Bengaluru Property: ಬೆಂಗಳೂರು ಮೆಟ್ರೋ ನೀಲಿ ಮಾರ್ಗ ಎಫೆಕ್ಟ್‌: ಬೆಂಗಳೂರಿನ ಈ ಭಾಗದಲ್ಲಿ ಪ್ರಾಪರ್ಟಿ ಬೆಲೆ ಭರ್ಜರಿ ಹೆಚ್ಚಳ

Bengaluru Property: ನಮ್ಮ ಬೆಂಗಳೂರಿನ ವಿವಿಧ ಭಾಗಗಳಲ್ಲಿ ರಿಯಲ್ ಎಸ್ಟೇಟ್ ಚುರುಕು ಪಡೆದುಕೊಂಡಿದೆ. ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಭೂಮಿ ಹಾಗೂ ಪ್ರಾಪರ್ಟಿ ಬೆಲೆಯು ಹೆಚ್ಚಾಗುತ್ತಿದ್ದು, ವಿವಿಧ ಭಾಗಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ. ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಪ್ರಾಪರ್ಟಿಗೆ ಒಳ್ಳೆಯ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ.

ಇದೀಗ ಬೆಂಗಳೂರಿನ ನಮ್ಮ ಮೆಟ್ರೋದ ಬ್ಲ್ಯೂ (ನೀಲಿ ಮಾರ್ಗದ) ಲೈನ್‌ನ ವಿವಿಧ ಭಾಗಗಳಲ್ಲಿ ಭೂಮಿ ಬೆಲೆ ಹೆಚ್ಚಳ ಪ್ರಾರಂಭವಾಗಿದೆ. ಅಲ್ಲದೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಭೂಮಿ / ಪ್ರಾಪರ್ಟಿ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

Bengaluru Property

ಬೆಂಗಳೂರು ನಮ್ಮ ಮೆಟ್ರೋದ ನೀಲಿ ಮಾರ್ಗದಿಂದಾಗಿ ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇದು ಬೆಂಗಳೂರಿನ ಪ್ರಮುಖ ವಾಸಸ್ಥಳ ಮತ್ತು ಉದ್ಯೋಗ ಕೇಂದ್ರಗಳನ್ನು ಸಂಪರ್ಕಿಸುವುದರ ಜೊತೆಗೆ ನಗರದ ದಕ್ಷಿಣ-ಪೂರ್ವ ಭಾಗಗಳನ್ನು ಉತ್ತರದಲ್ಲಿರುವ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ.

ಬೆಂಗಳೂರು ಹೊರ ವರ್ತುಲ ರಸ್ತೆ ಮಾರ್ಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿದ್ದಂತೆಯೇ ಸಿಲ್ಕ್ ಬೋರ್ಡ್, HSR ಲೇಔಟ್ ಹಾಗೂ ಬೆಳ್ಳಂದೂರು ಮುಂತಾದ ಪ್ರಮುಖ ಉದ್ಯೋಗ ಕೇಂದ್ರಗಳಲ್ಲಿ ಸಂಚಾರ ಸುಧಾರಣೆ ಮತ್ತು ಆಸ್ತಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಂದಾಜಿಸಿದ್ದಾರೆ.

ಹೆಚ್ಚು ಜನಸಾಂದ್ರತೆ ಇರುವ ಬೆಂಗಳೂರಿನ ಪ್ರದೇಶಗಳಲ್ಲಿ ಬೆಂಗಳೂರು ಹೊರ ವರ್ತುಲ ಪ್ರದೇಶವೂ ಒಂದಾಗಿದೆ. ಈ ಕಾರಿಡಾರ್ ಪ್ರಮುಖ ಐಟಿ - ಬಿಟಿ ಮತ್ತು ವಾಸಸ್ಥಳ ಪ್ರದೇಶಗಳಿಗೆ ಸುಲಭ ಪ್ರವೇಶ ಒದಗಿಸುವ ಮೂಲಕ ವಾಸಸ್ಥಳ ಬೇಡಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸಲಿದೆ ಎಂದು ಹೇಳಲಾಗಿದೆ. ಬೆಂಗಳೂರು ನಮ್ಮ ಮೆಟ್ರೋದ ಬ್ಲೂಲೈನ್ ಕಾರಿಡಾರ್ ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚು ಬೇಡಿಕೆ ಬರುವ ನಿರೀಕ್ಷೆಯನ್ನು ರಿಯಲ್ ಎಸ್ಟೇಟ್ ತಜ್ಞರು ಅಂದಾಜಿಸಿದ್ದಾರೆ.

ವಿಶೇಷವಾಗಿ ಮಧ್ಯಮ ಆದಾಯ ಮತ್ತು ಪ್ರೀಮಿಯಂ ವರ್ಗಗಳಲ್ಲಿ ಕೆಲಸ ಮಾಡುವ ವೃತ್ತಿಪರರು ಈ ಭಾಗದಲ್ಲಿ ಮನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಇರುವ ಅಥವಾ ನಮ್ಮ ಮೆಟ್ರೋ ನಿಲ್ದಾಣಗಳು ಇರುವ ಪ್ರದೇಶಗಳಲ್ಲಿ ಬಾಡಿಗೆ ಮನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳುವುದಕ್ಕೆ ಹಲವರು ನಮ್ಮ ಮೆಟ್ರೋದ ಮೊರೆ ಹೋಗುತ್ತಿದ್ದಾರೆ. ಇದರಿಂದ ಸಹಜವಾಗಿಯೇ ನಮ್ಮ ಮೆಟ್ರೋ ನಿಲ್ದಾಣ ಇರುವ ಪ್ರದೇಶಗಳಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಹಾಗೂ ಪ್ರಾಪರ್ಟಿ ಬೆಲೆಯು ಸಹ ಹೆಚ್ಚಾಗುತ್ತಿದೆ.

Bengaluru Property: ಬಾಡಿಗೆ ಮನೆಗಳ ದರ ಹೆಚ್ಚಳ ಸಾಧ್ಯತೆ

ಇನ್ನು ಈ ಮಾರ್ಗದಲ್ಲಿ ಮೆಟ್ರೋದಿಂದಾಗಿ ಮನೆಗಳ ಬಾಡಿಗೆ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮೊದಲು ಬಾಡಿಗೆ ದರಗಳು ಏರಿಕೆಯಾಗಲಿವೆ. ನಂತರ ಆಸ್ತಿ ಮಾರಾಟ ಬೆಲೆಗಳು ಏರಿಕೆಯಾಗುತ್ತವೆ. ಈಗ ಈ ಪ್ರದೇಶಗಳಲ್ಲಿ 2BHK ಮನೆಗಳ ಸರಾಸರಿ ಬಾಡಿಗೆ 40,000 ರೂಪಾಯಿ ಇದ್ದು, 10,000- 15,000 ರೂಪಾಯಿ ಹೆಚ್ಚುವರಿ ಪ್ರೀಮಿಯಂ ಮನೆಗಳ ಬಾಡಿಗೆ ದರ ಇದೆ. ಅಪಾರ್ಟ್‌ಮೆಂಟ್‌ಗಳ ದರ ಪ್ರತಿ ಚದರ ಅಡಿಗೆ 8,000 ರೂ.ದಿಂದ 14,000 ರೂ. ವರೆಗೆ ಇದೆ. ಇನ್ನು ಜಮೀನು ದರ 14,000 ರೂ.ದಿಂದ 20,000 ರೂ. ವರೆಗೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+