Cold Wave Alert: ಬೆಂಗಳೂರಲ್ಲಿ 10 ವರ್ಷದ ದಾಖಲೆಯ ಚಳಿ! ಡಿ.19ರ ವರೆಗಿನ ಹವಾಮಾನ ಮುನ್ಸೂಚನೆ

Bengaluru Weather Forecast Report: ರಾಜಧಾನಿ ಬೆಂಗಳೂರಿನಲ್ಲಿ ದಶಕದ ದಾಖಲೆಯ ಚಳಿ ಕಂಡು ಬಂದಿದೆ. ಕಳೆದ ಮೂರು ದಿನಗಳಿಂದ ಮೈಕೊರೆವ ಚಳಿ ದಾಖಲಾಗುತ್ತಿದೆ. ಕನಿಷ್ಠ ತಾಪಮಾನ ಒಂಬತ್ತು ವರ್ಷಗಳ ಬಳಿಕ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಈ ಮೂಲಕ ಬೆಂಗಳೂರು ಜನರನ್ನು ಡಿಸೆಂಬರ್ ಚಳಿ ನಡುಗುವಂತೆ ಮಾಡಿದೆ. ಇಂದಿನಿಂದ ಮುಂದಿನ ಒಂದು ವಾರ (ಡಿಸೆಂಬರ್ 19)ರವರೆಗೆ ಇದೇ ಚಳಿ ಮುಂದುವರಿಯಲಿದೆ.

ಬೆಂಗಳೂರು ಮುಂದಿನ ದಿನಗಳಲ್ಲಿ ಅತ್ಯಧಿಕ ಚಳಿಯಿಂದ ಕೂಡಿದ ರಾತ್ರಿಗಳನ್ನು ಕಾಣಲಿದೆ. ಬೆಳಗ್ಗೆ ದಟ್ಟ ಮಂಜು, ತೇವಭರಿತ ಗಾಳಿ ಬೀಸಲಿದೆ. ಹಗಲು ಹೊತ್ತು ಗರಿಷ್ಠ ತಾಪಮಾನ ಹೆಚ್ಚಾಗುವ ನಿರೀಕ್ಷೆಗಳು ಇವೆ. ಹವಾಮಾನ ಇಲಾಖೆ ಪ್ರಕಾರ, 2026ರ ಬಳಿಕ ಬೆಂಗಳೂರಿನಲ್ಲಿ 12 ಡಿಗ್ರಿ ಸೆಲ್ಸಿಯಸ್‌ಗೆ ಚಳಿ ಇಳಿಕೆ ಆಗಿದೆ. ನೆನ್ನೆ ಶುಕ್ರವಾರ (ಡಿ.12) ಸಂಜೆ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (KIAL) ನಲ್ಲಿ ಕನಿಷ್ಠ ತಾಪಮಾನ 12.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿದೆ. 2016ರಲ್ಲಿ ಡಿಸೆಂಬರ್ 11ರಂದು ಅತೀ ಕಡಿಮೆ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅದನ್ನು ಬಿಟ್ಟರೆ ಇದೇ ವರ್ಷ ಡಿಸೆಂಬರ್‌ನಲ್ಲಿ (ಡಿ.12ರವೆಗಿನ ಮಾಹಿತಿ ಪ್ರಕಾರ) ಅತೀ ಕಡಿಮೆ ತಾಪಮಾನ ದಾಖಲಾಗಿದೆ ಎಂದು ವರದಿ ತಿಳಿಸಿದೆ.

Bengaluru Records Cold Weather After a Decade Heavy Cold continue till 19 December

ಬೆಂಗಳೂರು ನಗರದಲ್ಲಿ 15 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 15.2 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇದರೊಂದಿಗೆ ಬೆಂಗಳೂರಿನ ಯಲಹಂಕ, ಬನ್ನೇರುಘಟ್ಟ, ಹೆಸರಘಟ್ಟ, ಹೆಬ್ಬಾಳ, ಎಚ್‌ಎಸ್‌ಆರ್ ಬಡಾವಣೆ, ಜ್ಞಾನಭಾರತಿ, ಆರ್‌ಆರ್‌ ನಗರ, ವಿದ್ಯಾರಣ್ಯಪುರ, ಕೆಂಗೇರಿ ಸೇರಿದಂತೆ ವಿವಿಧ ಅನೇಕ ಬಡಾವಣೆಗಳು ಸಾಮಾನ್ಯಕ್ಕಿಂತ ಹೆಚ್ಚಿನ ತಂಪು ವಾತಾವರಣಕ್ಕೆ ಸಾಕ್ಷಿಯಾದವು.

07 ದಿನದ ಬೆಂಗಳೂರು ಹವಾಮಾನ ವರದಿ

ಬೆಂಗಳೂರಿನಲ್ಲಿ ತಾಪಮಾನ ಕುಸಿತವಾಗಿದೆ. ಆದರೆ ಬೆಂಗಳೂರಿಗೆ ಶೀತದ ಅಲೆ ಎಚ್ಚರಿಕೆ ಸದ್ಯಕ್ಕೆ ನೀಡಲಾಗಿಲ್ಲ. ಮುಂದಿನ ವಾರದ ಹೊತ್ತಿಗೆ ಕನಿಷ್ಠ ಉಷ್ಣಾಂಶ ಮತ್ತಷ್ಟು ಕುಸಿಯುವ ನಿರೀಕ್ಷೆಗಳು ಇವೆ. ಹಗಲು ಹೊತ್ತು 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರುವ ಮೂಲಕ ಶುಲ್ಕ ವಾತಾವರಣದ ಅನುಭವ ನೀಡಲಿದೆ.

ಇಂದಿನಿಂದ ಡಿಸೆಂಬರ್ 19ರವರೆಗೆ ಬೆಂಗಳೂರು ನಗರದಲ್ಲಿ ಅತೀವ ಚಳಿ ಕಂಡು ಬರಲಿದೆ. ನೀಲಿ ಸ್ಪಷ್ಟ ಆಕಾಶ ಕಂಡು ಬರುತ್ತದೆ. ಹಗಲು ಒಣಹವೆ ದಾಖಲಾದರೆ, ಸಂಜೆ ನಂತರ ರಾತ್ರಿಯಿಂದ ಬೆಳಗ್ಗೆ 09 ಗಂಟೆವೆರೆಗೆ ಚಳಿ ಉಂಟಾಗಲಿದೆ. ಸರಾಸರಿ ಕನಿಷ್ಠ ತಾಪಮಾನ 15-16 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದ್ದು, ಕೆಲವೆಡೆ ನಿರೀಕ್ಷೆಗಿಂತ ತಾಪಮಾನ ಕುಸಿಯಬಹುದು. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಭಾರತೀಯ ವಹವಾಮಾನ ಇಲಾಖೆ (ಐಎಂಡಿ) ಬೆಂಗಳೂರು ಕೇಂದ್ರವು ತನ್ನ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.

ದಿನೇ ದಿನೆ ಚಳಿ ಹೆಚ್ಚಾಗುತ್ತಿದ್ದು, ಮಹಿಳೆ, ಮಕ್ಕಳು ಹಾಗೂ ವೃದ್ಧರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಬೆಚ್ಚಗಿನ ಧಿರಿಸು ಧರಿಸಬೇಕು. ಆದಷ್ಟು ಚಳಿಯಿಂದ ರಕ್ಷಿಸಿಕೊಂಡು ಸುರಕ್ಷಿತವಾಗಿರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+