2020 ಕ್ಕೆ ಪೂರ್ಣವಾಗಲಿದೆ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆ
ಬೆಂಗಳೂರು, ಜುಲೈ 10: ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಜಂಟಿಯಾಗಿ ಹಣಹೂಡುವ ಮೂಲಕ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆಯನ್ನು ಕೈಗೆತ್ತಿಕೊಳ್ಳಲಿದೆ.
ಜಯನಗರದ 9 ನೇ ಬ್ಲಾಕ್ ನಲ್ಲಿರುವ ರಾಗಿಗುಡ್ಡ ದೇವಸ್ಥಾನದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ 800 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ಮೇಲ್ಸೇತುವೆ ನಿರ್ಮಿಸುವ ಯೋಜನೆ ಮೆಟ್ರೋ ರೈಲು ಮಾರ್ಗಗಳನ್ನೂ ಒಳಗೊಂಡಿರುತ್ತದೆ ಎಂಬುದು ವಿಶೇಷ.

2016-17 ನೇ ಸಾಲಿನ ಬಜೆಟ್ ನಲ್ಲಿ ಈ ಮೇಲ್ಸೇತುವೆ ಯೋಜನೆಯನ್ನು ಘೋಷಿಸಲಾಗಿತ್ತು. 4 ಕಿ.ಮೀ.ಉದ್ದದ ಈ ಮೇಲ್ಸೇತುವೆ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. 8 ಮೀ ಎತ್ತರದಲ್ಲಿ ವಾಹನ ಸಂಚಾರಕ್ಕೆ ಚತುಷ್ಪಥ ಎಲಿವೇಟರ್ ರಸ್ತೆ ಮತ್ತು 16 ಮೀ. ಎತ್ತರದ ಎರಡನೇ ಅಂತಸ್ತಿನಲ್ಲಿ ಮೇಲ್ಸೇತುವೆಯಲ್ಲಿ ಮೆಟ್ರೋ ಹಳಿ ನಿರ್ಮಾಣವಾಗಲಿದೆ.












Click it and Unblock the Notifications