Bengaluru Rent: ಮನೆ ಬಾಡಿಗೆ ಶೇ.50 ಹೆಚ್ಚಿಸಿದ ದುರಾಸೆಯ ಮಾಲೀಕ!, ಪ್ರಶ್ನಿಸಿದ್ದಕ್ಕೆ ಮನೆ ಖಾಲಿಗೆ ಒತ್ತಾಯ, ವ್ಯಾಪಕ ಚರ್ಚೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದು ನಡುವೆ ವಾರ್ಷಿಕವಾಗಿ ಶೇ.20ರಷ್ಟು ಅಧಿಕ ಬಾಡಿಗೆ ಕಟ್ಟಿದರೂ ಸಹಿತ ಮತ್ತೆ ಶೇ.50ರಷ್ಟು ಬಾಡಿಗೆ ಏರಿಕೆ ಮುಂದಾಗಿದ್ದಾರೆ. ಇದನ್ನು ಮಾಲೀಕರ ಬಳಿ ಪ್ರಶ್ನಿಸಿದ್ದಕ್ಕೆ ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ ಎಂದು ಬೆಂಗಳೂರು ಮೂಲದ ಉದ್ಯಮಿ ಮತ್ತು ನಟ ವಸಂತ್ ಮಾರಿಮುತ್ತು ಅವರು ಆರೋಪಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಆಸ್ತಿಗಳು, ಮನೆ ಬಾಡಿಗೆ ಬೆಲೆ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ ಇಂದಿನ ದಿನಗಳಲ್ಲಿ ಮನೆ ಬಾಡಿಗೆಯನ್ನು ವಾರ್ಷಿಕವಾಗಿ ಶೇ. 5-10ರಷ್ಟು ಹೆಚ್ಚಿಸಿದರೆ ಒಪ್ಪಬಹುದು. ಆದರೆ ಅದಕ್ಕೂ ಹೆಚ್ಚು ಕೇಳಿದರೆ ಬಾಡಿಗಾರರು ಏನು ಮಾಡಬೇಕು? ಇಂಥದ್ದೇ ಸಮಸ್ಯೆಯನ್ನು ಈ ಮಾರಿಮುತ್ತುವರಿ ಎದುರಿಸಿದ್ದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಶೇ.20ರಷ್ಟು ಬಾಡಿಗೆ ಪಾವತಿ, ಇದೀಗ ಮತ್ತೆ ಏರಿಕೆ
ತಾವಿದ್ದ ಮನೆಯ ಮಾಲೀಕರಿಗೆ ಪ್ರತಿ ತಿಂಗಳು ಸರಿಯಾಗಿ ಮನೆ ಬಾಡಿಗೆ ಪಾವಿಸುತ್ತಾ ಬಂದಿದ್ದೇವೆ. ಪ್ರತಿ ವರ್ಷ ಶೇ.5-10ರಷ್ಟು ವಾರ್ಷಿಕ ಬಾಡಿಗೆ ದರ ಏರಿಕೆ ಸಮಂಜಸ ಅನ್ನಬಹುದು. ಬಾಡಿಗೆ ನವೀಕರಣ ವೇಳೆ ಶೇ.20ರಷ್ಟು ಮನೆ ಬಾಡಿಗೆ ದರ ಹೆಚ್ಚಿಸಿದಾಗಲೂ ನಾವು ಪಾವತಿಸಿದ್ದೇವೆ. ಆದರೆ ಈ ವರ್ಷ ಶೇ. 50ರಷ್ಟು ಹೆಚ್ಚಳ ಕೇಳಿದ್ದಾರೆ. ಹಾಗಾದರೆ ನಾವು ಹೊಸದಾಗಿ ಅಗ್ರಿಮೆಂಟ್ ಮಾಡಿಕೊಳ್ಳೋಣ ಎಂದು ಕೇಳಿದೆ. ಆ ಬಗ್ಗೆ ಅವರು ಮಾತನಾಡಲಿಲ್ಲ. ಬಳಿಕ ಹೆಚ್ಚಳ ಪ್ರಶ್ನಿಸಿದ್ದಕ್ಕೆ ಒಂದು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ತಿಳಿಸಿದ್ದಾರೆ ಎಂದು ಅವರು ದೂರಿದರು.
