Bengaluru Property: ಡಿ.ಕೆ ಶಿವಕುಮಾರ್ ಒಂದೇ ನಿರ್ಧಾರಕ್ಕೆ ಲಕ್ಷಾಂತರ ರೂ. ಕಳೆದುಕೊಂಡ ಬಿ ಖಾತಾ ಆಸ್ತಿದಾರರು

Bengaluru Property: ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಒಂದೇ ಒಂದು ನಿರ್ಧಾರದಿಂದ ಬೆಂಗಳೂರಿನ ಸಾವಿರಾರು ಜನ ಆಸ್ತಿದಾರರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಇಷ್ಟಕ್ಕೂ ಡಿ.ಕೆ ಶಿವಕುಮಾರ್ ತೆಗೆದುಕೊಂಡ ನಿರ್ಧಾರವೇನು ಈ ನಿರ್ಧಾರದಿಂದ ಆಸ್ತಿದಾರರಿಗೆ ನಷ್ಟವಾಗಿದ್ದು ಯಾಕೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಬೆಂಗಳೂರಿನಲ್ಲಿ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ನಾವು ದೊಡ್ಡ ರಿಯಾಯಿತಿಯನ್ನು ಘೋಷಿಸಿದ್ದೇವೆ. ಸಾಮಾನ್ಯವಾಗಿ ಇದಕ್ಕೆ ಶೇ. 5ರಷ್ಟು ಗೈಡೆನ್ಸ್ ವ್ಯಾಲ್ಯೂ ಶುಲ್ಕವಿರುತ್ತದೆ. ಆದರೆ ನೂರು ದಿನದೊಳಗೆ ಅರ್ಜಿ ಸಲ್ಲಿಸುವವರಿಗೆ ಕೇವಲ ಶೇ. 2ರಷ್ಟು ಶುಲ್ಕವನ್ನು ಮಾತ್ರ ನಿಗದಿಪಡಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Bengaluru Property

ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆ ಮಾಡಿಕೊಳ್ಳುವವರು ಈ ಮೊದಲು ಆಸ್ತಿಯ ಶೇ 5ರಷ್ಟು
ಗೈಡ್‌ಲೈನ್ಸ್‌ ವ್ಯಾಲ್ಯೂ ಪಾವತಿ ಮಾಡಬೇಕಾಗಿತ್ತು. ಆದರೆ ಇದೀಗ ಮೇ 12ರಿಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭೂ ಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದರು. ಇದರ ಭಾಗವಾಗಿ ಬೆಂಗಳೂರಿನ ಬಿ ಖಾತಾದ ಆಸ್ತಿದಾರರು ಇನ್ಮುಂದೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಆಸ್ತಿಯ ಗೈಡ್‌ಲೈನ್ಸ್‌ ವ್ಯಾಲ್ಯೂನ್‌ನ ಶೇ 2ರಷ್ಟು ಪಾವತಿ ಮಾಡಿದರೆ ಸಾಕು ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದರಿಂದ ಅಂದಾಜು 7,000 ಸಾವಿರದಿಂದ 9,000 ಸಾವಿರ ಆಸ್ತಿದಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಲಕ್ಷಾಂತರ ರೂಪಾಯಿ ಕಳೆದುಕೊಂಡ 9,000 ಆಸ್ತಿದಾರರು

ಇನ್ನು ಬೆಂಗಳೂರಿನಲ್ಲಿ ಬಿ ಖಾತಾದಿಂದ ಎ ಖಾತಾ ಪರಿವರ್ತನೆಯಲ್ಲಿ ಗೈಡ್‌ಲೈನ್ಸ್‌ ವ್ಯಾಲ್ಯೂ ಕಡಿಮೆಯಾಗಿದ್ದರಿಂದ, ಅಂದಾಜು 7,000ರಿಂದ 9,000 ಬಿ ಖಾತಾ ಆಸ್ತಿದಾರರಿಗೆ ಭಾರೀ ನಷ್ಟವಾಗಿದೆ. ಈ ಆಸ್ತಿದಾರರು ಶೇಕಡಾ 60ರಷ್ಟು ಹಣವನ್ನು ಕಳೆದುಕೊಂಡಂತಾಗಿದೆ. ಆಸ್ತಿದಾರರೊಬ್ಬರು ಬಿ ಖಾತಾದಿಂದ ಎ ಖಾತಾಗೆ ವರ್ಗಾವಣೆ ಮಾಡಿಕೊಳ್ಳಲು 1.67 ಲಕ್ಷ ರೂಪಾಯಿ ಪಾವತಿ ಮಾಡಿದ್ದರೆ, ಮೇ13ರ ರಿಂದ ಹೊಸ ಗೈಡ್‌ಲೈನ್ಸ್‌ ವ್ಯಾಲ್ಯೂ ದರದಂತೆ ಅವರು ಇನ್ಮುಂದೆ ಕೇವಲ 67,000 ರೂಪಾಯಿ ಕಟ್ಟಿದರೆ ಸಾಕು. ಅಂದರೆ ಸುಮಾರು 1 ಲಕ್ಷ ರೂಪಾಯಿಗಳ ವ್ಯತ್ಯಾಸವಾಗಲಿದೆ.

ಬೆಂಗಳೂರಿನಲ್ಲಿ ಅಂದಾಜು 7 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿದಾರರಿದ್ದಾರೆ. ಇದೀಗ 6.90 ಲಕ್ಷ ಆಸ್ತಿದಾರರಿಗೆ ಅನುಕೂಲವಾಗಲಿದೆಯಾದರೂ, ಅಂದಾಜು 10,000 ಸಾವಿರ ಆಸ್ತಿದಾರರು ಲಕ್ಷಾಂತರ ರೂಪಾಯಿ ಕಳೆಕೊಂಡಿದ್ದಾರೆ. ಹೀಗಾಗಿ, ಈಗಾಗಲೇ ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆ ಮಾಡಿಕೊಂಡಿರುವ ಆಸ್ತಿದಾರರಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು ಕೆಲವು ಆಸ್ತಿದಾರರು ಆಗ್ರಹಿಸಿದ್ದಾರೆ.

B-Khata: ಬಿ-ಖಾತಾ ಟು ಎ-ಖಾತಾ: ಪ್ರಾಮಾಣಿಕ ಪಾವತಿದಾರರಿಗೆ ಡಿಸಿಎಂ 'ದಂಡ' ಪ್ರಯೋಗವೇ: ಶ್ರೀನಿವಾಸ ಮಠ ಬರಹ
B-Khata: ಬಿ-ಖಾತಾ ಟು ಎ-ಖಾತಾ: ಪ್ರಾಮಾಣಿಕ ಪಾವತಿದಾರರಿಗೆ ಡಿಸಿಎಂ 'ದಂಡ' ಪ್ರಯೋಗವೇ: ಶ್ರೀನಿವಾಸ ಮಠ ಬರಹ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾವಿರಾರು ಆಸ್ತಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲೇ ಪ್ರಾಪರ್ಟಿ ಸುರಕ್ಷತೆಯ ದೃಷ್ಟಿಯಿಂದ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಂಡಿದ್ದರು. ಆದರೆ ಈಗಾಗಲೇ ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಮಾಡಿಕೊಂಡಿರುವವರು ಸ್ವಲ್ಪ ದಿನ ಕಾಯಬೇಕಾಗಿತ್ತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+