Bengaluru Property: ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸರ್ಕಾರ, ಜಿಬಿಎಯಿಂದ ಹೊಸ ಶಾಕ್: 19,200 ರೂ. ವರೆಗೆ ದಂಡ
Bengaluru Property: ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನ ಆಸ್ತಿದಾರರಿಗೆ ಮತ್ತೊಂದು ಶಾಕ್ ಕೊಡುವುದಕ್ಕೆ ಮುಂದಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ದುಬಾರಿ ಆಗಿದೆ. ಅಲ್ಲದೆ ಬೆಂಗಳೂರಿನ ಆಸ್ತಿದಾರರು ಕೆಲವೊಂದು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಪ್ರಾಪರ್ಟಿ ಹಾಗೂ ಆಸ್ತಿ ಖರೀದಿ ಮಾಡುವುದು ಸಹ ದುಬಾರಿ ಆಗಿದೆ. ಈ ರೀತಿ ಇರುವಾಗಲೇ ಬೆಂಗಳೂರಿನ ಆಸ್ತಿದಾರರಿಗೆ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಶಾಕ್ ನೀಡಿದೆ. ಈ ಟ್ಯಾಕ್ಸ್ ಪ್ರಕ್ರಿಯೆಯನ್ನು "CongressTaxTerrorism" ಎಂದು ವಿರೋಧ ಪಕ್ಷಗಳು ಟೀಕೆ ಮಾಡಿವೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಖಾಲಿ ನಿವೇಶನಗಳ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ. ಆದರೆ, ಈ ಅಭಿಯಾನದ ಬಗ್ಗೆ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸ್ವಚ್ಛ ಬೆಂಗಳೂರು ಹೆಸರಿನಲ್ಲಿ "CongressTaxTerrorism" / ಟ್ಯಾಕ್ಸ್ ಟೆರರಿಸಂ ಮಾಡುತ್ತಿದೆ ಎಂದು ವಿರೋಧ ಪಕ್ಷ ಜೆಡಿಎಸ್ ಗಂಭೀರ ಆರೋಪ ಮಾಡಿದೆ. ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಜೆಡಿಎಸ್ ಟ್ವೀಟ್ ಮಾಡಿದ್ದು, ಬೆಂಗಳೂರಿನಲ್ಲಿ ಖಾಲಿ ನಿವೇಶನ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಸಾವಿರಾರು ರೂಪಾಯಿ 'ಸ್ವಚ್ಛತಾ ಶುಲ್ಕ' ಹಾಗೂ ತ್ಯಾಜ್ಯ ಸಾಗಾಟದ ಹೆಸರಿನಲ್ಲಿ ದಂಡ ವಿಧಿಸುತ್ತಿರುವುದು ಗಾಯದ ಮೇಲೆ ಬಿಸಿ ತಪ್ಪು ಸವರಿದಂತಿದೆ. ರೆವಿನ್ಯೂ ಸೈಟು ಕೊಂಡು ಕಷ್ಟಪಟ್ಟು ಮನೆ ಕಟ್ಟಲು ಕನಸು ಕಾಣುತ್ತಿರುವ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವುದು ಯಾವ ಸೀಮೆಯ ಆಡಳಿತ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಎಂದು ಪ್ರಶ್ನೆ ಮಾಡಿದೆ.

ಜಿಬಿಎ (GBA) ತಂದು 'ಬ್ರಾಂಡ್ ಬೆಂಗಳೂರು' ಮಾಡುತ್ತೇವೆ ಎಂದು ಹೇಳಿ, ಈಗ ಕನ್ನಡಿಗರ ಮೇಲೆ ಸಾಲು ಸಾಲು ತೆರಿಗೆಗಳ ಹೊರೆ ಹೇರುವುದೇ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಧನೆಯೇ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ. ಬೆಂಗಳೂರಿನಲ್ಲಿ ಖಾಲಿನ ನಿವೇಶನಗಳ ಸ್ವಚ್ಛತೆಗೆ ದುಬಾರಿ ಶುಲ್ಕ ವಿಧಿಸಲಾಗುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಯಾವ ಖಾಲಿ ನಿವೇಶನ ಸ್ವಚ್ಛತೆ ಎಷ್ಟು ಶುಲ್ಕ
20x30 ಖಾಲಿ ಸೈಟಿಗೆ ₹6,700 - ₹7,700 ಶುಲ್ಕ!
ತ್ಯಾಜ್ಯ ಸಾಗಾಟಕ್ಕೆ ₹19,200 ವರೆಗೆ ದಂಡದ ದರ!
ಆಸ್ತಿ ತೆರಿಗೆ ಕಟ್ಟಿದ ಮೇಲೆಯೂ ಮತ್ತೆ ಹೊಸ ಶುಲ್ಕದ ಹೊರೆ!
ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಲ್ಲಿ ನೀಡಿ, ತೆರಿಗೆ ಮತ್ತು ಸೆಸ್‌ಗಳ ರೂಪದಲ್ಲಿ ಇನ್ನೊಂದು ಕೈಯಲ್ಲಿ ಜನರಿಂದ ಹಣ ಕಿತ್ತುಕೊಳ್ಳುವ 'ಕರ ಸಂಗ್ರಹ ಕಾಂಗ್ರೆಸ್' ಸರ್ಕಾರಕ್ಕೆ ಶ್ರಮಜೀವಿಗಳ ಶಾಪ ತಟ್ಟುವುದು ಖಚಿತ. ಬೆಂಗಳೂರು ಎಂದರೆ ಕೇವಲ ರಿಯಲ್ ಎಸ್ಟೇಟ್ ದಂಧೆಯಲ್ಲ, ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕನ್ನಡಿಗರ ಆಶೋತ್ತರ. ಈ ಜನವಿರೋಧಿ, ದೋಚುವ ಆದೇಶವನ್ನು ತಕ್ಷಣವೇ ವಾಪಸ್ ಪಡೆಯಿರಿ ಎಂದು ಜೆಡಿಎಸ್ ಪಕ್ಷವು ಆಗ್ರಹಿಸಿದೆ.


Click it and Unblock the Notifications