ಮೊದಲಿಗೆ ದುಪ್ಪಟ್ಟು ಬಾಡಿಗೆ ಹಣ ಕೇಳಿದ್ದನ್ನು ನಾವು ಪ್ರಶ್ನಿಸಿದೆವು. ಆಗ ಸುಮ್ಮನಾಗಿ ಒಂದು ವಾರದ ಬಳಿಕ ಬಂದ ಮನೆ ಮಾಲೀಕರು ಈ ಮನೆ ತಮ್ಮ ಸಹೋದರಿಗೆ ಬೇಕಿದೆ. ನೀವು ಖಾಲಿ ಮಾಡಿ ಎಂದು ಒಂದು ತಿಂಗಳ ಗುಡುವು ನೀಡಿದ್ದಾರೆ ಎಂದು ತಿಳಿಸಿದ್ದಾರೆ. 'ದುಸಾಸೆಗೂ ಒಂದು ಮಿತಿ ಇರಬೇಕು, ಈ ಮಾಲೀಕರಲ್ಲಿ ಅದಿಲ್ಲ' ಎಂದು ಅವರು ಪೋಸ್ಟ್‌ನೊಂದಿಗೆ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಅನೇಕರು ಬೆಂಗಳೂರಿನಲ್ಲಿ ಅಸ್ತಿ ಬೆಲೆ, ಬಾಡಿಗೆ ದರ ಹೆಚ್ಚಳ, ಮಾಲೀಕರ ವರ್ತನೆ ಕುರಿತ ಭರ್ಜರಿ ಚರ್ಚೆ ನಡೆಸಿದ್ದಾರೆ.
ಬಾಡಿಗೆ ಹಣದಲ್ಲಿ ಮನೆ ಖರೀದಿಸಿದೆ! ನೆಟ್ಟಿಗರು ಹೇಳಿದ್ದೇನು?
ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಒಬ್ಬರು, 'ಆ ಮನೆ ಮಾಲೀಕಳಿಗೆ ನಿಮ್ಮನ್ನು ಖಾಲಿ ಮಾಡಿಸುವ ಉದ್ದೇಶ ಹೊಂದಿದ್ದಾರೆ ಅನ್ನಿಸುತ್ತದೆ. ಅದಕ್ಕೆ ಶೇ.50ರಷ್ಟು ಬಾಡಿಗೆ ಹೆಚ್ಚಳ ಕೇಳಿದ್ದಾರೆ. ನೀವು ಅದಕ್ಕೂ ಒಪ್ಪಿಕೊಂಡಿದ್ದರೆ ಬೇರೊಂದು ಕಾರಣ ಹೇಳಿ ಖಾಲಿ ಮಾಡಿಸುತ್ತಿದ್ದರು' ಎಂದು ತಿಳಿಸಿದ್ದಾರೆ. ಈ ಮೂಲಕ ಮನೆ ಖಾಲಿ ಮಾಡಿಸಬೇಕಾದರೆ ಇಂತಹ ವರ್ತನೆಗಳ ಸಹಜ ಎಂಬಂತೆ ಅವರು ತಿಳಿಸಿದ್ದಾರೆ.
Our landlady has been consistently hiking the rent every tenure (above the normal 5% or 10%) which is the normal - this year when she asked for a 50% hike, I requested her to make a fresh agreement - after a week, she comes back saying she needs the place for her sister moving in…
— Vasant Marimuthu (@VasantMarimuthu) August 2, 2026
ಇನ್ನೊಬ್ಬರು, ಮಾಲೀಕಳಿಗೆ ತನ್ನ ಮನೆ ವಾಪಾಸ್ ಬೇಕಾದರೆ ಬಾಡಿಗೆ ನವೀಕರಣ ವಿಸ್ತರಣೆ ಮಾಡುತ್ತಿಲ್ಲ ಎಂದು ಹೇಳಬಹುದಿತ್ತು. ಆದರೆ ಅವರು ಹಾಗೆ ಮಾಡದೇ ತಮ್ಮ ಸಹೋದರಿಗೆ ಮನೆ ಬೇಕು ಎಂದು ನೆಪ ಹೇಳಿದ್ದಾರೆ' ಎಂದು ಹೇಳಿದ್ದಾರೆ. ಮೂರನೇಯವರು 'ಇದೆಲ್ಲ ಸುಳ್ಳು ಆರೋಪಗಳು ನಾನು ಇದೇ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಜೆಪಿ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆ ಬಾಡಿಗೆ ಹೆಚ್ಚಾಗಿದೆ. ಅದಕ್ಕಾಗಿ ನಾನು ಬಾಡಿಗೆ ಇರದೇ ಅದೇ ಹಣದಲ್ಲಿ ಇಎಂಐ ಕಟ್ಟಿಕೊಂಡು ಹೊಸ ಮನೆ ಖರೀದಿಸಿದ್ದೇನೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ


Click it and Unblock the Notifications
