Roads: ರಸ್ತೆ ಪುನಃಸ್ಥಾಪನೆಯಲ್ಲಿ ಗುಣಮಟ್ಟ ಕಾಪಾಡಿ, KPTCL ಸುರಕ್ಷತಾ ನಿಯಮ ಪಾಲನೆಗೆ GBA ಖಡಕ್ ಸೂಚನೆ

ಬೆಂಗಳೂರು: ಜಿಬಿಎ ವ್ಯಾಪ್ತಿಯ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಪದೇಪದೇ ಅಗೆದು ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಿಂದ ಉಂಟಾಗುತ್ತಿರುವ ರಸ್ತೆ ಹಾನಿ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಪುನಃಸ್ಥಾಪನೆಗೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಈ ಸಂಬಂಧ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಂದಷ್ಟು ಸಲಹೆ, ಸೂಚನೆಗಳನ್ನು ಕೊಟ್ಟಿದ್ದಾರೆ.

ಲೋಖಂಡೆ ಸ್ನೇಹಲ್ ಅವರ ನೇತೃತ್ವದಲ್ಲಿ ಇಲಾಖೆಗಳ ಅಧಿಕಾರಿಗಳ ಜೊತೆಗೆ ಮಂಗಳವಾರ ಮಹತ್ವದ ಸಭೆ ನಡೆಯಿತು. ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು, ರಸ್ತೆ ಅಗೆತಗೂ ಮುನ್ನ ಅಗತ್ಯ ಅನುಮತಿಗಳನ್ನು ಕಡ್ಡಾಯವಾಗಿ ಪಡೆಯುವುದು, ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಗಳನ್ನು ಸಮರ್ಪಕ ಗುಣಮಟ್ಟದಲ್ಲಿ ಪುನಃಸ್ಥಾಪಿಸುವುದು ಹಾಗೂ ಪುನಃಸ್ಥಾಪನೆ ಕಾಮಗಾರಿಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವಂತೆ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

Bengaluru Roads

ರಸ್ತೆ ಪುನಃಸ್ಥಾಪನೆ ಕಾಮಗಾರಿಯಲ್ಲಿ ಗುಣಮಟ್ಟ ಬೇಕು

ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳು ರಸ್ತೆ ಅಗೆದು ಕಾಮಗಾರಿಗಳನ್ನು ಕೈಗೊಂಡ ನಂತರ, ರಸ್ತೆಯನ್ನು ಹಿಂದಿನ ಸ್ಥಿತಿಗೆ ಸಮರ್ಪಕವಾಗಿ ಪುನಃಸ್ಥಾಪಿಸಬೇಕು. ಕೇವಲ ರಸ್ತೆ ಅಗೆತದ ಕಾಮಗಾರಿಯನ್ನು ಪೂರ್ಣಗೊಳಿಸುವುದಷ್ಟೇ ಅಲ್ಲದೆ, ಪುನಃಸ್ಥಾಪನೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು. ರಸ್ತೆ ಕೆಲಸ ಮುಗಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿದರು.

ಅನುಮತಿ ಸಹಿತ ರಸ್ತೆ ಅಗೆತ ಕಾಮಗಾರಿ

ರಸ್ತೆ ಅಗೆದು ಕಾಮಗಾರಿ ಕೈಗೊಳ್ಳುವ ಮುನ್ನ ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಅನುಮತಿ ಕಡ್ಡಾಯವಾಗಿ ಪಡೆಬೇಕು. ಅನುಮತಿಯಿಲ್ಲದೆ ರಸ್ತೆ ಅಗೆದು ಕಾಮಗಾರಿ ನಡೆಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತುರ್ತು ಕಾಮಗಾರಿಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಅನುಮತಿ ಪ್ರಕ್ರಿಯೆ ಪಾಲಿಸುವಂತೆ ಆಯಾ ಸಂಸ್ಥೆಗಳಿಗೆ ಹೇಳಿದರು.

