Bengaluru Rain: ಬೆಂಗಳೂರಿನಲ್ಲಿ ದಾಖಲೆ ಮಳೆ- ಹವಾಮಾನ ಇಲಾಖೆ ನೀಡಿದ ಅಂಕಿಅಂಶ ತಿಳಿಯಿರಿ

ಬೆಂಗಳೂರು, ಸೆಪ್ಟೆಂಬರ್‌ 01: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಇದು ದಾಖಲೆಯನ್ನು ಸೃಷ್ಟಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆಗಸ್ಟ್‌ ತಿಂಗಳು ಪೂರ್ತಿ ಬೆಂಗಳೂರಿನಲ್ಲಿ ಒಣಹವೆ ಕಂಡುಬಂದಿತ್ತು. ಆದರೆ, ಗುರುವಾರ ರಾತ್ರಿ ಸುರಿದ ಮಳೆ ನಗರದಲ್ಲಿ ಒಣಹವೆಯನ್ನು ಕೊನೆಗೊಳಿಸಿದೆ.

ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರ ವೀಕ್ಷಣಾಲಯದಲ್ಲಿ ಶುಕ್ರವಾರ ಬೆಳಿಗ್ಗೆ 8.30 ರವರೆಗೆ 88.9 ಮಿಮೀ ಮಳೆ ದಾಖಲಾಗಿದೆ.

ಐಎಂಡಿ ಡೇಟಾ ಪ್ರಕಾರ, ಇಡೀ ಆಗಸ್ಟ್‌ನಲ್ಲಿ ನಗರವು ಕೇವಲ 12.6 ಮಿಮೀ ಮಳೆಯನ್ನು ಕಂಡಿದೆ. ನಿನ್ನೆ ನಗರದಲ್ಲಿ ಸುರಿದ ಮಳೆಯು ಸೆಪ್ಟೆಂಬರ್‌ನ ಸರಾಸರಿ ಮಳೆಯ 42.6 ಪ್ರತಿಶತವಾಗಿದೆ.

bengaluru-rain

ಇನ್ನೆರಡು ವೀಕ್ಷಣಾಲಯಗಳಾದ ಬೆಂಗಳೂರು ಹೆಚ್ಎಎಲ್ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಮವಾಗಿ 68.3 ಮಿಮೀ ಮತ್ತು 46.4 ಮಿಮೀ ಮಳೆ ದಾಖಲಾಗಿದೆ.

ಮತ್ತೆ ಮಳೆ ಸುರಿಯುವ ಮುನ್ಸೂಚನೆ

ಸೆಪ್ಟೆಂಬರ್ 8 ರ ವರೆಗೆ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಸೆಪ್ಟೆಂಬರ್ 5 ಮತ್ತು 6 ರಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿಗೆ ಸಂಬಂಧಿಸಿದಂತೆ, ಭಾನುವಾರ ಬೆಳಗಿನ ತನಕ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಐಎಂಡಿ ಹೇಳಿದೆ. ಗುಡುಗು ಸಹಿತ ಮಳೆ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಸೆಪ್ಟೆಂಬರ್ 1 ಮತ್ತು 2 ರಂದು ದಕ್ಷಿಣ ಒಳನಾಡಿನಲ್ಲಿ ಮತ್ತು ಸೆಪ್ಟೆಂಬರ್ 3 ಮತ್ತು 4 ರಂದು ಉತ್ತರ ಒಳನಾಡಿನಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.

bengaluru-rain

ಕರ್ನಾಟಕದಾದ್ಯಂತ ಮಳೆ: ಅಂಕಿಅಂಶ

ಹಿರಿಯೂರು, ಚಿತ್ರದುರ್ಗ: 116.2 ಮಿ.ಮೀ
ಮದ್ದೂರು, ಮಂಡ್ಯ: 114.4 ಮಿ.ಮೀ
ಹುಣಸೂರು, ಮೈಸೂರು: 55.4 ಮಿ.ಮೀ
ಬಾದಾಮಿ, ಬಾಗಲಕೋಟೆ: 48 ಮಿ.ಮೀ
ಗದಗ: 65.8 ಮಿ.ಮೀ
ಧಾರವಾಡ: 54.6 ಮಿ.ಮೀ
ಬೇಲೂರು, ಹಾಸನ: 43.5 ಮಿ.ಮೀ
ಹರಪನಹಳ್ಳಿ, ವಿಜಯನಗರ: 42.6 ಮಿ.ಮೀ
ಹುಬ್ಬಳ್ಳಿ: 41.2 ಮಿ.ಮೀ

ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ: 58.4 ಮಿ.ಮೀ
ದೇವನಹಳ್ಳಿ: 40 ಮಿ.ಮೀ
ಹೊಸಕೋಟೆ: 25.2 ಮಿ.ಮೀ

ಬೆಳಗಾವಿ

ಹಿಡಕಲ್ ಅಣೆಕಟ್ಟು: 111.5 ಮಿ.ಮೀ
ಕಲಬುರ್ಗಿ: 52.5 ಮಿ.ಮೀ

bengaluru-rain

ಚಿಕ್ಕಬಳ್ಳಾಪುರ

ಚಿಂತಾಮಣಿ: 40.8 ಮಿ.ಮೀ
ಗೌರಿಬಿದನೂರು: 40.2 ಮಿ.ಮೀ

ರಾಮನಗರ

ರಾಮನಗರ: 66.4 ಮಿ.ಮೀ
ಮಾಗಡಿ: 53 ಮಿ.ಮೀ
ಚನ್ನಪಟ್ಟಣ: 48.2 ಮಿ.ಮೀ

ತುಮಕೂರು

ಮಧುಗಿರಿ: 74.2 ಮಿ.ಮೀ
ಬರಗೂರು: 71.2 ಮಿ.ಮೀ
ಗುಬ್ಬಿ: 60 ಮಿ.ಮೀ
ಮಿಡಿಗೇಶಿ: 50 ಮಿ.ಮೀ
ತುಮಕೂರು: 49.6 ಮಿ.ಮೀ
ಬುಕ್ಕಪಟ್ಟಣ: 46.3 ಮಿ.ಮೀ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+