Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆಗಸ್ಟ್‌ 24 ಸೋಮವಾರ ವಿದ್ಯುತ್ ವ್ಯತ್ಯಯ

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಆಗಸ್ಟ್‌ 24ರ ಸೋಮವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ಕರೆಂಟ್ ಕಡಿತ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೆಪಿಟಿಸಿಎಲ್ ವತಿಯಿಂದ ಸೋಮವಾರ (ಆಗಸ್ಟ್‌ 24) ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವು ಭಾಗಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Bengaluru Power Cut Power disruption in These Areas on August 24 2026 Monday Know details

ಸೋಮವಾರ ವಿದ್ಯುತ್ ವ್ಯತ್ಯಯ

ಆಗಸ್ಟ್24 ರ ಸೋಮವಾರ ಎಲ್‌ಆರ್‌ಪಿ ಕಚೇರಿ, ಜಯಕುಮಾರ್ ಆರ್‌ಎಂಯು, ದಿವ್ಯ ಶಾಂತಿ, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಟೈಟಾನ್ ಗ್ಯಾರೇಜ್, ಗಾಂಧಿನಗರ, ಭೈರವಿ ಅಪಾರ್ಟ್‌ಮೆಂಟ್ಸ್‌, ಹೆಗ್ಗಡೆ ನಗರ, ಚಂದ್ರಿಕಾ ಸೋಪ್ ಫ್ಯಾಕ್ಟರಿ, ಬಿಎಂಟಿಸಿ ಡಿಪೋ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಅಲ್ಲದೆ, ಮಲ್ಲೇಶ್ವರಂ, ಎಂಎಸ್ಆರ್ ನಗರ, ಬಿಇಎಲ್ ರಸ್ತೆ, ಸದಾಶಿವನಗರ, ಕನಕಪುರ ಮುಖ್ಯ ರಸ್ತೆ, ದೊಡ್ಡಕಲ್ಲಸಂದ್ರ ಮತ್ತು ತಲಘಟ್ಟಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಸಹ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂನಿಂದ ಮಹತ್ವದ ಸಲಹೆ

ಕಾಮಗಾರಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಗಿದರೆ, ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸಲಾಗುವುದು. ಆದರೂ ಸಾರ್ವಜನಿಕರು ಮೊಬೈಲ್, ಬ್ಯಾಟರಿ, ಲ್ಯಾಪ್‌ಟಾಪ್‌ ಸೇರಿದಂತೆ ವಿದ್ಯುತ್‌ಗೆ ಸಂಬಂಧಿತ ಉಪಕರಣಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮ. ಸಾರ್ವಜನಿಕರು ಸಹಕರಿಸಬೇಕು, ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.

ಭಾನುವಾರ ವಿದ್ಯುತ್ ವ್ಯತ್ಯಯ

ಆರ್‌ಎಂವಿ ಸಬ್‌ಸ್ಟೇಷನ್‌ನ ಮಲ್ಲೇಶ್ವರಂ ವಿಭಾಗ ಸಿ6 ಉಪವಿಭಾಗಕ್ಕೆ ಸಂಪರ್ಕ ಹೊಂದಿದ ಪ್ರದೇಶಗಳಲ್ಲಿ ಹಾಗೂ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಮತ್ತು ಇಸ್ಕಾನ್ ಉಪಕೇಂದ್ರಗಳಿಗೆ ಸಂಪರ್ಕ ಹೊಂದಿದ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿತ್ತು.

ಎಲ್ಲೆಲ್ಲಿ ಕರೆಂಟ್ ಕಟ್?

ಆರ್‌ಎಂವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, ರಾಮಯ್ಯ ಆಸ್ಪತ್ರೆ, ಪೈಪ್‌ಲೈನ್ ರಸ್ತೆ, ಎಂಎಸ್‌ಆರ್ ನಗರ, ಬಿಇಎಲ್ ರಸ್ತೆ, ಸಿಪಿಆರ್‌ಐ ಕ್ವಾರ್ಟರ್ಸ್, ಸದಾಶಿವನಗರ ಪೊಲೀಸ್ ಠಾಣೆ, ಎಜಿಎಸ್ ಲೇಔಟ್, ಜಲದರ್ಶಿನಿ ಲೇಔಟ್, ಎಕೆ ಕಾಲೋನಿ, ಡಾಲರ್ಸ್ ಕಾಲೋನಿ ಮತ್ತು ಚಿಕ್ಕಮಾರನಹಳ್ಳಿ ಭಾಗಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ತಿಳಿಸಿತ್ತು.

ಫೋರಂ ಮಾಲ್, ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂರ್ಟ್‌, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯ ರಸ್ತೆ, ನಾರಾಯಣ ನಗರ 3ನೇ ಬ್ಲಾಕ್, ಮುನಿರೆಡ್ಡಿ ಲೇಔಟ್, ಜ್ಯೋತಿ ಲೇಔಟ್, ಗಂಗಾಪತಿಪುರ, ಸುಪ್ರಜಾ ನಗರ, ಕೋಣನಕುಂಟೆ, ಜರಗನಹಳ್ಳಿ ಉದ್ಯಾನವನ, ಗಂಗಾಧರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ರಾಜೀವ್ ಗಾಂಧಿ ರಸ್ತೆ, ಚುಂಚಘಟ್ಟ ಗ್ರಾಮ, ಶ್ರೀನಿಧಿ ಲೇಔಟ್, ತಲಘಟ್ಟಪುರ, ರಘುವನಹಳ್ಳಿ, ವಿವಿ ನಗರ, ಬಾಲಾಜಿ ಲೇಔಟ್, ರಾಯಲ್ ಫಾರ್ಮ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+