Bengaluru Rains: ನಗರದಲ್ಲಿ ಶನಿವಾರ ಸಂಜೆ ಭಾರೀ ಮಳೆ ಶುರು! ರಸ್ತೆಗಳು ಜಲಾವೃತ, ಮೋಜು-ಮಸ್ತಿಗೆ ಬ್ರೇಕ್

ಬೆಂಗಳೂರು, ನವೆಂಬರ್ 16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶನಿವಾರ ಸಂಜೆಯು ವ್ಯಾಪಕ ಮಳೆ ಮುಂದುವರಿದಿದೆ. ನೋಡ ನೋಡುತ್ತಿದ್ದಂತೆ ಸಂಜೆ 5 ಗಂಟೆ ಹೊತ್ತಿಗೆ ಒಂದೇ ಸಮನೇ ಜೋರು ಮಳೆ ಸುರಿಯಲಾರಂಭಿಸಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನಾದ್ಯಂತ ಈ ಮಳೆ ಆವರಿಸುವ ಮುನ್ಸೂಚನೆ ಇದೆ. ಇದಕ್ಕೆ ಹವಾಮಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆ, ವೈಪರಿತ್ಯಗಳು ಕಾರಣ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಕಳೆದ ಎರಡು ದಿನದಿಂದ ಆಗಾಗ ತುಂತುರು, ಹಗುರ ಮಳೆ ಆಗುತ್ತಿತ್ತು. ಅದರೆ ಇಂದು ಶನಿವಾರ (ನವೆಂಬರ್ 16) ಸಂಜೆ ಸುಮಾರು ಅರ್ಧಗಂಟೆಯಿಂದ ಸುರಿಯಲಾರಂಭಿಸಿದೆ. ಜೋರು ಮಳೆಗೆ ನಗರದ ವಿವಿಧ ಕಡೆಗಳಲ್ಲಿ ರಸ್ತೆಗಳ ಮೇಲೆ ನೀರು ನಿಂತರು ಸಂಚಾರಕ್ಕೆ ತೊಂದರೆ ಆಗಿದೆ.

Bengaluru Rain Heavy rain lashes in many parts of City on Saturday create Traffic issue create

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, ಜಯನಗರ, ಚಾಮರಾಜಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ವಾರ್ಡ್‌ಗಳಲ್ಲಿ ಮಳೆಯ ರಣಾರ್ಭಟಕ ಕಂಡು ಬಂದಿದೆ. ಕೋರಮಂಗಲ, ಡೈರಿ ವೃತ್ತ, ಜಯನಗರ, ನಿಮ್ಹಾನ್ಸ್, ಮಾರತ್ತಹಳ್ಳಿ, ಬೆಳ್ಳಂದೂರು, ಸರ್ಜಾಪುರ ರಸ್ತೆ, ವೆಂಕಟಾಪುರ, ಸಿಲ್ಕ್‌ಬೋರ್ಡ್, ಎಚ್‌ಎಸ್‌ಆರ್ ಬಡಾವಣೆ, ಎಲೆಕ್ಟ್ರಾನಿಕ್ ಸಿಟಿ, ಬನಶಂಕರಿ, ಜಯನಗರ, ಗಾಂಧಿಬಜಾರ್, ಮಡಿವಾಳ, ಯಲಹಂಕ, ಹೆಬ್ಬಾಳ, ದೊಡ್ಡಾನೆಕ್ಕುಂದಿ, ಹುಳಿಮಾವು ಸೇರಿದಂತೆ ಅನೇಕ ಕಡೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.

