Bengaluru Weather: 153 ವಾರ್ಡ್‌ಗಳಲ್ಲಿ ಮಳೆ ದಾಖಲು, ಮುಂದಿನ 2 ದಿನ ಚಳಿ-ಮಳೆ ವಾತಾವರಣ
ಬೆಂಗಳೂರು, ಡಿಸೆಂಬರ್ 28: ಹವಾಮಾನದಲ್ಲಿನ ಬದಲಾವಣೆಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಜಿಟಿ ಜಿಟಿ ಮಳೆ ಆಗುತ್ತಿದೆ. ಶುಕ್ರವಾರ ನಗರದಲ್ಲಿ 153 ವಾರ್ಡ್‌ಗಳಲ್ಲಿ ಮಳೆ ದಾಖಲಾಗಿದೆ. ಕೊಂಚ ಚಳಿ ಹಾಗೂ ಮಬ್ಬು ವಾತಾವರಣವೇ ಕಂಡು ಬರುತ್ತಿದೆ. ಮುಂದಿನ ಕೆಲವು ದಿನಗಳ ಬೆಂಗಳೂರಿನ ಹಾವಾಮಾನ, ಚಳಿ ಮಳೆ ಮುನ್ಸೂಚನೆಯ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಬಿಸಿಲಿನ ದರ್ಶನ ಇತ್ತು. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುರಿತದ ಎಫೆಕ್ಟ್‌ನಿಂದಾಗಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣೆ ಕಂಡು ಬರಲಾರಂಭಿಸಿತು. ಕಳೆದ ಎರಡು ಮೂರು ದಿನಗಳಿಂದ ವಾತಾವರಣದಲ್ಲಿ ಚಳಿ, ಜಿಟಿ ಜಿಟಿ ಮಳೆಯು ದಾಖಲಾಯಿತು.

ಶುಕ್ರವಾರವು ಮಳೆ ಮುಂದುವರಿದಿದ್ದು, 153 ವಾರ್ಡ್‌ಗಳಲ್ಲಿ ಹಗುರ ಮಳೆ ದಾಖಲಾಗಿದೆ. ಜಕ್ಕೂರು, ಯಲಹಂಕ, ಹೊರಮಾವು, ಕೋರಮಂಗಲ, ಬೆಳ್ಳಂದೂರು, ವರ್ತೂರು, ಮಡಿವಾಳ, ಜಾಲಹಳ್ಳಿ, ಶೆಟ್ಟಿಹಳ್ಳಿ, ಚೊಕ್ಕಸಂದ್ರ, ಹೊಸ ತಿಪ್ಪಸಂದ್ರ, ಥಣಿಸಂದ್ರ, ಗುರುಡಾಚಾರ್ ಪಾಳ್ಯ, ರಾಮಮೂರ್ತಿ ನಗರ ಸೇರಿದಂತೆ ಮಹಾದೇವಪುರ, ಯಲಹಂಕ ವಲಯ ಸೇರಿದಂತೆ ವಿವಿಧ ವಲಯಗಳ ವಾರ್ಡ್ ವ್ಯಾಪ್ತಿಯಲ್ಲಿ ನಿರಂತರ ಹಗುರ ಮಳೆ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಮಾಹಿತಿ ಪ್ರಕಾರ, ಈ ಮಳೆ ಮುಂದಿನ 48 ಗಂಟೆಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ. ವೀಕೆಂಡ್ ಪ್ಲಾನ್ ಮಾಡಿಕೊಂಡವರಿಗೆ ಈ ಜಿಟಿ ಜಿಟಿ ಮಳೆ ಕೊಂಚ ಕಿರಿ ಕಿರಿ ನೀಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.
ಇಂದು ಶನಿವಾರ ಹಾಗೂ ನಾಳೆ ಭಾನುವಾರ ನಗರ ಕನಿಷ್ಠ ತಾಪಮಾನ 17 ಹಾಗು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಫಕ ಮಳೆ ಮುಂದುವರಿಯುವ ಸೂಚನೆ ಇದೆ. ಅದರಲ್ಲಿ ಬೆಂಗಳೂರಿನಲ್ಲಿ ಇನ್ನೂ ಕೆಲವು ದಿನಗಳ ಕಾಲ ಹಗುರ ಮಳೆ ಆಗುವ ಸಾಧ್ಯತೆ ಇದೆ. ಚಳಿಗಾದಲ್ಲೂ ನಗರದಲ್ಲಿ ಮಳೆ ಸುರಿಯುತ್ತಿದೆ.
ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಜನರಿಗೆ ಅನಾರೋಗ್ಯ ಭೀತಿ ಎದುರಾಗಿದೆ. ನೆಗಡಿ, ಕೆಮ್ಮು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಬೆಳಗ್ಗೆಯಿಂದ ಬೀಸುವ ಚಳಿ, ಸಂಜೆ ಸೋನೆ ಮಳೆಗೆ ವ್ಯಾಪಾರ ವಹೀವಾಟಿನ ಮೇಲೂ ತೊಂದರೆ ಉಂಟಾಗಿದೆ.
ಮುಂದಿನ ಎರಡು ದಿನಗಳ ಬಳಿಕ ವಾತಾವರಣದಲ್ಲಿ ಚೇತರಿಕೆ ಕಾಣುವ ಲಕ್ಷಣ ಇದೆ. ದಿನವಿಡೀ ಬಿಸಿಲು ಹಾಗೂ ಬೆಳಗ್ಗೆ ಅಧಿಕ ಮಂಜು ಕವಿಯುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications