Bengaluru Property: ಬೆಂಗಳೂರು ಸೇರಿ ಭಾರತದ 8 ನಗರಗಳಲ್ಲಿ ಮನೆ ಮಾರಾಟ ಜೋರು, ಭೂಮಿ ಬೆಲೆ ಎಷ್ಟಿದೆ ?
ಬೆಂಗಳೂರು: ಜಾಗತಿಕವಾಗಿ ಕೆಲವೊಂದು ಪ್ರಮುಖ ಬೆಳವಣಿಗೆ ಹಾಗೂ ಆರ್ಥಿಕ ಸವಾಲುಗಳ ನಡುವೆಯೂ ಬೆಂಗಳೂರಿನಲ್ಲಿ ಭೂಮಿಗೆ ಒಳ್ಳೆಯ ಬೆಲೆ ಇದೆ. 2025ನೇ ಸಾಲಿನಲ್ಲಿ ಮನೆಗಳ ಮಾರಾಟವು ಭರ್ಜರಿಯಾಗಿ ಆಗಿವೆ. ಅಲ್ಲದೇ ಮನೆಗಳ ಮಾರಾಟದೊಂದಿಗೆ ಭೂಮಿಯ ಬೆಲೆಯೂ ಹೆಚ್ಚಳವಾಗುತ್ತಿದೆ. ಭಾರತದ ಎಂಟು ಪ್ರಮುಖ 8 ನಗರಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದೆ. 2025ನೇ ಸಾಲಿನಲ್ಲಿ ಒಟ್ಟಾರೆ ಭಾರತದಲ್ಲಿ ಮನೆಗಳ ಬೆಲೆಯು ಶೇ 19ರಷ್ಟು ಹೆಚ್ಚಳವಾಗಿದೆ. ಇನ್ನು ಬೆಂಗಳೂರಿನಲ್ಲಿ ಶೇ 12ರಷ್ಟು ಮನೆಗಳ ಬೆಲೆ ಹೆಚ್ಚಳವಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾಗಿರುವ ನೈಟ್ ಫ್ರಾಂಕ್ ವರದಿ ಉಲ್ಲೇಖಿಸಿದೆ.
ಮನೆಗಳ ಬೆಲೆ ಹೆಚ್ಚಳವಾಗಿದೆಯಾದರೂ, ಇದೇ ಸಂದರ್ಭದಲ್ಲಿ ಮನೆಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಮನೆಗಳ ಬೆಲೆ ಹೆಚ್ಚಳವಾಗಿರುವುದು ಸಹ ಇದಕ್ಕೆ ಪ್ರಮುಖ ಕಾರಣವಾಗಿದೆ. 2025ನೇ ಸಾಲಿನಲ್ಲಿ ಮನೆಗಳ ಮಾರಾಟವು ಶೇ 1ರಷ್ಟು ಕುಸಿತ ಕಂಡಿದೆ. ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಿರುವುದು, ಸಮತೋಲನ ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಸೇರಿದಂತೆ ಹಲವು ಕಾರಣಗಳಿಗೆ ಮನೆಗಳ ಬೇಡಿಕೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಈ ಎಲ್ಲಾ ಕಾರಣಗಳಿಂದ ಹಾಗೂ ಸುರಕ್ಷಿತ ಹೂಡಿಕೆಗಳಲ್ಲಿ ಭೂಮಿ ಖರೀದಿ - ಮನೆಗಳನ್ನು ಖರೀದಿ ಮಾಡುವುದು ಉತ್ತಮ ಎಂದು ಭಾವಿಸಿದ್ದಾರೆ.

