Bengaluru Rent: ಬೆಂಗಳೂರಿನ ಮನೆ ಬಾಡಿಗೆ ದರಗಳಲ್ಲಿ ಭಾರೀ ಏರಿಕೆ- ಅಂಕಿಅಂಶ, ಮಾಹಿತಿ, ವಿವರ

ಬೆಂಗಳೂರು, ನವೆಂಬರ್‌ 09: ಬೆಂಗಳೂರು ಮಹಾನಗರ ಸೇರಿದಂತೆ ದೇಶದ ಪ್ರಮುಖ ಐಟಿ ಹಬ್‌ಗಳಾದ ಹೈದರಾಬಾದ್‌ ಹಾಗೂ ಪುಣೆಯಲ್ಲಿ ಮನೆ ಬಾಡಿಗೆ ದರಗಳು ಭಾರೀ ಏರಿಕೆ ಕಂಡಿವೆ. ಇತ್ತೀಚಿನ ಸಂಶೋಧನಾ ಮಾಹಿತಿಯ ಪ್ರಕಾರ, 2023 ರ ಮೊದಲ ಒಂಬತ್ತು ತಿಂಗಳಲ್ಲಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ವಸತಿ ಬಾಡಿಗೆಗಳು ಶೇ 30 ಕ್ಕಿಂತ ಹೆಚ್ಚಿವೆ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 1,000 ಚದರ ಅಡಿ ಮನೆ ಬಾಡಿಗೆ ಶೇ 31 ರಷ್ಟು ಏರಿಕೆ ಕಂಡಿವೆ. ಆ ನಂತರ ಸರ್ಜಾಪುರ ರಸ್ತೆಯಲ್ಲಿ ಮನೆಗಳ ಬಾಡಿಗೆ ಶೇ 27 ರಷ್ಟು ಏರಿಕೆಯಾಗಿದೆ.

ವೈಟ್‌ಫೀಲ್ಡ್‌ನಲ್ಲಿ 1,000 ಚದರ ಅಡಿಗಳ 2 ಬಿಎಚ್‌ಕೆ ಮನೆಯ ಸರಾಸರಿ ಮಾಸಿಕ ಬಾಡಿಗೆಯು 2022ರ ಅಂತ್ಯಕ್ಕೆ ತಿಂಗಳಿಗೆ 24,600 ರೂಪಾಯಿಗಳಿತ್ತು. 2023 ರ ಸೆಪ್ಟೆಂಬರ್ ಅಂತ್ಯಕ್ಕೆ ತಿಂಗಳಿಗೆ 28,500 ರೂಪಾಯಿ ಏರಿಕೆಯಾಗಿದೆ.

bengaluru-rent

ಸರ್ಜಾಪುರ ರಸ್ತೆಯಲ್ಲಿ ಸರಾಸರಿ ಮಾಸಿಕ ಬಾಡಿಗೆಗಳು ರೂ. 24,000 ರಿಂದ 30,500 ರೂ. ಏರಿಕೆಯಾಗಿದೆ.

ಕುತೂಹಲಕಾರಿಯಾಗಿ, ಬಾಡಿಗೆಗಳಲ್ಲಿ ಭಾರೀ ಏರಿಕೆ ಕಂಡಿರುವ ನಗರಗಳೆಂದರೆ ಹೈದರಾಬಾದ್‌ ಹಾಗೂ ಪುಣೆ ನಗರಗಳು. ಇವೆರಡೂ ನಗರಗಳು ಐಟಿ ಹಬ್‌ಗಳಾಗಿವೆ. ಹೈದರಾಬಾದ್ 2ನೇ ಅತ್ಯುತ್ತಮ ಬಾಡಿಗೆ ಮೌಲ್ಯದ ಬೆಳವಣಿಗೆಯನ್ನು ಕಂಡಿದೆ. ಈ ನಗರದಲ್ಲಿ ಶೇ 24 ರಷ್ಟು ಮನೆ ಬಾಡಿಗೆ ಏರಿಕೆಯಾಗಿದೆ.

2022ರ ಅಂತ್ಯದ ವೇಳೆಗೆ ಸರಾಸರಿ ಬಾಡಿಗೆ ತಿಂಗಳಿಗೆ 24,600 ರೂಪಾಯಿಗಳಿತ್ತು. 2023 ರ ಅಂತ್ಯದ ವೇಳೆಗೆ, ಇದು ತಿಂಗಳಿಗೆ 28,500 ರೂಪಾಯಿಗೆ ಏರಿಕೆಯಾಗಿದೆ.

bengaluru-rent

ಒಂಬತ್ತು ತಿಂಗಳ ಅವಧಿಯಲ್ಲಿ ಶೇ 16 ರಷ್ಟು ಏರಿಕೆ ಕಂಡಿದೆ. ಹೈದರಾಬಾದ್‌ನ ಗಚಿಬೌಲಿಯಲ್ಲಿ ಬಾಡಿಗೆಗಳು ಶೇ 24ರಷ್ಟು ಹೆಚ್ಚಾಗಿವೆ. 2022 ಅಂತ್ಯಕ್ಕೆ ತಿಂಗಳಿಗೆ ರೂ 23,400 ರಿಂದ ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ರೂ 29,000 ರಷ್ಟಾಗಿದೆ.

