Bengaluru power cut: ಈ ಎರಡು ದಿನ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ಹಾಗೂ ಸಮಯಗಳ ವಿವರ ತಿಳಿಯಿರಿ
ಬೆಂಗಳೂರು, ಜನವರಿ, 17: ಬೆಂಗಳೂರಿನ ಈ ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ವಿದ್ಯುತ್ ವ್ಯತ್ಯಯ ಆಗಲಿದ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಲ್ಲೆಲ್ಲಿ ಯಾವ್ಯಾವಾಗ ವಿದ್ಯುತ್ ಕಟ್ ಆಗಲಿದೆ ಎನ್ನುವ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜನವರಿ 17-18ರಂದು ಸಾಮಾನ್ಯ ನಿರ್ವಹಣೆಯ ಕಾರಣದಿಂದ ಈ ಕೆಳಗಿನ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ಜನವರಿ 17ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಕೋರಮಂಗಲ 5ನೇ ಬ್ಲಾಕ್, ಮಡಿವಾಳ, ವೆಂಕಟೇಶ್ವರ ಲೇಔಟ್, ಚಿಕ್ಕದುಗೋಡಿ, ಜೋಗಿ ಕಾಲೋನಿ, ಸೇಂಟ್ ಜಾನ್ಸ್ ಸ್ಟಾಫ್ ಕ್ವಾರ್ಟರ್ಸ್, ಆಡುಗೋಡಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಜನವರಿ 18ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ರವರೆಗೆ ನೇಕಾರರ ಕಾಲೋನಿ, ಗೊಟ್ಟಿಗೆರೆ, ಎಂಎಲ್ಎ ಲೇಔಟ್, ಭೋರಾ ಲೇಔಟ್, ಆಶ್ರಮ ರಸ್ತೆ, ಕಮ್ಮನಹಳ್ಳಿ, ಬಾಲಾಜಿ ಗಾರ್ಡನ್ ಲೇಔಟ್, ಬಸವನಪುರದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಇನ್ನು ಅದೇ ದಿನ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಬಿಟಿಎಂ ಐ ಸ್ಟೇಜ್, ಜೈ ಭೀಮಾ ನಗರ, ತಾವರೆಕೆರೆ, ತಾವರೆಕೆರೆ 2, SG ಪಾಳ್ಯ, ವಿಲ್ಸನ್ ಗಾರ್ಡನ್, JC ರಸ್ತೆ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೆಎಸಚ್ ರಸ್ತೆ, ಲಾಲ್ಬಾಗ್ ರಸ್ತೆಯಲ್ಲಿ ವಿದ್ಯುತ್ ಇರುವುದಿಲ್ಲ ಎಂದು ತಿಳಿಸಿದೆ.












Click it and Unblock the Notifications