ಮನೆ ಬೆಲೆ ಹೆಚ್ಚಳದ ನಡುವೆಯೂ ಮಾರಾಟ ಜೋರು
ಇನ್ನು ಬೆಂಗಳೂರು ಸೇರಿದಂತೆ ದೇಶದ ಎಂಟು ಪ್ರಮುಖ ನಗರಗಳಲ್ಲಿ ಮನೆಗಳ ಬೆಲೆ ಶೇ 1ರಷ್ಟು ಹೆಚ್ಚಳವಾಗಿರುವುದರ ಹೊರತಾಗಿಯೂ ಮನೆಗಳ ಮಾರಾಟ ಭರ್ಜರಿಯಾಗಿ ನಡೆದಿದೆ. ಬೆಂಗಳೂರಿನಲ್ಲೂ ಮನೆಗಳ ಮಾರಾಟ ಜೋರಾಗಿಯೇ ನಡೆದಿದೆ. ಮನೆಗಳ ಬೆಲೆ ಹೆಚ್ಚಳದ ಹೊರತಾಗಿಯೂ ಮನೆಗಳ ಮಾರಾಟವು ಮುಂದುವರಿದಿದೆೆ ಎಂದು ವರದಿಯು ಉಲ್ಲೇಖಿಸಿದೆ. ಮನೆಗಳ ಮಾರಾಟದಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಶೇ 15ಕ್ಕೆ ಏರಿಕೆ ಕಂಡಿದೆ. ಅಂದರೆ ಬೆಂಗಳೂರು ಸೇರಿದಂತೆ ಭಾರತದ ವಿವಿಧ ಪ್ರದೇಶಗಳಲ್ಲಿ ಎನ್‌ಆರ್‌ಐಗಳು ಮನೆ ಖರೀದಿ ಮಾಡುವ ಪ್ರಮಾಣವು ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಮನೆ ಮಾರಾಟ ಹೆಚ್ಚಳ
ಬೆಂಗಳೂರು ಸೇರಿದಂತೆ ದೇಶದ 8 ಪ್ರಮುಖ ನಗರಗಳಲ್ಲಿ ಮನೆಗಳ ಮಾರಾಟ ಪ್ರಮಾಣವು ಹೆಚ್ಚಳವಾಗಿದೆ. ಭಾರತದಲ್ಲಿ ಒಟ್ಟಾರೆ 2025ನೇ ಸಾಲಿನಲ್ಲಿ 3,48,207 ಮನೆಗಳು ಮಾರಾಟವಾಗಿವೆ. ಬೆಂಗಳೂರಿನಲ್ಲಿ 55,373 ಮನೆಗಳ ಮಾರಾಟವಾಗಿವೆ. ಅಲ್ಲದೇ ಮನೆಗಳ ಸರಾಸರಿ ಬೆಲೆಯಲ್ಲಿ ಶೇ 12ರಷ್ಟು ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ ಪ್ರತಿ ಚದರ ಅಡಿ ಬೆಲೆಯು 7,388 ರೂಪಾಯಿ ಇದೆ. ಮುಂಬೈನಲ್ಲಿ ಮನೆಗಳ ಮಾರಾಟವು ಶೇ 1ರಷ್ಟು ಏರಿಕೆ ಕಂಡಿದ್ದು, 97,188 ಮನೆಗಳು ಮಾರಾಟವಾಗಿವೆ.
ಪುಣೆ ನಗರದಲ್ಲಿ ಶೇ 3, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಶೇ 9, ಕೋಲ್ಕತ್ತದಲ್ಲಿ ಶೇ 3 ಮನೆಗಳ ಮಾರಾಟ ಪ್ರಮಾಣವು ಇಳಿಕೆಯಾಗಿದೆ. ಹೈದರಾಬಾದ್ ಶೇ 4, ಅಹಮದಾಬಾದ್ ಶೇ 2 ಹಾಗೂ ಚೆನ್ನೈ ನಗರದಲ್ಲಿ ಮನೆಗಳ ಮಾರಾಟವು ಶೇ 12ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಮಾರಾಟವಾಗದೆ ಉಳಿದ 5.77 ಲಕ್ಷ ಮನೆ
ಒಂದು ಕಡೆ ಭಾರತದಲ್ಲಿ ಮನೆಗಳ ಮಾರಾಟದಲ್ಲಿ ಹೊಸ ಹೊಸ ದಾಖಲೆಗಳು ಸೃಷ್ಟಿ ಆಗುತ್ತಿದೆ. ಆದರೆ ಇದರ ಹೊರತಾಗಿಯೂ ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಮಾರಾಟವಾಗದ ಮನೆಗಳ ಪ್ರಮಾಣ ಹೆಚ್ಚಳವಾಗಿದೆ. 2025ರಲ್ಲಿ ಭಾರತದ 7 ಪ್ರಮುಖ ನಗರಗಳಲ್ಲಿ ಮಾರಾಟವಾಗದೆ ಉಳಿದ ಮನೆಗಳ ಸಂಖ್ಯೆಯೇ ಬರೋಬ್ಬರಿ 5.77 ಲಕ್ಷ ಆಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ವರದಿ ಬಹಿರಂಗಪಡಿಸಿದೆ. ಈ ರೀತಿ ಮಾರಾಟವಾಗದೆ ಉಳಿದಿರುವ ಮನೆಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಖ್ಯೆಯೂ ದೊಡ್ಡದಿದೆ.
-
Bengaluru Waste: ಬೆಂಗಳೂರಲ್ಲಿ ಕಸ ಸಂಗ್ರಹ ವ್ಯವಸ್ಥೆಯಲ್ಲಿ ಹೊಸ ಸುಧಾರಣೆ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications