Bengaluru Rain: ನಗರದಲ್ಲಿ ನೆನ್ನೆ ಭರ್ಜರಿ ಮಳೆ ದಾಖಲು: ಅ. 8ರವರೆಗೆ ಧಾರಾಕಾರ ಮಳೆ ಪಕ್ಕಾ

ಬೆಂಗಳೂರು, ಅಕ್ಟೋಬರ್ 05: ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿಯಲ್ಲಿ ಒಂದು ವಾರದ ಬಳಿಕ ಮತ್ತೆ ಮಳೆ ಆರ್ಭಟ ಶುರುವಾಗಿದೆ. ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗ್ಗೆ 7.30ರವರೆಗೆ ನಗರದ ವಿವಿಧೆಡೆ ಭರ್ಜರಿ ಮಳೆ ಆಗಿದೆ. ಆಗಾಗ ಬಿಸಿಲಿನಿಂದ ಕಂಗೆಟ್ಟಿದ್ದ ನಿವಾಸಿಗಳಿಗೆ ಮಳೆ ತಂಪೆರೆದಿದೆ. ಬಹುತೇಕ ನಗರದ ಎಲ್ಲ ಬಡಾವಣೆಗಳಲ್ಲೂ ಮಳೆ ಅಬ್ಬರಿಸಿದ್ದು, ಅಕ್ಟೋಬರ್ 8ರವರೆಗೆ ಇದೇ ರೀತಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಕರ್ನಾಟಕದಾದ್ಯಂತ ಮಳೆ ಸಕ್ರಿಯವಾಗಿದೆ. ಇದಕ್ಕೆ ಬೆಂಗಳೂರು ಹೊರತಾಗಿಲ್ಲ. ಶುಕ್ರವಾರ ಸಂಜೆ ನಂತರ ಸುರಿದ ಭಾರಿ ಮಳೆ ನಗರದ ಅನೇಕ ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಳಿಸಿದೆ.

Bengaluru Rain Weather Forecast Heavy rain will continue Till October 8th in Bengaluru

ಅಕ್ಟೋಬರ್ 8 ರವರೆಗೆ ಧಾರಾಕಾರ ಮಳೆ

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಅಕ್ಟೋಬರ್ 8ರವರೆಗೆ ಬೆಂಗಳೂರಿನ ವಿವಿಧೆಡೆ ಬೆಳಗ್ಗೆಯಿಂದಲೇ ಇಲ್ಲ ಸಂಜೆ ನಂತರ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಅಬ್ಬರಿಸಲಿದೆ. ಸಾಧಾರಣದಿಂದ ಭಾರೀ ಮಳೆ ಆಗಬಹುದು ಎಂದು ನಿರೀಕ್ಷೆ ಇದೆ. ಸಂಜೆ ವೇಳೆ ಮನೆಯಿಂದ ಹೊರ ಹೋಗುವವರ, ಕಚೇರಿ ನೌಕರರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಸಮುದ್ರ ಮೇಲ್ಮೈನಲ್ಲಿ ಉಂಟಾದ ಸ್ಟ್ರಫ್ ಕಾರಣದಿಂದ ಹಾಗೂ ಹಿಂಗಾರು ಮಳೆ ಸುರಿಸುವ ಮಾರುತಗಳು ನಿಗದಿತ ಸಮಯದಲ್ಲಿ ಸಕ್ರಿಯಗೊಂಡ ಪರಿಣಾಮ ಮಳೆ ಅಬ್ಬರಿಸುತ್ತಿದೆ. ಈ ವರ್ಷ ಮುಂಗಾರು ಅವಧಿಯಲ್ಲಿ ಬೆಂಗಳೂರಿಗೆ ಅಷ್ಟಾಗಿ ಮಳೆ ಆಗಿಲ್ಲ. ಹಿಂಗಾರು ಅವಧಿಯಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.

Bengaluru Rain Weather Forecast Heavy rain will continue Till October 8th in Bengaluru

ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ? ಇಲ್ಲಿದೆ ವರದಿ

HSR ಬಡಾವಣೆಯಲ್ಲಿ 35.5 ಮಿಲಿ ಮೀಟರ್ ಮಳೆ ಆಗಿದೆ. ಹಂಪಿನಗರ, ಬಾಗಲಗುಂಟೆ, ವರ್ತೂರು, ದೊಡ್ಡಾನೆಕುಂದಿ, ಆರ್‌ಆರ್‌ ನಗರ, ರಾಹಮಹಲ್ ಗುಟ್ಟಹಳ್ಳಿ, ವಿ.ನಾಗೇನಹಳ್ಳಿ, ಶೆಟ್ಟಿಹಳ್ಳಿ, ಕಾಡುಗೋಡಿ, ಹಗದೂರು, ಸಿಂಗಸಂದ್ರ, ಕೋರಮಂಗಲ, ವಿಜಯನಗರ, ಚಾಮರಾಜಪೇಟೆ ಹೀಗೆ ನಗರದ ಅನೇಕ ಕಡೆಗಳಲ್ಲಿ ಮಳೆ ಸುರಿದಿದೆ.

ಮಳೆಗೆ ರಾತ್ರಿ ಕೆಲ ಹೊತ್ತು ಸಿಗ್ನಲ್‌ಗಲಲ್ಲಿ ಸಂಚಾರ ದಟ್ಟಣೆ, ಪ್ರಮುಖ ರಸ್ತೆಗಳ ಮೇಲೆ ನೀರು ಹರಿದದ್ದು ಕಂಡು ಬಂತು. ಅಲ್ಲದೇ ಕೆಲವೆಡೆ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದವು. ತಗ್ಗು ಪ್ರದೇಶಗಳಲ್ಲಿ, ರಸ್ತೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ಸಂಕಷ್ಟ ಆಯಿತು.

ದಿಢೀರ್ ಬದಲಾವಣೆ ಏನಿದು?

ಬೆಂಗಳೂರು ವಾತಾವರಣದ ವಿಚಾರದಲ್ಲಿ ಮೊದಲಿನಂತಿಲ್ಲ ಎಂಬ ಮಾತು ಅಕ್ಷರಶಃ ನಿಜವೆಂದು ಭಾಸವಾಗುತ್ತಿದೆ. ಹೌದು, ಈ ಹಿಂದೆ ಬೇಸಿಗೆಯಲ್ಲೂ ತಂಪು ತಂಪಾದ ಅನುಭವ ನೀಡುತ್ತಿದ್ದ ಬೆಂಗಳೂರು, ಇತ್ತೀಚೆಗೆ ಮಳೆಗಾಲದಲ್ಲೂ ಅತೀವ ಸೆಕೆ ಉಂಟು ಮಾಡುತ್ತಿದೆ. ನಿಗದಿತ ಸಮಯದಲ್ಲಿ ಮಳೆ ಆಗುತ್ತಿಲ್ಲ. ಮಳೆ ನಡುವೆ ಬಿಸಿಲು ಸಂಭ್ರಮಿಸುತ್ತಿದೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಹಲವು ವರ್ಷಳಲ್ಲೇ ಅತ್ಯಧಿಕ ಗರಿಷ್ಠ ತಾಪಮಾನ ಅಕ್ಟೋಬರ್‌ನಲ್ಲಿ ದಾಖಲಾಗಿತ್ತು. ಅದರ ಮರು ದಿನದಿಂದೇ ವಾತಾವರಣ ಸಂಪೂರ್ಣ ಬದಲಾಗಿದೆ. ದಿಢೀರ್ ಮಳೆ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+