ಉತ್ತಮ ಬಾಡಿಗೆ ಮೌಲ್ಯಗಳ ಬೆಳವಣಿಗೆಯನ್ನು ಕಂಡ ಮೂರನೇ ಪ್ರಮುಖ ನಗರವೆಂದರೆ ಮಹಾರಾಷ್ಟ್ರದ ಪುಣೆಯಾಗಿದೆ. ಹಿಂಜೇವಾಡಿ ಮೈಕ್ರೋ-ಮಾರುಕಟ್ಟೆಯಲ್ಲಿ ಕಳೆದ ಒಂಬತ್ತು ತಿಂಗಳುಗಳಲ್ಲಿ ಶೇ 17 ರಷ್ಟು ಬಾಡಿಗೆ ಮೌಲ್ಯಗಳು ಹೆಚ್ಚಳವನ್ನು ಕಂಡಿದೆ. ಇಲ್ಲಿ ಸರಾಸರಿ ಬಾಡಿಗೆಗಳು 2022ರ ಅಂತ್ಯಕ್ಕೆ ತಿಂಗಳಿಗೆ 21,000 ರೂಪಾಯಿಗಳಿತ್ತು. 2023ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ತಿಂಗಳಿಗೆ 24,500 ರೂಪಾಯಿಗಳಾಗಿವೆ.

ಬೆಂಗಳೂರಿನ ಜೊತೆಗೆ ಇತರ ನಗರಗಳು ತಮ್ಮ ಪ್ರಮುಖ ಪ್ರದೇಶಗಳಲ್ಲಿ ಗಮನಾರ್ಹವಾದ ಬಾಡಿಗೆ ಮೌಲ್ಯಗಳ ಬೆಳವಣಿಗೆಯನ್ನು ದಾಖಲಿಸಿವೆ.

bengaluru-rent

ಹೈದರಾಬಾದ್‌ನಲ್ಲಿ ಹೈಟೆಕ್ ಸಿಟಿ ಮತ್ತು ಗಚಿಬೌಲಿಯು ಉನ್ನತ ಮಾರುಕಟ್ಟೆಗಳಾಗಿದ್ದು, ಬಾಡಿಗೆ ಮೌಲ್ಯಗಳು ಶೇ 16 ಮತ್ತು ಶೇ 24 ರಷ್ಟು ಏರಿಕೆ ಕಂಡಿವೆ.

ಪುಣೆಯಲ್ಲಿ ಹೆಚ್ಚಿನ ಬಾಡಿಗೆ ಬೆಳವಣಿಗೆಯನ್ನು ಹೊಂದಿರುವ ಎರಡು ಅತ್ಯುತ್ತಮ ಮಾರುಕಟ್ಟೆಗಳೆಂದರೆ ಹಿಂಜೆವಾಡಿ ಮತ್ತು ವಾಘೋಲಿ. ಇವು ಕ್ರಮವಾಗಿ ಶೇ 17 ಮತ್ತು ಶೇ 18 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಚೆನ್ನೈ ನಗರವು ಹೆಚ್ಚಿನ ಬಾಡಿಗೆ ಮೌಲ್ಯಗಳ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಲ್ಲಿನ ಪ್ರಮುಖ ಮಾರುಕಟ್ಟೆಗಳೆಂದರೆ ಪಲ್ಲವರಂ ಮತ್ತು ಪೆರಂಬೂರ್. ಈ ಅವಧಿಯಲ್ಲಿ ಬಾಡಿಗೆಗಳು ಕ್ರಮವಾಗಿ ಶೇ 12 ಮತ್ತು ಶೇ 9 ರಷ್ಟು ಬೆಳವಣಿಗೆಯನ್ನು ಕಂಡಿವೆ.

ಎನ್‌ಸಿಆರ್‌ ಪ್ರಮುಖ 3 ಮಾರುಕಟ್ಟೆಗಳೆಂದರೆ ಗುರುಗ್ರಾಮ್‌ದ ಸೋಹ್ನಾ ರಸ್ತೆ (ಬಾಡಿಗೆ ಮೌಲ್ಯಗಳು ಶೇ 11 ರಷ್ಟು ಹೆಚ್ಚಾಗಿದೆ), ನೋಯ್ಡಾದಲ್ಲಿ ಸೆಕ್ಟರ್-150 ( ಶೇ 13ರಷ್ಟು ಬೆಳವಣಿಗೆ ಕಂಡಿದೆ ) ಮತ್ತು ದೆಹಲಿಯ ದ್ವಾರಕಾ ( ಶೇ 14ರಷ್ಟು ಬೆಳವಣಿಗೆ ಕಂಡಿದೆ.

ಮುಂಬೈನಲ್ಲಿ ಬಾಡಿಗೆ ಮೌಲ್ಯ ಹೆಚ್ಚಳವನ್ನು ಕಂಡ ಅಗ್ರ ಎರಡು ಮಾರುಕಟ್ಟೆಗಳೆಂದರೆ ಚೆಂಬೂರ್ ಮತ್ತು ಮುಲುಂಡ್. ಇದು ಕ್ರಮವಾಗಿ ಶೇ 14 ಮತ್ತು ಶೇ 9 ರಷ್ಟು ಬೆಳವಣಿಗೆಯನ್ನು ಕಂಡಿದೆ.

2023 ರಲ್ಲಿ ಹೆಚ್ಚಿನ ಬಾಡಿಗೆ ಮೌಲ್ಯದ ಬೆಳವಣಿಗೆಗೆ ಕೋಲ್ಕತ್ತಾವೂ ಸಾಕ್ಷಿಯಾಗಿದೆ. ಇಲ್ಲಿನ ಅಗ್ರ ಎರಡು ಮಾರುಕಟ್ಟೆಗಳೆಂದರೆ ಇಎಂ ಬೈಪಾಸ್ ಮತ್ತು ರಾಜರ್ಹತ್. ಇದು ಕ್ರಮವಾಗಿ ಶೇ 14 ಮತ್ತು ಶೇ 9 ರಷ್ಟು ಬೆಳವಣಿಗೆಯನ್ನು ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+