Bengaluru Cool Cool: ವಾರದ ಭಾರೀ ಮಳೆಗೆ ತಂಪಾಯ್ತು ಇಳೆ: ಮುಂದೆ ಹೆಚ್ಚಾಗುತ್ತಾ ತಾಪಮಾನ?
ಬೆಂಗಳೂರು, ಮೇ 15: ಬಿಸಿಲಿನಿಂದ ಕಂಗೆಟ್ಟಿದ್ದ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಮಳೆರಾಯ ನಿರಂತರವಾಗಿ ತಂಪೆರೆಯುತ್ತಿದ್ದಾನೆ. ಈ ಕಾರಣದಿಂದ ಕಳೆದೊಂದು ವಾರದಿಂದ ಉದ್ಯಾನ ನಗರಿ ಕೂಲ್...ಕೂಲ್... ಆಗಿದೆ. ದಿಢೀರ್ ಮಳೆಗೆ ಕಾರಣ, ಸದ್ಯ ತಾಪಮಾನ ಎಷ್ಟಿದೆ? ಶಾಖದ ಅಲೆಯ ಮುನ್ಸೂಚನೆ ಇದಿಯಾ? ಎಂಬ ಮಾಹಿತಿಗೆ ಮುಂದೆ ಓದಿ.
ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಉದ್ಯಾನ ನಗರಿ ಮರಳಿ ತನ್ನ ಮೊದಲಿನ ತಂಪು, ಹಿತಕರ ವಾತಾವರಣಕ್ಕೆ ಮರಳಿದೆ. ಇದರಿಂದ ನಗರವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಬುಧವಾರದಿಂದ ಬೆಂಗಳೂರಿನಲ್ಲಿ ನಿಂತರವಾಗಿ ಮಳೆ ಆಗುತ್ತಿದೆ. ದಿನ ಬಿಟ್ಟು ದಿನ ಮಧ್ಯಾಹ್ನ ಬಳಿಕ ಜೋರು ಮಳೆ ಆಗುತ್ತಿದೆ. ಇದರಿಂದಾಗಿ ಬೆಳಗ್ಗೆ ಅಲ್ಪ ಸೆಕೆಯ ವಾತಾವರಣ ಅನ್ನಿಸಿದರೂ ಮಧ್ಯಾಹ್ನವಾಗುತ್ತಿದ್ದಂತೆ ಎಲ್ಲವು ಮರೆಯಾಗಿ ಮಳೆ ಸುರಿಯುತ್ತಿದೆ.
ಏಪ್ರಿಲ್ ತಾಪಮಾನ ಈಗಿಲ್ಲ
ಬೆಂಗಳೂರಿನಲ್ಲಿ ಈ ವರ್ಷ ಫೆಬ್ರವರಿ ತಿಂಗಳಿನಿಂದಲೇ ತಾಪಮಾನ ಏರಿಗತಿಯಲ್ಲಿ ಸಾಗಿತು. ಏಪ್ರಿಲ್ ನಲ್ಲಿ ದಶಕದಲ್ಲೇ ಅತ್ಯಧಿಕ ತಾಪಮಾನ ದಾಖಲೆ ದಾಖಲಾಯಿತು. ಮೇಲಿಂದ ಮೇಲೆ ಅತ್ಯಧಿಕ ಗರಿಷ್ಠ ತಾಪಮಾನ ಕಂಡು ಬಂತು. ನಿರಂತರವಾಗಿ 35ರಿಂದ 37 ಸೆಂಟಿ ಮೀಟರ್‌ವರೆಗೆ ಗರಿಷ್ಠ ತಾಪಮಾನ ದಾಖಲಾಗುತ್ತಿತ್ತು. ಒಂದೊಮ್ಮೆ ಸಾರ್ವಕಾಲಿಕ ದಾಖಲೆ 38 ಡಿಗ್ರಿ ಸೆಲ್ಸಿಯಸ್ ಸಹ ತಲುಪಿತ್ತು.
