Bengaluru Pothole: ರಸ್ತೆ ಗುಂಡಿ ಮುಚ್ಚಲು ₹750 ಕೋಟಿ ಬಿಡುಗಡೆ: ದಾಖಲೆ ಕೇಳಿದ ಬಿಜೆಪಿ ಶಾಸಕ

ಬೆಂಗಳೂರಿನಲ್ಲಿ ಮೃತ್ಯುಕೂಪಗಳಾಗಿ ಪರಿಣಮಿಸಿರುವ ರಸ್ತೆ ಗುಂಡಿಗಳಿಗೆ ಇನ್ನೂ ಮುಕ್ತಿ ಕೊಡಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರವು ರಸ್ತೆ ಗುಂಡಿ ಮುಚ್ಚಲು ಕೋಟಿ ಕೋಟಿ ಹಣ ಬಿಡುಗಡೆ ಮಾಡಿರುವುದಾಗಿ ಹೇಳಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಕೂಡ ಗುಂಡಿಗಳನ್ನು ಮುಚ್ಚಲು 750 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ. ಆ ಹಣದ ಮೂಲವೇನು? ಅದರ ಬಿಡುಗಡೆ ದಾಖಲೆ ಎಲ್ಲಿದೆ? ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಬಿಜೆಪಿ ಶಾಸಕ ಸಿ.ಎನ್.ಅಶ್ವತ್ಥ ನಾರಾಯಣ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರೇ, ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು 750 ಕೋಟಿ‌ ರೂ ಬಿಡುಗಡೆ ಮಾಡಿದ್ದೇವೆಂದು ಹೇಳಿದ್ದೀರಿ. ಆದರೆ, ಕೇವಲ ಬಾಯಲ್ಲಿ ಹೇಳುವುದಕ್ಕಿಂತ ಆ 750 ಕೋಟಿ ಹಣದ ಮೂಲವೇನು? ಅದರ ಬಿಡುಗಡೆ ದಾಖಲೆ ಎಲ್ಲಿದೆ? ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ. ಅಥವಾ ಈ ಬಾರಿ ಯಾವ ಸಮುದಾಯದ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂಬುದನ್ನೂ ಸ್ಪಷ್ಟಪಡಿಸಿ ಎಂದು ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.

bengaluru-pothole-politics-mla-ashwath-narayan-demands-proof-of-750-crore-release

ಬಿಡುಗಡೆಯಾದ 750 ಕೋಟಿ ಹಣದಲ್ಲಿ ಎಷ್ಟು ನಿಜವಾಗಿಯೂ ರಸ್ತೆ ