Bengaluru Rain: ಶುಕ್ರವಾರ 13.5 ಮಿ.ಮೀ. ಮಳೆ ದಾಖಲು: ಏ.25ರವರೆಗೆ ವ್ಯಾಪಕ ಮಳೆ ಮುನ್ಸೂಚನೆ

ಬೆಂಗಳೂರು, ಏಪ್ರಿಲ್ 21: ಹಲವು ದಿನಗಳಿಂದ ಬಿಸಿಲಿಗೆ ಕಾವೇರಿದ್ದ ಬೆಂಗಳೂರಿನ ಧರೆಗೆ ಶುಕ್ರವಾರ ಮಳೆರಾಯ ತಂಪೆರೆದಿದ್ದಾರೆ. ನಗರದಲ್ಲಿ ಮರೆಯಾಗಿದ್ದ ಮಳೆ ಆರ್ಭಟ ಮತ್ತೆ ಶುರುವಾಗಿದೆ. ಶುಕ್ರವಾರ ರಾತ್ರಿ ಕೆಲವೆಡೆ ಧಾರಕಾರ ಮಳೆ ಆಗಿದ್ದು, ಎಲ್ಲಡೆ ತಂಪು ವಾತಾವರಣ ಕಂಡು ಬಂದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ ಎರಡು ಮೂರು ದಿನ ಹೀಗೆ ಮಳೆ ಮುಂದುವರಿಯಲಿದೆ. ನಿತ್ಯ ಸಂಜೆ ಇಲ್ಲವೆ ರಾತ್ರಿ ಮಳೆ ಬರಲಿದೆ. ಎಲ್ಲ ಪ್ರದೇಶಗಳಲ್ಲಿ ಮೋಡ ಕವಿದ ಮತ್ತು ತಂಪು ವಾತಾವರಣ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

Bengaluru Rain: Received More Than 13.5 mm Rain, Next 4 days Heavy Rain For Bengaluru

ಶುಕ್ರವಾರ ಸಂಜೆ ನಂತರ ಮೋಡ ಕವಿದ ವಾತಾವರಣ ಸೃಷ್ಟಿಯಾಯಿತು. ಗುಡುಗು ಮಿಂಚು ಸಹಿತ ಹಲವು ಬಡಾವಣೆಗಳಲ್ಲಿ ವ್ಯಾಪಕ ಮಳೆ ಸುರಿಯಿತು. ಇದರಲ್ಲಿ ಸಂಪಂಗಿರಾಮನಗರದಲ್ಲಿ 13.5 ಮಿಲಿ ಮೀಟರ್ ಹಾಗೂ ಕೃಷ್ಣ ರಾಜಪುರ (ಕೆಆರ್‌ಪುರ) ದಲ್ಲಿ 13.5 ಮಿಲಿ ಮೀಟರ್ ಮಳೆ ಬಿದ್ದ ಬಗ್ಗೆ ವರದಿಯಾಗಿದೆ.

ಈ ಪ್ರದೇಶಗಳಲ್ಲೂ ಜೋರು ಮಳೆ

ಅಷ್ಟೇ ಅಲ್ಲದೇ ಹೆಬ್ಬಾಳ, ಯಲಹಂಕ, ಜಯನಗರ, ಕೋರಮಂಗಲ, ಮಡಿವಾಳ, ಟಿನ್ ಫ್ಯಾಕ್ಟರಿ, ಜಯನಗರ, ಲಾಲ್‌ಬಾಗ್ ಉದ್ಯಾನ ಸುತ್ತಮುತ್ತ, ಚಾಮರಾಜಪೇಟೆ, ರಾಜಾಜಿನಗರ, ವಿಜಯನಗರ, ಹಂಪಿನಗರ, ಸ್ಯಾಟ್‌ಲೈಟ್, ಮೆಜೆಸ್ಟಿಕ್, ಮಲ್ಲೇಶ್ವರಂ, ವಿದ್ಯಾರಣ್ಯಪುರ, ಯಶವಂಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಜೋರು ಮಳೆ ಬಿದ್ದಿದೆ.

ಲಾಲ್‌ ಬಾಗ್ ರಸ್ತೆ, ಕೆ.ಆರ್‌ ಮಾರುಕಟ್ಟೆ, ಟೌನ್‌ ಹಾಲ್ ಮುಂಭಾಗ, ಚಾಲುಕ್ಯ ವೃತ್ತ, ಓಕಳಿಪುರಂ ಅಂಡರ್‌ಪಾಸ್, ಮೆಜೆಸ್ಟಿಕ್, ಬಾಲಗಂಗಾಧರ್ ನಾಥ ಸ್ವಾಮೀಜಿ ಮೇಲ್ಸೇತುವೆ ಸೇರಿದಂತೆ ಹಲವು ರಸ್ತೆಗಳಲ್ಲಿ ಕೆಲ ಹೊತ್ತು ನೀರು ನಿಂತಿದ್ದು ಸಾಮಾನ್ಯವಾಗಿತ್ತು. ಈ ಸಂಬಂಧ ಸಂಜೆ ನಂತರ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಸಂಚಾರ ದಟ್ಟಣೆಯು ಕಂಡು ಬಂದಿದೆ.

Bengaluru Rain: Received More Than 13.5 mm Rain, Next 4 days Heavy Rain For Bengaluru

ಏಕಾಎಕಿ ಬಂದ ಮಳೆಯ ಕಾರಣದಿಂದ ಮೇಲೆ ವಿಜಯನಗರ ಸುತ್ತಮುತ್ತ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟ ಬಗ್ಗೆ ವರದಿಯಾಗಿದೆ. ಇದರಿಂದ ವಿದ್ಯುತ್ ಕಡಿತದ ಸಮಸ್ಯೆಗಳು ಉಂಟಾಗಿ ಜನರು ಕಿರಿಕಿರಿ ಅನುಭವಿಸಿದರು. ರಸ್ತೆಗಳಲ್ಲಿ ಸಂಚಾರ ದಟ್ಟಣೆಯಿಂದ ಹೈರಾಣಾದರು.

ಬೆಂಗಳೂರಲ್ಲಿ ಏ.25ರವರೆಗೆ ಮಳೆ

ಉದ್ಯಾನ ನಗರದಲ್ಲಿ ಮುಂದಿನ ನಾಲ್ಕು ದಿನ ಅಂದರೆ ಏಪ್ರಿಲ್ 25 ರವರೆಗೆ ಮಳೆ ಬರಲಿದೆ. ಅದರಲ್ಲೂ ಏಪ್ರಿಲ್ 23 ಒಂದು ದಿನ ಮಾತ್ರ ಬಿಸಿಲಿನ ವಾತಾವರಣ ಜೊತೆಗೆ ತುಂತುರು ಮಳೆ ಬರಬಹುದು. ಉಳಿದ ಎಲ್ಲ ದಿನ ಧಾರಾಕಾರವಾಗಿ ಮಳೆಯಾಗಲಿದೆ. ಈ ಅವಧಿಯಲ್ಲಿ ನಗರದಲ್ಲಿ ನಿತ್ಯ ಗರಿಷ್ಠ 33-35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಅಧಿಕ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆಯ ಆಗಮನ ಸಂತಸ ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+