ಶಾಖದ ಅಲೆ ಶೇ.05 ಇಳಿಕೆ
ಈ ಮೂಲಕ ಬೆಂಗಳೂರಿಗರನ್ನು ಶಾಖದ ಅಲೆ, ಮಳೆ ಕೊರತೆ ಇನ್ನಿಲ್ಲದಂತೆ ಬಾಧಿಸಿತು. ಇದೀಗ ಒಂದು ಗುಡುಗು, ಮಿಂಚು ಜೋರು ಗಾಳಿ ಸಹಿತ ಒಂದು ವಾರದಿಂದ ಮಳೆ ಆಗುತ್ತಿರುವ ಕಾರಣ ನಗರವು ಸಹಜ ಸ್ಥಿತಿಗೆ ಬಂದಿದೆ. ಮೊದಲಿನಂತೆ ಇಲ್ಲಿ ಸಾಮಾನ್ಯ ತಾಪಮಾನ ಕಂಡು ಬರುತ್ತಿದೆ. ಇದರಿಂದ ಶೇಕಡಾ 05 ರಷ್ಟು ತಾಪಮಾನದಲ್ಲಿ ಇಳಿಕೆ ಆಗಿದೆ.
ಏಪ್ರಿಲ್ ಕೊನೆಯ ವಾರದಲ್ಲಿ ನಿರಂತರವಾಗಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದೀಗ 31ರಿಂದ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಈ ಮೂಲಕ ಸುಮಾರು ಶೇಕಡಾ 05 ರಷ್ಟು ಶಾಖದ ಅಲೆ ಇಳಿಕೆ ಆಗಿದೆ. ಈ ವಾತಾವರಣ ಅನುಕೂಲಕರ ವಾತಾವರಣವಾಗಿದೆ. ಬಿಸಿಲಿಗೆ ಕಂಗೆಟ್ಟಿದ್ದ ಜನರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಮೇ 18ರವರೆಗೆ ಮಳೆ, ತಂಪು ವಾತಾವರಣ
ಕರ್ನಾಟಕದ ಒಳನಾಡು ಭಾಗದಲ್ಲಿ ಭೂಮಿಯ ಮೇಲ್ಮೈನಲ್ಲಿ ಒಂದು ಸ್ಟ್ರಫ್ ಹಾದು ಹೋಗಿದೆ. ಈ ಕಾರಣದಿಂದ ಜೋರು ಗಾಳಿ ಸಹಿತಿ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಭಾರೀ ಮಳೆ ಆಗುತ್ತಿದೆ. ಬೆಂಗಳೂರಿಗೆ ಸದ್ಯಕ್ಕೆ ಮಾತ್ರ ತಾಪಮಾನ ಏರಿಕೆ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಮೇ 18ರವರೆಗೆ ಬೆಂಗಳೂರಿಗೆ ಸಾಧಾರಣದಿಂದ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಳಗ್ಗೆ ಬಿಸಿಲಿನ ದರ್ಶನವಾದರೆ ಸಂಜೆ ಇಲ್ಲವೇ ರಾತ್ರಿ ವಿವಿಧ ಪ್ರದೇಶಗಳಲ್ಲಿ ಜೋರು ಮಳೆ ಆಗಲಿದೆ. ಕೆಲವು ಕಡೆಗಳಲ್ಲಿ ಧಾರಾಕಾರ ಮಳೆ ಆಗಲಿದ್ದು, ಈ ವೇಳೆ ಮೊಡ ಕವಿದ ವಾತಾವರಣ ಕಂಡು ಬರಲಿದೆ.
ಅವಧಿಯಲ್ಲಿ ನಗರದಲ್ಲಿ ಗರಿಷ್ಠ ಕನಿಷ್ಠ ತಾಪಮಾನ 20-23 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ಗರಿಷ್ಠ 32-33 ಡಿಗ್ರಿ ಸೆಲ್ಸಿಯಸ್ ದಾಖಲಾಗುವುದು ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.












Click it and Unblock the Notifications