Bengaluru Rent House: ಬೆಂಗಳೂರಲ್ಲಿ ಮನೆ ಹುಡುಕುವವರಿಗೆ ಹೊಸ ಪ್ರಾಬ್ಲಮ್, ಏನದು ?
ಬೆಂಗಳೂರಲ್ಲಿ ಮನೆ ಹುಡುಕುವುದೆಂದರೆ ಬಹುದೊಡ್ಡ ಸವಾಲು. ಬೀದಿ ಬೀದಿ ಸುತ್ತಿದರೂ ಮನೆ ಸಿಗೋದೇ ಇಲ್ಲ. ಇನ್ನು ಮನೆ ಸಿಕ್ಕರೂ ಅದು ನಮ್ಮ ಅಭಿರುಚಿ ಹಾಗೂ ಬಜೆಟ್‌ನಲ್ಲಿ ಇರೋದಿಲ್ಲ. ಬ್ಯಾಚುಲರ್‌ಗಳಿಗಂತೂ ಮನೆ ಸಿಗುವುದು ತುಂಬಾ ರಿಸ್ಕಿ. ಆದರೆ, ಬೆಂಗಳೂರಲ್ಲಿ ಮನೆ ಹುಡುಕುವರಿಗೆ ಇದೀಗ ಹೊಸದೊಂದು ಸವಾಲು ಎದುರಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಮನೆ ಹುಡುಕುವವರಿಗೆ ಸಿಕ್ಕಾಪಟ್ಟೆ ಪ್ರಾಬ್ಲಂ ಇದೆ. ಆ ಪ್ರಾಬ್ಲಂಗಳು ತುಂಬಾ ಜನರಿಗೆ ಗೊತ್ತಿದೆ. ಆದರೆ, ಈ ಸಮಸ್ಯೆಯ ಬಗ್ಗೆ ಅಷ್ಟಾಗಿ ಗೊತ್ತಾಗಿರುವ ಸಾಧ್ಯತೆ ಕಡಿಮೆ. ಆ ಸಮಸ್ಯೆ ಏನು, ಬೆಂಗಳೂರಲ್ಲಿ ಮನೆ ಹುಡುಕುವುದಕ್ಕೆ ಇರುವ ಸಮಸ್ಯೆಗಳೇನು ಹಾಗೂ ಅದಕ್ಕೆ ಪರಿಹಾರವೇನು ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಬೆಂಗಳೂರೆಂದರೆ ಸಮುದ್ರ ಈ ಸಮುದ್ರದಲ್ಲಿ ಈಜಾಡೋದೆ ಒಂದು ದೊಡ್ಡ ಸಮಸ್ಯೆ. ಬೆಂಗಳೂರಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಒದ್ದಾಡೋದು ಮಾತ್ರವಲ್ಲ. ಮನೆ ಹುಡುಕುವುದಕ್ಕೂ ತುಂಬಾನೇ ಪರದಾಡ್ಬೇಕು. ತಿಂಗಳು ಗಟ್ಟಲೆ ಮನೆ ಹುಡುಕಿದರೂ ಮನೆ ಸಿಗದೆ ಇರುವುದು ಇದೆ. ಇನ್ನು ಬ್ರೋಕರ್‌ಗಳ ಮೂಲಕ ಮನೆ ಹುಡ್ಕೋಣ ಅಂದರೆ ಅವರು ಪೂರ್ತಿ ಒಂದು ತಿಂಗಳ ಬಾಡಿಗೆ ಕೊಡಿ ಅಂತಾರೆ. ಮನೆ ಹುಡುಕೋಕೆ ಸ್ವಲ್ಪ ಸ್ಥಿತಿವಂತರು ಇಲ್ಲ ಹಣ ಇರುವವರು ಒಂದು ತಿಂಗಳ ಬಾಡಿಗೆ ಕೊಡ್ಬೋದು. ಆದರೆ, ಬಡವರು ಹಾಗೂ ಮಧ್ಯಮ ವರ್ಗದವರು ಇದನ್ನು ನಿಭಾಯಿಸುವುದೇ ಸವಾಲು.

ಬ್ಯಾಚುಲರ್‌ಗಳಿಗೆ ಕಷ್ಟ: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬ್ಯಾಚುಲರ್‌ಗಳು ಮನೆ ಹುಡುಕಿಕೊಳ್ಳುವುದು ಸವಾಲಿನ ಕೆಲಸ ಬ್ಯಾಚುಲರ್ಸ್‌ಗಳು ಮನೆ ಹಾಳು ಮಾಡುತ್ತಾರೆ ಎಂದು ಇಲ್ಲವೇ ಕ್ಲೀನ್ ಆಗಿ ಇರಿಸಿಕೊಳ್ಳುವುದಿಲ್ಲ. ತುಂಬಾ ಗಲಾಟೆ ಮಾಡ್ತಾರೆ ಇಲ್ಲವೇ ತುಂಬಾ ಜನ ಫ್ರೆಂಡ್ಸ್ ಬರ್ತಾರೆ ಅಂತ ಕೆಲವು ಮನೆ ಮಾಲೀಕರು ಬೆಂಗಳೂರಲ್ಲಿ ಮನೆ ಬಾಡಿಗೆಗೆ ಕೊಡಲ್ಲ.
