Bengaluru Rains: ಇಂದು ನಗರಾದ್ಯಂತ ಭರ್ಜರಿ ಮಳೆ, ಸಂಚಾರ ಅಸ್ತವ್ಯಸ್ತ! ಮುನ್ಸೂಚನೆ ವರದಿ

ಬೆಂಗಳೂರು, ಏಪ್ರಿಲ್ 16: ಕರ್ನಾಟಕದಾದ್ಯಂತ ಚುರುಕುಗೊಂಡಿರುವ ಪೂರ್ವ ಮುಂಗಾರು ಬೆಂಗಳೂರಿನಲ್ಲಿ ಭರ್ಜರಿಯಾಗಿ ಸುರಿಯುತ್ತಿದೆ. ನಗರದಲ್ಲಿ ಬುಧವಾರ ಸಂಜೆ ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ನೆನ್ನೆ ಕೊಂಚ ಸುರಿದ್ದ ಮಳೆ ಇಂದು ಮತ್ತಷ್ಟು ಅಬ್ಬರಿಸಿದೆ. ನಗರದ ರಸ್ತೆಗಳು ಜಲಾವೃತಗೊಂಡಿದ್ದು, ಕೆಲವೆಡೆ ಸಂಚಾರ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ನಮ್ಮ ಮೆಟ್ರೋ ಕಾಮಗಾರಿ ಅಕ್ಕಪ್ಪಕ್ಕ ನೀರು ತುಂಬಿಕೊಂಡಿದ್ದು, ಸವಾರರು ಭಯದಿಂದಲೇ ಸಂಚರಿಸುವಂತಾಗಿದೆ. ಮುಂದಿನ ಮೂರು ದಿನ (ಏಪ್ರಿಲ್ 19)ಗಳವರೆ ನಗರದಲ್ಲಿ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ (IMD Weather Forecast) ಮುನ್ಸೂಚನೆ ನೀಡಿದೆ.

ಇಂದು ಸಂಜೆ 6.15 ಗಂಟೆವರೆಗಿನ ವರದಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ 163 ವಾರ್ಡ್‌ಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಿದೆ. ಈ ಪೈಕಿ ಬೆಂಗಳೂರಿನ ದೊಡ್ಡಾನೆಕುಂದಿ 28 ಮಿಲಿ ಮೀಟರ್, ಹಗದೂರು 25 ಮಿಲಿ ಮೀಟರ್, ಕೆ.ಆರ್‌ಪುರಂ 21 ಮಿ.ಮೀ., ಬಸವನಪುರ 14 ಮಿ.ಮೀ., ಗುರಡಾಚಾಪಾಳ್ಯ 12 ಮಿಲಿ ಮೀಟರ್ ಮತ್ತು ರಾಮಮೂರ್ತಿ ನಗರಗಳಲ್ಲಿ 12 ಮಿ.ಮೀ. ಭಾರೀ ಮಳೆ ದಾಖಳಾಗಿದೆ. ಕೆಲವೇ ನಿಮಿಷಗಳಲ್ಲಿ ಸುರಿದ ಮಳೆಗೆ ವಾಹನ ಸವಾರರು ಪರದಾಡಿದ್ದಾರೆ. ಸಾರ್ವಜನಿಕರು, ರಸ್ತೆ ಬದಿ ವ್ಯಾಪಾರಿಗಳು, ಕಚೇರಿ ಮುಗಿಸಿ ಮನೆಗೆ ತೆರಳುವವರಿಗೆ ಈ ಮಳೆ ಕಿರಿಕಿರಿ ನೀಡಿದೆ.

Bengaluru Rains City record Heavy Rainfall today Public Faced Many Issues Weather Forecast

ಎಲ್ಲೆಲ್ಲಿ ಜೋರು ಮಳೆ, ಸಮಸ್ಯೆ..

ಜಕ್ಕೂರು, ದೇವಸಂದ್ರ, ಯಲಹಂಕ ನ್ಯೂ ಟೌನ್, ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು, ವಿಜ್ಞಾನ ನಗರ, ಬಿಟಿಎಂ ಬಡಾವಣೆ, ಡೈರಿ ವೃತ್ತಿ, ಹೊರ ಮಾವು, ಮಹಾದೇವಪುರ, ಹೂಡಿ, ಎಚ್‌ಎಎಲ್ ಏರ್‌ಪೋರ್ಟ್, ಎಚ್‌ಎಸ್‌ ಆರ್ ಬಡಾವಣೆ, ಮಡಿವಾಳ, ಲಾಲ್ ಬಾಗ್, ಎಲೆಕ್ಟ್ರಾನಿಕ್ ಸಿಟಿ, ನಾಗವಾರ,ಮಾರತ್ತಹಳ್ಳಿ, ಬೊಮ್ಮಸಂದ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಜೋರಾಗಿತ್ತು.

