Bengaluru Real Estate: ಗಗನಕ್ಕೇರಿದ ಭೂಮಿ ಬೆಲೆ; ಬೆಂಗಳೂರಿನ ಹೊರವಲಯದ ಆಸ್ತಿ ಖರೀದಿಗೆ ಹೆಚ್ಚಿದ ಒಲವು
ಬೆಂಗಳೂರು ನಗರದಲ್ಲಿ ಭೂಮಿಗೆ ಮೊದಲಿನಿಂದಲೂ ಬಂಗಾರದ ಬೆಲೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಭೂಮಿ ಬೆಲೆಯು ವಿಪರೀತ ಎನ್ನುವಷ್ಟು ಹೆಚ್ಚಳವಾಗಿದೆ. ಭೂಮಿ ಹಾಗೂ ಪ್ರಾಪರ್ಟಿ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಬೆಂಗಳೂರು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಮನೆಗಳ ಬೆಲೆ ಏರಿಕೆ ಮುಂದುವರಿದಿರುವ ಬೆನ್ನಲ್ಲೇ, ದೆಹಲಿ-NCR ಮಾರುಕಟ್ಟೆಯಲ್ಲೂ ಮನೆ ಖರೀದಿದಾರರು ಕೈಗೆಟುಕುವ ಬೆಲೆಯ ಮನೆಗಳತ್ತ ಮುಖ ಮಾಡುತ್ತಿದ್ದಾರೆ.
ದೆಹಲಿ ಸುತ್ತಮುತ್ತಲಿನ ಭಾಗದಲ್ಲಿ ಪ್ರಾಪರ್ಟಿಗೆ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲೂ ಇದೇ ಮಾದರಿ ಅನುಸರಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಸ್ತಿದಾರರು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಸ್ತಿ ಖರೀದಿ ಮಾಡುವುದಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ. ಗುರುಗ್ರಾಮ್ ಮತ್ತು ನೋಯ್ಡಾದಲ್ಲಿ ಆಸ್ತಿ ಬೆಲೆ ಹೆಚ್ಚಳದಿಂದ ಬೇಡಿಕೆ ಕುಸಿಯುತ್ತಿದ್ದು, ಫರಿದಾಬಾದ್‌ನಂತಹ ಪ್ರದೇಶಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದೇ ವೇಳೆ, ಬೆಂಗಳೂರಿನಿಂದ ಹಣ ಗಳಿಸಿ ಬೇರೆ ನಗರಗಳಲ್ಲಿ ಆಸ್ತಿ ಖರೀದಿಸುವ ಪ್ರವೃತ್ತಿಯೂ ರಿಯಲ್ ಎಸ್ಟೇಟ್ ವಲಯದಲ್ಲಿ ಗಮನ ಸೆಳೆಯುತ್ತಿದೆ.

ಖರೀದಿದಾರರ ಆದ್ಯತೆಯಲ್ಲಿನ ಬದಲಾವಣೆಯು NCR ನಾದ್ಯಂತ ಹೊಸ ಪೂರೈಕೆಯ ವಿತರಣೆಯಲ್ಲಿಯೂ ಪ್ರತಿಫಲಿಸಿದೆ. ಗಾಜಿಯಾಬಾದ್, ನೋಯ್ಡಾ ಮತ್ತು ಫರಿದಾಬಾದ್‌ಗಳು Q2 ನಲ್ಲಿ ಗುರುಗ್ರಾಮ್‌ಗಿಂತ ಹೆಚ್ಚಿನ ಬೇಡಿಕೆಯನ್ನು ದಾಖಲಿಸಿವೆ. ಬೆಲೆಗಳು ಹೆಚ್ಚಾದಂತೆ ಎನ್‌ಸಿಆರ್ ಮನೆ ಖರೀದಿದಾರರು ಕೈಗೆಟುಕುವ ಬೆಲೆಯನ್ನು ನೋಡುತ್ತಿದ್ದಾರೆ. ದೆಹಲಿ- ಎನ್‌ಸಿಆರ್‌ನಲ್ಲಿ ಆಸ್ತಿ ಬೆಲೆಗಳು ಏರುತ್ತಿರುವುದು ವಸತಿ ಬೇಡಿಕೆ ಚರ್ಚೆಗೆ ಕಾರಣವಾಗಿದೆ. ಗುರುಗ್ರಾಮ್ ಮತ್ತು ನೋಯ್ಡಾದಲ್ಲಿ ಮನೆ ಖರೀದಿದಾರರ ಆಸಕ್ತಿಯಲ್ಲಿ ಕುಸಿತ ಕಂಡಿದೆ.
ನೋಬ್ರೋಕರ್‌ನ Q3 2026 ವಸತಿ ರಿಯಲ್ ಎಸ್ಟೇಟ್ ವರದಿಯ ಪ್ರಕಾರ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಗುರುಗ್ರಾಮ್‌ನಲ್ಲಿ ಬೇಡಿಕೆ ಶೇಕಡಾ 8 ಮತ್ತು ನೋಯ್ಡಾದಲ್ಲಿ 9 ಪ್ರತಿಶತದಷ್ಟು ಕುಸಿದಿದೆ, ಆದರೆ ಬೆಲೆಗಳು ಕ್ರಮವಾಗಿ ಶೇಕಡಾ 8 ಮತ್ತು 11 ಪ್ರತಿಶತದಷ್ಟು ಹೆಚ್ಚಾಗಿದೆ, ಇದು ಮನೆ ಖರೀದಿದಾರರ ಖರೀದಿ ಸಾಮರ್ಥ್ಯ ಮತ್ತು ಚಾಲ್ತಿಯಲ್ಲಿರುವ ಆಸ್ತಿ ಮೌಲ್ಯಗಳ ನಡುವಿನ ಅಂತರವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.
Bengaluru Real Estate: ಬೆಂಗಳೂರಿನ ಹೊರ ಭಾಗದ ಆಸ್ತಿ ಖರೀದಿಗೆ ಒಲವು
ಬೆಂಗಳೂರು ನಗರದಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಈಗಾಗಲೇ ಗಗನಮುಖಿಯಾಗಿದೆ. ಬೆಂಗಳೂರು ನಗರದಲ್ಲಿ ಆಸ್ತಿ ಖರೀದಿ ಮಾಡುವುದು ಮಧ್ಯಮ ವರ್ಗಕ್ಕೆ ಕನಸಿನ ಮಾತಾಗಿದೆ. ಹೀಗಾಗಿ, ಆಸ್ತಿ ಖರೀದಿ ಮಾಡುವ ಆಸಕ್ತಿ ಹೊಂದಿರುವ ಆಸ್ತಿದಾರರು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಹಾಗೂ ಪ್ರಾಪರ್ಟಿ ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಳವಾಗುವುದರೊಂದಿಗೆ ನಗರದ ಮೇಲೆ ಒತ್ತಡ, ಮೂಲಸೌಕರ್ಯ ಕೊರತೆ ಹಾಗೂ ವಿಪರೀತವಾದ ಟ್ರಾಫಿಕ್ ಜಾಮ್ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರು ನಗರದಲ್ಲಿ ಆಸ್ತಿ ಖರೀದಿ ಮಾಡುವುದಕ್ಕಿಂತಲೂ ಬೆಂಗಳೂರಿನ ಹೊರ ವಲಯದಲ್ಲಿ ಆಸ್ತಿ ಖರೀದಿ ಮಾಡುವುದು ಉತ್ತಮ ಎಂದು ಆಸ್ತಿದಾರರು ಭಾವಿಸಿದ್ದಾರೆ.


Click it and Unblock the Notifications
