ ಅಪಾರ್ಟ್ಮೆಂಟ್ ಬಾಡಿಗೆಗಳು ಮುಂಬೈನಂತೆಯೇ ಪ್ರತಿ ಚದರ ಅಡಿಗೆ 100 ರೂ.ಗಳನ್ನು ಮುಟ್ಟಿವೆ' ಎಂದು ಹೇಳಿದ್ದಾರೆ.

ಇಂದು ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಬಾಡಿಗೆಗಳು ಮುಂಬೈನ ಅತ್ಯಂತ ಪ್ರಮುಖ ಸ್ಥಳಗಳಾದ ವರ್ಲಿ, ಬಾಂದ್ರಾ, ಜುಹು ಮತ್ತು ವರ್ಸೋವಾಗಳಿಗೆ ಸರಿಸಮಾನವಾಗಿದೆ. ಸರಾಸರಿ ರೂ 90,000ದಿಂದ 2 ಲಕ್ಷ ಬಾಡಿಗೆ ಇದೆ.
ಬೆಂಗಳೂರಿನ ಪ್ರಾಪರ್ಟಿ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್, ಪ್ರಸ್ತುತ ಬಾಡಿಗೆ ಹೆಚ್ಚಳದಲ್ಲಿ ಸಾಂಕ್ರಾಮಿಕ ರೋಗವು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
'ಕೋವಿಡ್ -19ರ ಮೊದಲ ಅಲೆಯ ನಂತರ, ಅಪಾರ್ಟ್‌ಮೆಂಟ್‌ಗಳಲ್ಲಿ ಆಕ್ಯುಪೆನ್ಸಿ ಮಟ್ಟಗಳು ಗಮನಾರ್ಹವಾಗಿ ಕುಸಿದವು' ಎಂದು ಅವರು ತಿಳಿಸಿದ್ದಾರೆ.
'2021 ರ ವರೆಗೆ, ಬೆಂಗಳೂರಿನಲ್ಲಿ ಬಾಡಿಗೆಗಳು ಶೇಕಡಾ 25 ರಷ್ಟು ಕಡಿಮೆಯಾಗಿದ್ದವು. ನಾವು 2022 ರ ನಂತರ ಶೇಕಡಾ 10ರಿಂದ 15 ರಷ್ಟು ಏರಿಕೆ ಕಂಡಿದ್ದೇವೆ. ಈಗ 2023 ರಲ್ಲಿ ಗರಿಷ್ಠ ಏರಿಕೆಯಾಗಿದೆ' ಎಂದು ಅವರು ಹೇಳಿದ್ದಾರೆ.












Click it and Unblock the Notifications