ಶನಿವಾರ ರಜಾದಿನವಾದ್ದರಿಂದ ಸಂಜೆ ಹೊರ ಹೋಗಬೇಕು, ಶಾಪಿಂಗ್, ಹೋಟೆಲ್-ರೆಸ್ಟೋರೆಂಟ್‌ಗೆ ತೆರಳಿ ಮೋಜು ಮಸ್ತಿ ಮಾಡಬೇಕೆಂದುಕೊಂಡವರಿಗೆ ಈ ದಿಢೀರ್ ಬಂದ ಮಳೆಯು ಅಡ್ಡಿ ಉಂಟು ಮಾಡಿದೆ. ಮೋಜು ಮಸ್ತಿ ಪ್ಲಾನ್‌ಗೆ ಭಗ್ನ ಉಂಟು ಮಾಡಿದೆ. ಮನೆಯಲ್ಲಿಯೇ ಇರುವಂತೆ ಮಾಡಿದೆ. ಈ ಮಳೆ ತಡರಾತ್ರಿವರೆಗೂ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.

ರಸ್ತೆಗಳು, ತಗ್ಗು ಪ್ರದೇಶಗಳಲ್ಲಿ ಮಳೆ ನೀರು

ಸರ್ಜಾಪುರ ರಸ್ತೆ, ಮಡಿವಾಳ ಮುಖರಸ್ತೆ, ಈಜಿಪುರ ಮೇಲ್ಸೇತುವೆ ನಡೆಯುವ ಕಾಮಗಾರಿ ಜಾಗದಲ್ಲಿ ನೀರು ತುಂಬಿಕೊಂಡಿದೆ. ಇಂದಿರಾನಗರ, ಬೈಯಪ್ಪನಹಳ್ಳಿ ಕಡೆಗೆ ಸಂಜೆ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಯಿತು. ಸಿಗ್ನಲ್‌ಗಳಲ್ಲಿ ಉದ್ದಕ್ಕೂ ವಾಹನಗಳು ನಿಂತು ಟ್ರಾಫಿಕ್ ಕಿರಿ ಕಿರಿ ಅನುಭವಿಸಬೇಕಾಯಿತು.

ನಗರದ ಕೆಲವು ಬಡಾವಣೆಗಳಲ್ಲಿ ತಗ್ಗು ಪ್ರದೇಶಗಳಿಗೆ ರಸ್ತೆ ಬಿದ್ದ ನೀರು ಹರಿದು ಹೋಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಂದ ಮಳೆಗೆ ಸಂಜೆ ವ್ಯಾಪಾರ ಹಾಳಾಯಿತು. ರಸ್ತೆ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಉಕ್ಕಿ ಹರಿಯಿತು. ಇನ್ನೂ ಮಧ್ಯಾಹ್ನ ವಿಜಯನಗರ, ಹಂಪಿನಗರ, ರಾಜಾಜಿನಗರ, ಮೆಜೆಸ್ಟಿಕ್ ಸುತ್ತಮುತ್ತಲಿನ ಕಡೆಗಳಲ್ಲಿ ಹಗುರ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 48 ಗಂಟೆ ಬೆಂಗಳೂರಿಗೆ ಭಾರೀ ಮಳೆ

ಹವಾಮಾನ ಇಲಾಖೆ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ನಗರದ ವಿವಿಧ ಕಡೆಗಳಲ್ಲಿ ಮಬ್ಬು ವಾತಾವರಣ ಜೊತೆಗೆ ಆಗಾಗ ಮಳೆ ಬರಲಿದೆ. ನಾಳೆ ಭಾನುವಾರ ಸಂಜೆ ನಗರದ ಅನೇಕ ಕಡೆಗಳಲ್ಲಿ ಮಳೆ ತುಸು ತೀವ್ರಗೊಳ್ಳಲಿದೆ. ತೇವ ಸಹಿತ ಗಾಳಿ ಬೀಸುವ ಕಾರಣದಿಂದಾಗಿ ನಗರದಲ್ಲಿ ಬಿಸಿಲಿನ ದರ್ಶನ, ಅಧಿಕ ತಾಪಮಾನದ ವಾತಾವರಣ ಕಾಣುವುದು ಅಸಾಧ್ಯ ಎಂದು ಮಳೆ ಮುನ್ಸೂಚನಾ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+