Bengaluru Rain: ಬೆಂಗಳೂರಿನಲ್ಲಿ ವ್ಯಾಪಕ ಮಳೆ: ರಸ್ತೆಗಳು ಜಲಾವೃತ, ಟ್ರಾಫಿಕ್‌ನಿಂದ ಸವಾರರು ಹೈರಾಣು
ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಮಳೆ ತಂಪೆರದಿದೆ. ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾದ ಕಾರಣ ರಸ್ತೆಗಳು ಜಲಾವೃತಗೊಂಡವು, ಇದರಿಂದ ಟ್ರಾಫಿಕ್ ಉಂಟಾಗಿದ್ದು ವಾಹನ ಸವಾರರು ಪರದಾಡುವಂತಾಯಿತು.
ನಗರದ ಸಿಂಗಸಂದ್ರ 18 ಮಿ.ಮೀ, ಕೆಂಗೇರಿ 17 ಮಿ.ಮೀ, ಹೊರಮಾವು 15.5 ಮಿ.ಮೀ, ರಾಜರಾಜೇಶ್ವರಿ ನಗರ 13 ಮಿ.ಮೀ, ಬೊಮ್ಮನಹಳ್ಳಿ 11.5 ಮಿ.ಮೀ, ನಾಯಂಡಹಳ್ಳಿ 9 ಮಿ.ಮೀ, ಹಗದೂರು 9 ಮಿ.ಮೀ, ಜಕ್ಕೂರು 9 ಮಿ.ಮೀ, ಬೆಳ್ಳಂದೂರು 8.5 ಮಿ.ಮೀ, ಹೆಚ್‌ಎಸ್‌ಆರ್ ಲೇಔಟ್ 8 ಮಿ.ಮೀ, ಹೆಚ್‌ಎಎಲ್ ವಿಮಾನ ನಿಲ್ದಾಣ 7 ಮಿ.ಮೀ, ಬಿಳೇಕಹಳ್ಳಿ 6.5 ಮಿ.ಮೀ, ದೊಡ್ಡನೆಕ್ಕುಂದಿ 6.5 ಮಿ.ಮೀ, ಮಾರತ್ತಹಳ್ಳಿ 6.5 ಮಿ.ಮೀ, ಯಲಹಂಕ 6.5 ಮಿ.ಮೀ, ಬಾಣಸವಾಡಿ 5.5 ಮಿ.ಮೀ, ಬಿಟಿಎಂ ಲೇಔಟ್ 5 ಮಿಮೀ, ಕೊನೆನ ಅಗ್ರಹಾರ 5 ಮಿ.ಮೀ, ಅಂಜನಾಪುರ 4.5 ಮಿ.ಮೀ, ಕೋರಮಂಗಲ 4.5 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 4 ಮಿ.ಮೀ, ಕುಶಾಲ ನಗರ 4 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹಲವು ಕಡೆ ಟ್ರಾಫಿಕ್!
ಹಲವು ಕಡೆಗಳಲ್ಲಿ ವ್ಯಾಪಕ ಮಳೆಯಾದ ಕಾರಣ ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಮಡಿವಾಳ ಸಂಚಾರ ಪೊಲೀಸ ಠಾಣೆ ವ್ಯಾಪ್ತಿಯ "ಸಿಲ್ಕ್ ಬೋರ್ಡ್ ಜಂಕ್ಷನ್" ಹತ್ತಿರ ನಿಧಾನಗತಿಯ ಸಂಚಾರವಿದ್ದ ಕಾರಣ ವಾಹನ ಸವಾರರು ಮಳೆಯಲ್ಲಿ ಪರದಾಡಿದರು.
ಕೆಆರ್ ಪುರ ಕಡೆ ತಲುಪುವ ಕಲ್ಯಾಣ ನಗರ ಫ್ಲೈಓವರ್ ಬಳಿ ನೀರು ನಿಂತಿದ್ದು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಇಬ್ಬಲೂರು, ನಾಗವಾರ, ವೀರಣ್ಣನ ಪಾಳ್ಯ, ಹೆಣ್ಣೂರು - ಬಾಗಲೂರು ರಸ್ತೆ, ವಡ್ಡರಪಾಳ್ಯ, ಹೆಬ್ಬಾಳ ಫ್ಲೈಓವರ್ ಬಳಿ ರಸ್ತೆಯಲ್ಲಿ ನೀರು ನಿಂತ ಕಾರಣ ಟ್ರಾಫಿಕ್ ಉಂಟಾಗಿತ್ತು.
ಹಲವು ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆ
ಬೆಂಗಳೂರು ನಗರ ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಾಮರಾಜನಗರ, ಕೋಲಾರ,ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಸೊಂಗನಹಳ್ಳಿ 45.5 ಮಿ.ಮೀ, ಅಲಿಪುರ 32.5 ಮಿ.ಮೀ, ಮುಂಗಾನಹಳ್ಳಿ 23.5 ಮಿ.ಮೀ, ನರೇಮುದ್ದೇಪಲ್ಲಿ 19 ಮಿ.ಮೀ, ಕುರುಡಿ 15.5 ಮಿ.ಮೀ ಮಳೆಯಾಗಿದೆ. ತುಮಕೂರು ಜಿಲ್ಲೆಯ ಕೊಟ್ಟಗೆರೆ 18 ಮಿ.ಮೀ,
ದೊಡ್ಡಯಾಲ್ಕೂರು 16 ಮಿ.ಮೀ, ಬಾಗೇನಹಳ್ಳಿ 13 ಮಿ.ಮೀ, ಬೊಮಲಾದೇವಿಪುರ 12 ಮಿ.ಮೀ ಮಳೆಯಾಗಿದೆ.
ರಾಮನಗರ ಜಿಲ್ಲೆಯ ಮಂಚನಾಯಕನಹಳ್ಳಿ 18 ಮಿ.ಮೀ, ನಾರಾಯಣಪುರ 15 ಮಿ.ಮೀ, ಕೆಂಚನಕುಪ್ಪೆ13.5 ಮಿ.ಮೀ, ಹರಿಯಸಂದ್ರ 11 ಮಿ.ಮೀ, ಚಾಮರಾಜನಗರ ಜಿಲ್ಲೆಯ ಕುರ್ತ್ತಿಹೊಸೂರಿನಲ್ಲಿ 16.5 ಮಿ.ಮೀ ಮಳೆಯಾಗಿದೆ. ಕೋಲಾರ ಜಿಲ್ಲೆಯ ಅರಿಕುಂಟೆ 15.5 ಮಿ.ಮೀ, ಸೋಮಯಾಜಲಪಲ್ಲಿ 9 ಮಿ.ಮೀ ಮಳೆಯಾಗಿದೆ.
ನವೆಂಬರ್ 24ರವರೆಗೆ ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ.












Click it and Unblock the Notifications