ಇನ್ನೂ ಅಗೆದ ರೆಸ್ತೆಯ ಪುನಃಸ್ಥಾಪನೆ ಕೆಲಸ ಪೂರ್ಣಗೊಂಡ ನಂತರ ರಸ್ತೆ ಮೊದಲಿನಂತಾಗಿಯೋ ಇಲ್ಲವೋ ಎಂದು ಸಂಬಂಧಿಸಿದ ಇಂಜಿನಿಯರ್‍‌ ಗಳು ಬಂದು ಪರಿಶೀಲಿಸಬೇಕು. ಆಗ ಲೋಪಗಳು ಕಂಡು ಬಂದರೆ ತಕ್ಷಣವೇ ಸರಿಪಡಿಸಬೇಕು. ಬಳಿಕವೇ ಕಾಮಗಾರಿ ಪೂರ್ಣದ ಪ್ರಮಾಣಪತ್ರ ಗುಣಮಟ್ಟ ಸಹಿತ ಕೆಲಸ ಮುಗಿದಿರುವುದನ್ನು ಖಚಿತಪಡಿಸಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಇಲಾಖೆಗಳ ನಡುವೆ ಸಮನ್ವಯ

ಬೆಸ್ಕಾಂ, ಕೆಪಿಟಿಸಿಎಲ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಆಪ್ಟಿಕಲ್ ಫೈಬರ್ ಕೇಬಲ್ ಸಂಸ್ಥೆಗಳು ಹಾಗೂ ಗೇಲ್ ಸೇರಿದಂತೆ ಸೇವಾ ಪೂರೈಕೆ ದರ ಸಂಸ್ಥೆ ಕೈಗೊಳ್ಳುವ ಕಾಮಗಾರಿಗಳ ಸಂದರ್ಭದಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಇಲಾಖೆಗಳು, ಅಧಿಕಾರಿಗಳ ನಡುವೆ ಪರಸ್ಪರ ಮಾಹಿತಿ ಹಂಚಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸುವುದು ಕಡ್ಡಾಯ ಎಂದರು..

ರಸ್ತೆ ಗುಂಡಿಗಳ ದುರಸ್ತಿಗೆ ಆದ್ಯತೆ ನೀಡಿ

ಸಾರ್ವಜನಿಕರಿಂದ ದೂರುಗಳು ಬಂದಾಗ, ಅವುಗಳನ್ನು ಸಂಬಂಧಿಸಿದ ಇಲಾಖೆಗೆ ತ್ವರಿತವಾಗಿ ರವಾನಿಸಿ, ಪ್ರತಿಯೊಂದು ದೂರಿಗೂ ಪರಿಹಾರ ಕಲ್ಪಿಸಬೇಕು. ಪರಿಹಾರ ಆಗುವವರೆಗೂ ಮೇಲ್ವಿಚಾರಣೆ ಮಾಡಬೇಕು. ಕಾಮಗಾರಿಗಳಿಂದಾಗಿ ರಸ್ತೆಗಳಲ್ಲಿ ಉಂಟಾಗುವ ಗುಂಡಿಗಳು ಹಾಗೂ ಹಾನಿಗೊಳಗಾದ ಭಾಗಗಳನ್ನು ತ್ವರಿತವಾಗಿ ಗುರುತಿಸಿ ದುರಸ್ತಿ ಮಾಡಬೇಕು. ಅಪಾಯ ತಂದೊಡ್ಡುವ ಗುಂಡಿಗಳ ರಿಪೇರಿಗೆ ಆದ್ಯತೆ ನೀಡಬೇಕು.

ರಸ್ತೆ ಸಂಬಂಧಿ ಕಾಮಗಾರಿ ನೆಸುವಾಗ ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಬ್ಯಾರಿಕೇಡ್ ಗಳನ್ನು ಅಳವಡಿಸಿ, ಸಂಚಾರಕ್ಕೆ ಅಡಚಣೆಯಾಗದಂತೆ ವ್ಯವಸ್ಥೆ ಮಾಡಬೇಕು.

KPTCL ಪ್ರಸರಣ ಮಾರ್ಗಗಳ ಸುರಕ್ಷತಾ ನಿಯಮ ಪಾಲನೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) 220 ಕೆವಿ ಪ್ರಸರಣ ಮಾರ್ಗಗಳಿಗೆ ಸಂಬಂಧಿಸಿದಂತೆ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ನಿಗದಿತ ಸುರಕ್ಷತಾ ನಿಯಮಗಳು ಹಾಗೂ ಅಗತ್ಯ ಸುರಕ್ಷತಾ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರು ಮತ್ತು ಕಾಮಗಾರಿ ನಿರ್ವಹಿಸುವ ಸಿಬ್ಬಂದಿಗೆ ಅಪಾಯ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+