ಬೆಂಗಳೂರು: ಆನ್‌ಲೈನ್ ಫುಡ್ ಆ್ಯಪ್ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ: ಆಗಸ್ಟ್ 15ರಿಂದ ಸ್ವಿಗ್ಗಿ ಬಹಿಷ್ಕಾರ ?

ಬೆಂಗಳೂರಿನ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರಲ್ಲೂ 'ಸ್ವಿಗ್ಗಿ' ಸಂಸ್ಥೆಯ ವಿರುದ್ಧ ಸಮರ ಸಾರಿದ್ದಾರೆ. ಸಂಸ್ಥೆಯು ವಿಧಿಸುತ್ತಿರುವ ಅಪಾರ ಪ್ರಮಾಣದ ಕಮಿಷನ್, ಕಡ್ಡಾಯ ರಿಯಾಯಿತಿಗಳು ಹಾಗೂ ಏಕಪಕ್ಷೀಯ ನಿಯಮಗಳಿಂದಾಗಿ ಹೋಟೆಲ್ ಉದ್ಯಮ ಕಂಗೆಟ್ಟಿದ್ದು, ಇದೇ ಮುಂಬರುವ ಆಗಸ್ಟ್ 15ರ ಒಳಗೆ ತಮ್ಮ ಬೇಡಿಕೆಗಳನ್ನ ಈಡೇರಿಸದಿದ್ದರೆ ಸ್ವಿಗ್ಗಿ ಸೇವೆಯನ್ನ ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಆನ್‌ಲೈನ್ ಆಹಾರ ವಿತರಣಾ ಆ್ಯಪ್‌ಗಳಿಂದಾಗಿ ಸಣ್ಣ ಮತ್ತು ಮಧ್ಯಮ ಹೋಟೆಲ್‌ಗಳು ಭಾರಿ ಆರ್ಥಿಕ ನಷ್ಟ ಅನುಭವಿಸುತ್ತಿವೆ ಎಂಬ ದೂರುಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದವು. ಇದೀಗ ಬೆಂಗಳೂರು ಹೋಟೆಲ್ ಸಂಘ, ಕರ್ನಾಟಕ ಹೋಟೆಲ್ ಸಂಘ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಂಡ್ ಬಾರ್ ಅಸೋಸಿಯೇಷನ್ ಒಗ್ಗೂಡಿ ಈ ಶೋಷಣೆಯ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.

Bengaluru

ಸ್ವಿಗ್ಗಿ ವಿರುದ್ಧ ಕಮಿಷನ್ ಶೋಷಣೆ ಆರೋಪ

ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷರಾದ ಪಿ.ಸಿ. ರಾವ್ ಅವರು ಸ್ವಿಗ್ಗಿ ಸಂಸ್ಥೆಯ ನಿಯಮಬಾಹಿರ ಹಣ ಕಡಿತ ವ್ಯವಸ್ಥೆಯನ್ನ ಕಟುವಾಗಿ ಟೀಕಿಸಿದ್ದಾರೆ. "ಆ್ಯಪ್ ಮೂಲಕ ₹1 ಲಕ್ಷ ಮೌಲ್ಯದ ವ್ಯಾಪಾರ ನಡೆದರೆ, ಕಮಿಷನ್, ಡಿಸ್ಕೌಂಟ್, ಆಡ್ ಚಾರ್ಜ್ ಮತ್ತು ಇತರ ಕಡಿತಗಳ ನಂತರ ಹೋಟೆಲ್ ಮಾಲೀಕರ ಕೈಗೆ ಸಿಗುವುದು ಕೇವಲ ₹40,000 ದಿಂದ ₹45,000 ಮಾತ್ರ. ಉಳಿದ ಶೇ. 55ರಿಂದ 60ರಷ್ಟು ಹಣವನ್ನು ಸ್ವಿಗ್ಗಿ ಸಂಸ್ಥೆಯೇ ನಾನಾ ನೆಪ ಕೊಟ್ಟು ಕಟ್ಟು ಮಾಡಿಕೊಳ್ಳುತ್ತಿದೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ರೀತಿಯ ಅತಿಯಾದ ಶೋಷಣೆಯಿಂದಾಗಿ ಹೋಟೆಲ್ ಮಾಲೀಕರು, ನೌಕರರು ಹಾಗೂ ಗ್ರಾಹಕರು ಇಬ್ಬರೂ ತೊಂದರೆ ಅನುಭವಿಸುವಂತಾಗಿದೆ. ಸಂಸ್ಥೆಯು ನೀಡುವ ಡಿಸ್ಕೌಂಟ್‌ಗಳನ್ನಾ ಸಹ ಹೋಟೆಲ್‌ಗಳ ಮೇಲೆಯೇ ಹೇರಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹೋಟೆಲ್ ಸಂಘ ನೀಡಿದ ಪ್ರಮುಖ ಬೇಡಿಕೆಗಳು

