ಡಿಆರ್ ಡಿಒ ನಿವೃತ್ತ ಅಧಿಕಾರಿ ಕೊಲೆಮಾಡಿ ದರೋಡೆ
ಬೆಂಗಳೂರು. ಫೆ. 11: ಡಿಆರ್ ಡಿಒದ ನಿವೃತ್ತ ಅಧಿಕಾರಿಯೊಬ್ಬರನ್ನು ಕೊಲೆಗೈದು, ಅವರ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆ ದೋಚಿದ್ದ ನಾಲ್ವರು ಆರೋಪಿಗಳಲ್ಲಿ ಒಬ್ಬ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಹದೇವಪುರದ ಅಪಾರ್ಟ್ ಮೆಂಟ್ ವೊಂದರ ಮೊದಲನೇ ಮಹಡಿಯಲ್ಲಿ ವಾಸವಿದ್ದ ನಿವೃತ್ತ ಅಧಿಕಾರಿ ರಾಜಪ್ಪನ್ ಪಿಳೈ(70) ಅವರನ್ನು ಮಂಗಳವಾರ ಹತ್ಯೆ ಮಾಡಲಾಗಿದೆ. ಅವರ ಹೆಂಡತಿ ಉಷಾ(60) ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, 10 ಲಕ್ಷ ರೂ. ಗೂ ಅಧಿಕ ಮೌಲ್ಯದ ವಸ್ತುಗಳನ್ನು ದೋಚಿ ಆರೋಪಿಗಳು ಪರಾರಿಯಾಗುತ್ತಿದ್ದರು.[ಚಿನ್ನದ ಓಲೆ ಕೊಡದಿದ್ದಕ್ಕೆ ಜ್ಯೂನಿಯರ್ ಕೊಂದ ವಿದ್ಯಾರ್ಥಿನಿ]

ಈ ಸಂದರ್ಭ ಉಷಾ ಕೂಗಿಕೊಂಡಾಗ ಅಕ್ಕಪಕ್ಕದವರು ನೆರವಿಗೆ ಧಾವಿಸಿದ್ದಾರೆ. ಪೊಲೀಸರ ಸಹಕಾರದಲ್ಲಿ ಆರೋಪಿಗಳನ್ನು ಬೆನ್ನಟ್ಟಿದ್ದಾರೆ, ದರೋಡೆಕೋರರ ಪೈಕಿ ಒಬ್ಬ ಕೈಗೆ ಸಿಕ್ಕಿಬಿದ್ದಿದ್ದಾನೆ
ದರೋಡೆಕೋರರ ಗುಂಪಿನಲ್ಲಿ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ಸಹ ಸೇರಿದ್ದಾನೆ. ಈತನನ್ನು ಗುತ್ತಿಗೆ ಆಧಾರದಲ್ಲಿ ಕಳೆದ 15 ದಿನಗಳ ಹಿಂದೆ ನೇಮಕ ಮಾಡಿಕೊಳ್ಳಲಾಗಿತ್ತು.












Click it and Unblock the Notifications