Bengaluru property: ಬೆಂಗಳೂರಿನ 51 ಆಸ್ತಿಗಳ ಸ್ವಾಧೀನಕ್ಕೆ ಮುಂದಾದ ಉತ್ತರ ನಗರ ಪಾಲಿಕೆ

Bengaluru property: ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1 ಮತ್ತು ವಲಯ-2ರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ 51 ಆಸ್ತಿಗಳಿಂದ ಕಂದಾಯ ಬಾಕಿ 1,37,14,934 ರೂ. ಇರುವುದರಿಂದ, ಕೊನೆಯ ಹಂತದ ಪ್ರಕ್ರಿಯೆಯಾಗಿ ಈ ಆಸ್ತಿಗಳನ್ನು ನಗರ ಪಾಲಿಕೆಯ ವಶಕ್ಕೆ ಸ್ವಾಧೀನಪಡಿಸಿ ಕೊಳ್ಳಲಾಗುವುದು ಎಂದು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2025 ಅನ್ವಯ, ಆಸ್ತಿ ತೆರಿಗೆ ಪಾವತಿಸದ ಪ್ರಕರಣಗಳಲ್ಲಿ, ಆಸ್ತಿ ತೆರಿಗೆ ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು-2024ರ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಯಮಗಳಂತೆ, ಸುಸ್ತಿದಾರರಿಗೆ ಕಾರಣ ಕೇಳುವ ನೋಟಿಸ್ ಹಾಗೂ ಬೇಡಿಕೆ ಪತ್ರಗಳನ್ನು ಜಾರಿಗೊಳಿಸಲಾಗಿದೆ. ಸುಸ್ತಿದಾರರ ವಿವರಗಳನ್ನು ಪಾಲಿಕೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಜೊತೆಗೆ ಮೊಬೈಲ್ ಸಂದೇಶಗಳ ಮೂಲಕ ಹಾಗೂ ಸ್ವತ್ತಿನ ಸ್ಥಳದಲ್ಲಿಯೇ ಪ್ರಕಟಣೆ ಅಂಟಿಸುವ ಮೂಲಕ ಹಲವು ಬಾರಿ ತಿಳಿಸಲಾಗಿದೆ.

Bengaluru Property

ಸಾಕಷ್ಟು ಅವಕಾಶಗಳನ್ನು ನೀಡಿದ ಬಳಿಕವೂ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳನ್ನು ಕಾಯ್ದೆ ಮತ್ತು ನಿಯಮಗಳ ಅನ್ವಯ ಹರಾಜು ಪ್ರಕ್ರಿಯೆಗೆ (Distress Sale) ಒಳಪಡಿಸಲು ತೀರ್ಮಾನಿಸಲಾಗಿದೆ. ಈಗಾಗಲೇ, ಅಂದರೆ ದಿನಾಂಕ: 27.02.2026, 06.03.2026 ಮತ್ತು 13.03.2026 ರಂದು ಹರಾಜು ಪ್ರಕ್ರಿಯೆ ನಡೆಸಲಾಗಿದ್ದು, ಕೊನೆಯ ಪ್ರಕ್ರಿಯೆಯಾಗಿ 51 ಆಸ್ತಿಗಳನ್ನು ಪಾಲಿಕೆಯ ವಶಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸ್ತಿಯನ್ನು ಪೂರ್ವನಿರ್ಧರಿತ ಅಧಿಸೂಚಿತ ಬೆಲೆಗೆ (ಮಾರ್ಗದರ್ಶಕ ಮೌಲ್ಯಕ್ಕೆ ಸಂಬಂಧಿಸಿದಂತೆ) ನಗರ ಪಾಲಿಕೆಗೆ ಮಾರಾಟವಾದಂತೆ ಪರಿಗಣಿಸಲಾಗುತ್ತದೆ. ಮಾರಾಟದ ಮೊತ್ತದಿಂದ ಎಲ್ಲಾ ಬಾಕಿ ಆಸ್ತಿ ತೆರಿಗೆ, ದಂಡ, ಬಡ್ಡಿ ಹಾಗೂ ಆಡಳಿತ ವೆಚ್ಚಗಳನ್ನು ಸಂಪೂರ್ಣವಾಗಿ ವಸೂಲಿಸಲಾಗುತ್ತದೆ. ಬಾಕಿ ಮೊತ್ತಗಳನ್ನು ಕಡಿತಗೊಳಿಸಿದ ನಂತರ ಉಳಿದಿರುವ ಮೊತ್ತವನ್ನು ಮೂಲ ಖಾತೆದಾರರಿಗೆ (ಆಸ್ತಿ ಮಾಲೀಕರಿಗೆ) ಬ್ಯಾಂಕ್ ವರ್ಗಾವಣೆ ಮೂಲಕ ಹಿಂತಿರುಗಿಸಲಾಗುತ್ತದೆ. ಇದು ಪಾರದರ್ಶಕತೆ ಮತ್ತು ನ್ಯಾಯತೆಯನ್ನು ಖಚಿತಪಡಿಸುತ್ತದೆ. ಆಸ್ತಿ ಯಾವುದೇ ಹೊರೆಗಳಿಲ್ಲದೆ ನಗರ ಪಾಲಿಕೆಗೆ ವರ್ಗಾವಣೆಗೊಂಡು, ಮಾಲೀಕತ್ವ ದಾಖಲೆಗಳನ್ನು ಇದಾದ ನಂತರ ನವೀಕರಿಸಲಾಗುತ್ತದೆ ಎಂದು ಹೇಳಲಾಗಿದೆ.

Bengaluru property: ಬೆಂಗಳೂರಿನ ಆಸ್ತಿದಾರರಿಗೆ ಮನವಿ

ಇನ್ನು ಬೆಂಗಳೂರಿನ ಆಸ್ತಿದಾರರು ತಮ್ಮ ಆಸ್ತಿ ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ, ಇಂತಹ ಕಠಿಣ ವಸೂಲಾತಿ ಕ್ರಮಗಳನ್ನು ತಪ್ಪಿಸಿಕೊಳ್ಳುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಮನವಿ ಮಾಡಿದೆ. ನಗರ ಪಾಲಿಕೆ ಪಾರದರ್ಶಕ ಮತ್ತು ಕಾನೂನುಬದ್ಧ ಆಡಳಿತಕ್ಕೆ ಬದ್ಧವಾಗಿದ್ದು, ತೆರಿಗೆ ವಸೂಲಾತಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸುತ್ತದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+