ಇನ್ನೂ ಒಂದು ಕಾರಣ ಎಂದರೆ, ಫ್ಯಾಮಿಲಿಗಳು ಇರುವ ಜಾಗದಲ್ಲಿ ಬ್ಯಾಚುಲರ್ಸ್‌ಗಳಿಗೆ ಮನೆ ಬಾಡಿಗೆಗೆ ಕೊಟ್ಟರೆ ಬಾಕಿ ಇರುವವರು ಒಪ್ಪಿಕೊಳ್ಳಲ್ಲ ಇಲ್ಲ ಮುಜುಗರ ಆಗುತ್ತೆ ಅನ್ನೋ ಕಾರಣನೂ ಇದೆ. ಆದರೆ, ಬ್ಯಾಚುಲರ್ಸ್‌ಗಳಿಗೆ ಮನೆ ಕೊಡಲು ಮೊದಲು ಮನೆ ಕೊಡಲು ಹಿಂದೆ ಮುಂದೆ ನೋಡುತ್ತಿದ್ದವರೂ ಸಹ ಇದೀಗ ಸ್ವಲ್ಪ ಬದಲಾಗಿದ್ದಾರೆ. ಈಗ ಬ್ಯಾಚುಲರ್ಸ್‌ಗಳಿಗೂ ಕಷ್ಟವಿಲ್ಲದೆ ಒಂದಷ್ಟು ಕಡೆ ಮನೆಗಳು ಸಿಗ್ತಿವೆ. ಆದರೆ, ಇದೀಗ ನಾನ್‌ವೆಜ್ (ಮಾಂಸ ಸೇವಿಸುವವರು) ಪ್ರಿಯರಿಗೆ ಹೊಸ ಆಘಾತ ಶುರುವಾಗಿದೆ.
ನಾನ್‌ವೆಜ್ ಪ್ರಿಯರಿಗೆ ಸಿಗ್ತಿಲ್ಲ ಮನೆ!
ಬೆಂಗಳೂರಲ್ಲಿ ನಾನ್‌ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ. ಹೌದು ಬೆಂಗಳೂರಿನ ಹಲವು ಭಾಗದಲ್ಲಿ ಇಂದಿಗೂ ಸಸ್ಯಹಾರಿಗಳಿಗೆ ಮಾತ್ರ. ಪ್ಯೂರ್ ವೆಜ್ ಗೆ ಮಾತ್ರ ಮನೆ ಬಾಡಿಗೆಗೆ ಕೊಡಲಾಗುವುದು ಎನ್ನುವ ಬೋರ್ಡ್‌ಗಳು ಕಾಣಿಸುತ್ತಿವೆ. ಇದನ್ನು ನೋಡಿ ಮಾಂಸ ಪ್ರಿಯರು ಶಾಕ್ ಆಗ್ತಿದ್ದಾರೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಈ ರೀತಿ ಹೆಚ್ಚು ಬೋರ್ಡ್‌ಗಳು ಕಾಣಸಿಗುತ್ತವೆ. ಮಾಂಸ ತಿನ್ನುವವರಿಗೆ ಮನೆ ಕೊಡಲ್ಲ ಅಂತ ಓನರ್‌ಗಳು ನಿಯಮ ಅಳವಡಿಸಿಕೊಂಡಿದ್ದಾರೆ.
ಜಾತಿ ಕೇಳುವ ಪ್ರವೃತ್ತಿ: ನಗರಗಳಲ್ಲಿ ಜಾತಿ ಎಲ್ಲ ಯಾರು ನೋಡ್ತಾರೆ ಬಿಡ್ರಿ ಅನ್ನೋ ಮಾತು ಸುಳ್ಳು. ಈಗ ಬೆಂಗಳೂರಲ್ಲೂ ಕೆಲವು ಮನೆ ಮಾಲೀಕರು ಜಾತಿ ನೋಡಿಯೇ ಮನೆ ಕೊಡ್ತಿದ್ದಾರೆ. ಕೆಲವು ಮನೆಯ ಮಾಲೀಕರು ನಿಮ್ಮ ಜಾತಿ ಯಾವುದು ಅಥವಾ ನಿಮ್ಮ ಮನೆಯ ದೇವರು ಯಾರು ಎಂದು ಸೂಚ್ಯಕವಾಗಿಯೇ ಕೇಳುತ್ತಿದ್ದಾರೆ. ನಿರ್ದಿಷ್ಟ ಜಾತಿಯವರಿಗೆ ಮಾತ್ರ ಮನೆ ಕೊಡ್ತೀವಿ. ನೀವು ಮಾಂಸ ತಿಂದರೂ ಪರವಾಗಿಲ್ಲ ನಿರ್ದಿಷ್ಟ ಜಾತಿಗೆ ಸೇರಿದ್ದರೆ ನಮಗೆ ಸಮಸ್ಯೆ ಇಲ್ಲ ಎನ್ನುತ್ತಿದ್ದಾರೆ.
ಬೆಂಗಳೂರಿನಲ್ಲಿ ಮನೆ ಹುಡುಕುವವರು ನಿತ್ಯವೂ ಭಿನ್ನ ಅನುಭವ ಪಡೆಯುತ್ತಿದ್ದಾರೆ. ಅಲ್ಲದೇ ಮನೆ ಮಾಲೀಕರ ಷರತ್ತುಗಳನ್ನು ನೋಡಿ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.












Click it and Unblock the Notifications