Bengaluru Property: ಬೆಂಗಳೂರಿನ ಈ 6 ಜಾಗದಲ್ಲಿ ಭೂಮಿಗೆ ಚಿನ್ನದ ಬೆಲೆ!

Bengaluru Property: ಬೆಂಗಳೂರಿನಲ್ಲಿ ವಿವಿಧ ಕಾರಣಕ್ಕೆ ಭೂಮಿಯ ಬೆಲೆ ಹೆಚ್ಚಳವಾಗುತ್ತಲ್ಲೇ ಇದೆ. ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಚಿನ್ನದ ಮೊಟ್ಟೆಯಂತೆ ಇದೆ. ಬೆಂಗಳೂರಿನ ವಿವಿಧ ಭಾಗಕ್ಕೆ ಮೆಟ್ರೋ ಸೇವೆ ವಿಸ್ತರಣೆ, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ, ಕ್ವಿನ್‌ ಸಿಟಿ ಹಾಗೂ ಉಪ ನಗರದ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಕ್ಕೆ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಹೂಡಿಕೆ ಮಾಡುವುದು ಹೆಚ್ಚಳವಾಗುತ್ತಿದೆ. ಜನ ಈ ಭಾಗಗಳಲ್ಲಿ ಭೂಮಿ ಖರೀದಿ ಮಾಡುವುದು ಹಾಗೂ ಮಾರಾಟ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇದೀಗ ಬೆಂಗಳೂರಿನ ಈ ಆರು ಜಾಗದಲ್ಲೂ ಭೂಮಿಗೆ ಬಂಪರ್ ಬೆಲೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವ ನಿರೀಕ್ಷೆಯೂ ಇದೆ. ಅದೇನು ಎನ್ನುವ ವಿವರ ನೋಡೋಣ. ಬೆಂಗಳೂರಿನ ಆರು ಜಾಗದಲ್ಲಿ ಭೂಮಿ ಖರೀದಿ ಮಾಡುವುದು ಬೆಸ್ಟ್‌ ಅಂತಲೇ ಹೇಳಲಾಗುತ್ತದೆ ಅದರ ವಿವರ ಇಲ್ಲಿದೆ.

Bengaluru Real Estate Boom Property in These 6 Places Worth Gold

ಬೆಂಗಳೂರಿನ ಕೆಲವು ಭಾಗದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯ 3/1 ಮೂರನೇ ಒಂದು ಭಾಗದಷ್ಟು ಭೂಮಿಯ ಬೆಲೆ ಇದೆ. ಬೆಂಗಳೂರಿನ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ಕೋರಮಂಗಲ ಹಾಗೂ ಇಂದಿರಾನಗರದಲ್ಲಿ ಭೂಮಿ ಬೆಲೆ ಜಾಸ್ತಿ ಆಗುತ್ತಿದೆ. ಈ ಪ್ರದೇಶದಲ್ಲಿ ಭೂಮಿ ಬೆಲೆಯು ಪ್ರತಿ ಅಡಿಗೂ ಹೆಚ್ಚಳವಾಗುತ್ತಲ್ಲೇ ಇದೆ. ಇನ್ನು ಇಲ್ಲಿ ಕಮರ್ಷಿಯಲ್‌ ಬೆಲೆಯನ್ನು ಕೇಳುವುದೇ ಬೇಡ ಅದರ ಬೆಲೆ ಗಗನಮುಖಿಯಾಗುತ್ತಲ್ಲೇ ಇದೆ. ನಗರದ ಇಂದಿರಾ ನಗರ ಹಾಗೂ ಕೋರಮಂಗಲದಲ್ಲಿ ಪ್ರತಿ ಅಡಿ ಭೂಮಿಯ ಬೆಲೆಯು 18,000 ಸಾವಿರ ರೂಪಾಯಿಯಿಂದ 25,000 ಸಾವಿರ ರೂಪಾಯಿಗೆ ಮುಟ್ಟಿದೆ.