ಹೋಟೆಲ್ ಮಾಲೀಕರು ಸ್ವಿಗ್ಗಿ ಮುಂದೆ ತಮ್ಮ ಕೆಲವು ಪ್ರಮುಖ ಬೇಡಿಕೆಗಳನ್ನ ಇಟ್ಟಿದ್ದಾರೆ:

1. ಗ್ರಾಹಕರಿಂದ ದೂರು ಬಂದ ತಕ್ಷಣವೇ ಹೋಟೆಲ್‌ಗಳ ಕಡೆಯಿಂದ ಸ್ಪಷ್ಟನೆ ಪಡೆಯದೆ ಹಣವನ್ನ ತಕ್ಷಣವೇ ಕಟ್ಟ ಮಾಡಿಕೊಳ್ಳುವುದನ್ನಾ ನಿಲ್ಲಿಸಬೇಕು.

2. ಆಹಾರ ತಯಾರಾದ ನಂತರ ಗ್ರಾಹಕರು ಆರ್ಡರ್ ರದ್ದುಗೊಳಿಸಿದರೆ, ಆ ನಷ್ಟವನ್ನು ಹೋಟೆಲ್ ಬದಲಿಗೆ ಸಂಸ್ಥೆಯೇ ಭರಿಸಬೇಕು.

3. ಪಾರದರ್ಶಕತೆ: ಜಾಹೀರಾತು ವೆಚ್ಚ ಮತ್ತು ಪೇಮೆಂಟ್ ಗೇಟ್‌ವೇ ಶುಲ್ಕಗಳ ಕಡಿತದ ಬಗ್ಗೆ ಸ್ಪಷ್ಟ ಮತ್ತು ವಿಸ್ತೃತ ವರದಿ ನೀಡಬೇಕು.

4. ಹೋಟೆಲ್ ಮಾಲೀಕರ ಸಮ್ಮತಿ ಇಲ್ಲದೆ ಯಾವುದೇ ರೀತಿಯ ರಿಯಾಯಿತಿಗಳನ್ನ ಗ್ರಾಹಕರಿಗೆ ನೀಡಬಾರದು.

5. ರಿಲೇಷನ್‌ಶಿಪ್ ಮ್ಯಾನೇಜರ್ ನೇಮಕ: ಪ್ರತಿಯೊಂದು ಹೋಟೆಲ್‌ಗೂ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ವ್ಯವಸ್ಥಾಪಕರನ್ನು ನೇಮಿಸಬೇಕು.

ಆಗಸ್ಟ್ 15ರ ಗಡುವು: ಝೊಮ್ಯಾಟೋಗೂ ವ್ಯಾಪಿಸುವ ಭೀತಿ

ಸ್ವಿಗ್ಗಿ ಆಡಳಿತ ಮಂಡಳಿಯು ತಕ್ಷಣವೇ ಹೋಟೆಲ್ ಸಂಘಟನೆಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಈ ಪ್ರಮುಖ ಬೇಡಿಕೆಗಳನ್ನಾ ಈಡೇರಿಸಬೇಕು ಎಂದು ಆಗ್ರಹಿಸಲಾಗಿದೆ. ಒಂದು ವೇಳೆ ಆಗಸ್ಟ್ 15ರ ಒಳಗಾಗಿ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ, ನಗರದ ಎಲ್ಲ ಹೋಟೆಲ್‌ಗಳು ಸ್ವಿಗ್ಗಿ ಫ್ಲ್ಯಾಟ್‌ ಫಾರ್ಮ್‌ನಿಂದ ಸಂಪೂರ್ಣವಾಗಿ ಹೊರಬರಲಿವೆ.

ಅಷ್ಟೇ ಅಲ್ಲದೆ, ಸ್ವಿಗ್ಗಿಯ ಪ್ರಮುಖ ಕಾಂಪಿಟೇಟರ್‌ ಸಂಸ್ಥೆಯಾದ 'ಝೊಮ್ಯಾಟೋ' ಸಹ ಇದೇ ರೀತಿಯ ನೀತಿಗಳನ್ನು ಅನುಸರಿಸುತ್ತಿದ್ದರೆ, ಆಗಸ್ಟ್ 15ರ ನಂತರ ಅದನ್ನೂ ಸಹ ಬಹಿಷ್ಕರಿಸಲಾಗುವುದು ಎಂದು ಪಿ.ಸಿ. ರಾವ್ ಸ್ಪಷ್ಟಪಡಿಸಿದ್ದಾರೆ. ನ್ಯಾಯಯುತ ಪಾಲುದಾರಿಕೆಗೆ ಸಂಸ್ಥೆಗಳು ಒಪ್ಪಿಕೊಂಡರೆ ಮಾತ್ರ ಉದ್ಯಮ ಮುಂದುವರಿಯಲಿದೆ, ಇಲ್ಲವಾದರೆ ನಗರವ್ಯಾಪಿ ಸೇವೆಯನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+