ನಗರಕ್ಕೆ 3 ದಿನ ಭಾರೀ ಮಳೆ ನಿರೀಕ್ಷೆ

ರಸ್ತೆಗುಂಡಿಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿದರೆ, ಒಳಚರಂಡಿ ನೀರು ಮಳೆ ನೀರಿನ ಜೊತೆಗೆ ಉಕ್ಕಿ ಹರಿಯಿತು. ಕೆಲವೆಡೆ ಗಾಳಿ ಮಳೆಗೆ ಮರದ ಕೊಂಬೆಗಳು ಧರೆಗುರುಳಿ ಬಿದ್ದಿವೆ. ಇಂದು ಬೆಳಗ್ಗೆಯಿಂದ ಬಿಸಿಲಿ ಕಾವು ಹೆಚ್ಚಾಗಿತ್ತು. ಮಧ್ಯಾಹ್ನ ನಂತರ ನೋಡು ನೋಡುತ್ತಲೇ ಜೋರು ಮಳೆ ಸುರಿಯಲಾರಂಭಿಸಿತ್ತು. ಮುಂದಿನ ಮೂರು ದಿನ ಅಂದರೆ ಏಪ್ರಿಲ್ 19ರವರೆಗೆ ನಿತ್ಯವು ಇದೇ ರೀತಿ ಸಂಜೆ, ಸಂಜೆಯಿಂದ ತಡರಾತ್ರಿವರೆಗೆ ವ್ಯಾಪಕ ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನಾ ವರದಿ ತಿಳಿಸಿದೆ.

ನಿರಂತರ ಒಣಹವೆ, ಸೆಕೆಗೆ ಹೈರಾರಣಾಗಿದ್ದ ಜನರಿಗೆ ಬೆಂಗಳೂರು ಮಳೆ ತಂಪೆರೆಯುತ್ತಿದ್ದಂತೆ ಕೆಲವು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ #BengaluruRains ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಮಳೆಯಿಂದಾದ ತೊಂದರೆಗಳ ಫೋಟೋ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಟ್ರೆಡಿಂಗ್ ಮಾಡಿದ್ದಾರೆ.

Bengaluru Rains City record Heavy Rainfall today Public Faced Many Issues Weather Forecast

ತಡರಾತ್ರಿವರೆಗೆ ಮಳೆ ಮುಂದುವರಿಕೆ ಸಾಧ್ಯತೆ..

ಹೌದು, ಸುರಿಯುತ್ತಿರುವ ಮಳೆಯು ತಡರಾತ್ರಿವರೆಗೆ ಮುಂದುವರಿಯುವ ನಿರೀಕ್ಷೆ ಇದೆ. ಅಲ್ಲದೇ ಜೋರು ಗಾಳಿ ಸಹಿತ ಮಳೆ ಆದರೆ, ಮಂಗಳವಾರ ರಾತ್ರಿ ಮಳೆಗೆ ಬಿದ್ದಂತೆ ಮರದ ಕೊಂಬೆಗಳು, ಮರಗಳು ಇಂದು ಸಹ ಬೀಳುವ ನಿರೀಕ್ಷೆ ಇದೆ. ಆದ್ದರಿಂದ ರಾತ್ರಿ ನಗರದ ವಿವಿಧೆಡೆ ಸಂಚರಿಸುವವರು ಎಚ್ಚರಿಕೆಯಿಂದ ಓಡಾಡಬೇಕಿದೆ.

ಇಂದಿನ ಮಳೆ ಬೆಂಗಳೂರಿನಾದ್ಯಂತ ಬಹುತೇಕ ಎಲ್ಲ ಕಡೆಗಳಲ್ಲಿ ಆಗಿದೆ. ಮುಂದಿನ ಮೂರು ದಿನಗಳು ನಗರದಲ್ಲಿ ತಾಪಮಾನ ಇಳಿಕೆ ಆಗಲಿದ್ದು, ತಂಪು ವಾತಾವರಣ ಕಂಡು ಬರಲಿದೆ. ಸೆಕೆ ಹಾಗೂ ಒಣಹವೆ ತಾತ್ಕಾಲಿಕ ಮುಕ್ತಿ ಸಿಗಿಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+