Bengaluru Power Cut: ಇಂದು ನಗರದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಕಡಿತ! ಎಲ್ಲೆಲ್ಲಿ?

ಬೆಂಗಳೂರು, ಸೆಪ್ಟಂಬರ್ 25: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯಾಪ್ತಿಯಲ್ಲಿ ವಿವಿಧ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇಂದು ಸೆಪ್ಟಂಬರ್ 25ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಆ ಕಾಮಗಾರಿನಡೆಯಲಿದೆ. ಇದರಿಂದಾಗಿ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಬರೋಬ್ಬರಿ ಏಳು ಗಂಟೆ ಕಾಲ ವ್ಯತ್ಯಯ ಉಂಟಾಲಿದೆ. ಹಲವು ತಾಲ್ಲೂಕುಗಳಲ್ಲಿ ವಿದ್ಯುತ್ ಸರಬರಾಜಿನ ಮಿತಿಯೂ ಸಹ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಸ್ಕಾಂ ವಿದ್ಯುತ್ ಕಡಿತದ ಸ್ಥಳಗಳು

ಸೆಪ್ಟೆಂಬರ್ 25 ರಂದು ಬೆಳಗ್ಗೆ ಹತ್ತು ಗಂಟೆ ನಂತರ ಬಿಟಿಎಂ ಲೇಔಟ್, ಸಹಕಾರನಗರ ಮತ್ತು ಜಯನಗರದ ಪ್ರಮುಖ ಪ್ರದೇಶಗಳಲ್ಲಿ ದುಷ್ಕರಿಣಾಮ ಬೀರಲಿವೆ. ಕೆಲವು ಆಸ್ಪತ್ರೆಗಳ ಮೇಲೂ ಬೀರಲಿದೆ. ಬಿಟಿಎಂ ಲೇಔಟ್, ಸೇಂಟ್ ಜಾನ್ಸ್ ಹಾಸ್ಟೆಲ್, ಸೇಂಟ್ ಜಾನ್ಸ್ ವುಡ್ ಅಪಾರ್ಟ್ಮೆಂಟ್, ತಾವರೆಕೆರೆ, ಆಕ್ಸೆಂಚರ್, ಒರಾಕಲ್ ಜಂಕ್ಷನ್, ಕ್ರೈಸ್ಟ್ ಕಾಲೇಜು ಮತ್ತು ಗುರಪ್ಪನಪಾಳ್ಯದಲ್ಲಿ ವಿದ್ಯುತ್ ಕೊರತೆ ಆಗಲಿದೆ.

Bengaluru Power Cut Today on Sep 25th Check 7 Hours Power Disruption areas

ಸಹಕಾರನಗರ ವ್ಯಾಪ್ತಿಯಲ್ಲಿ, ಬಳ್ಳಾರಿ ರಸ್ತೆ, ಅಮೃತಹಳ್ಳಿ, ಜಿಕೆವಿಕೆ ಲೇಔಟ್, ಸಂಪಿಗೆಹಳ್ಳಿ ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಬಿಜಿಎಸ್ ಲೇಔಟ್, ಶಬರಿನಗರ ಜಕ್ಕೂರು ಲೇಔಟ್, ಟೆಲಿಕಾಂ ಲೇಔಟ್, ಕೋಗಿಲು ಲೇಔಟ್, ಅರ್ಕಾವಾತಿ ಲೇಔಟ್, ಐಎಎಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

ಜಯನಗರ ವ್ಯಾಪ್ತಿಯಲ್ಲಿ ಹಾಗೂ ನಿಮ್ಹಾನ್ಸ್, ಕಿದ್ವಾಯಿ, ರಾಜೀವ್ ಗಾಂಧಿ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ, ಇಂದಿರಾಗಾಂಧಿ ಆಸ್ಪತ್ರೆಗಳಂತಹ ಆಸ್ಪತ್ರೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜೊತೆಗೆ ತಲಘಟ್ಟಪುರ ಮತ್ತು ಸಮೀಪದ ಪ್ರದೇಶಗಳಾದ ಕೋಣನಕುಂಟೆ, ದೊಡ್ಡಕಲ್ಲಸಂದ್ರ, ಶ್ರೀನಿಧಿ ಲೇಔಟ್, ಆವಲಹಳ್ಳಿ, ಅರೇಹಳ್ಳಿ, ಮತ್ತು ಇಟ್ಟಮಡು ಎಜಿಎಸ್ ಬಡಾವಣೆಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

ಇನ್ನೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ರಾಜ್ಯದ ಎಂಟು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+