ಬೆಂಗಳೂರಿನ ಈ ಆರು ಭಾಗದಲ್ಲಿ ಭೂಮಿಗೆ ಭರ್ಜರಿ ಬೆಲೆ

ಇಂದಿರಾನಗರ & ಕೋರಮಂಗಲ: ನಗರದ ಎರಡು ಭಿನ್ನ ಪ್ರದೇಶಗಳಾದ ಇಂದಿರಾ ನಗರ ಹಾಗೂ ಕೋರಮಂಗಲದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಇದೆ. ಈ ಪ್ರದೇಶದಲ್ಲಿ ಪ್ರತಿ ಚದರ ಅಡಿ ಬೆಲೆ 30,000 ಸಾವಿರ ರೂಪಾಯಿ ಸಮೀಪಿಸುತ್ತಿರುವುದು ಸಹ ಇದೆ. ಇದೇ ಕಾರಣಕ್ಕೆ ಈ ಭಾಗದಲ್ಲಿ ಭೂಮಿ ಬೆಲೆ ಗಗನ ಮುಖಿಯಾಗಿದೆ. ಅಷ್ಟೇ ಅಲ್ಲ ಬಾಡಿಗೆ ಬೆಲೆಯೂ ಹೆಚ್ಚಳವಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ ಮತ್ತು ಯಲಹಂಕ: ಇನ್ನು ಐಟಿ ಉದ್ಯಮದಿಂದ ಬೂಮ್‌ ಆಗಿರುವ ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಯಲಹಂಕದಲ್ಲೂ ಭೂಮಿಗೆ ಭರ್ಜರಿ ಬೆಲೆ ಬಂದಿದೆ. ಇಲ್ಲೂ ಸಹ ಜಾಗಕ್ಕೆ ಒಳ್ಳೆಯ ಬೆಲೆ ಇದೆ. ಹೆಬ್ಬಾಳ ಹಾಗೂ ಯಲಹಂಕದ ಭಾಗದಲ್ಲಿ ಪ್ರತಿ ಚದರ ಅಡಿಗೆ 10,000 ಸಾವಿರ ರೂಪಾಯಿಯಿಂದ 16,000 ಸಾವಿರ ರೂಪಾಯಿಯ ವರೆಗೆ ಬೆಲೆ ಇದೆ.

ವೈಟ್‌ಫೀಲ್ಡ್‌: ಬೆಂಗಳೂರಿನಲ್ಲಿನ ವೈಟ್‌ಫೀಲ್ಡ್‌ ಹಾಗೂ ಸರ್ಜಾಪುರ ಪ್ರದೇಶಗಳು ಹೂಡಿಕೆದಾರರ ಸ್ವರ್ಗ ಎನ್ನುವಂತೆ ಬದಲಾಗಿವೆ. ಈ ಭಾಗದಲ್ಲೂ ಜನ ಹೂಡಿಕೆ ಮಾಡುವುದನ್ನು ಹೆಚ್ಚಿಸಿದ್ದು. ಹೊಸ ಬಡಾವಣೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳು ತಲೆಎತ್ತುತ್ತಿವೆ. ಈ ಭಾಗದಲ್ಲಿ ಪ್ರತಿ ಅಡಿಗೆ 12,000 ಸಾವಿರ ರೂಪಾಯಿಯಿಂದ 13,500 ರೂಪಾಯಿ ಇದೆ.

ಬೆಳ್ಳಂದರೂ ಮತ್ತು ಎಚ್‌.ಎಸ್‌ಆರ್‌ ಲೇಔಟ್‌: ಬೆಳ್ಳಂದೂರಿನಲ್ಲೂ ಭೂಮಿಗೆ ಒಳ್ಳೆಯ ಬೆಲೆ ಇದೆ. ಇಲ್ಲಿ ಪ್ರತಿ ಚದರ ಅಡಿಗೆ 13,000 ಸಾವಿರ ರೂಪಾಯಿ ಇದೆ. ಇನ್ನು ಎಚ್‌.ಎಸ್‌ಆರ್‌ ಲೇಔಟ್‌ನಲ್ಲಿ ಪ್ರತಿ ಚದರ ಅಡಿಗೆ 14,000 ಸಾವಿರ ರೂಪಾಯಿ ಇದೆ.

ಹಲವು ಕಾರಣಕ್ಕೆ ಬೆಂಗಳೂರಲ್ಲಿ ಭರ್ಜರಿ ಬೆಲೆ ಏರಿಕೆ

ಬೆಂಗಳೂರಿನಲ್ಲಿ ಹಲವು ಕಾರಣಕ್ಕೆ ಭೂಮಿಯ ಬೆಲೆ ಹೆಚ್ಚಳವಾಗಿದೆ. ಮೆಟ್ರೋ ಹೊಸ ಲೈಲ್‌, ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಹಾಗೂ ಬೆಂಗಳೂರು ಹೊರ ವಲಯಗಳ ಅಭಿವೃದ್ಧಿ ಭರ್ಜರಿಯಾಗಿ ನಡೆದಿದೆ. ಟನಲ್‌ಗಳ ಅಭಿವೃದ್ಧಿ ಹಾಗೂ ಡಬಲ್‌ ಡೆಕ್ಕರ್‌ ಬಗ್ಗೆಯೂ ಚರ್ಚೆ ಜೋರಾಗಿದೆ. ಈ ಎಲ್ಲಾ ಕಾರಣಕ್ಕೂ ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+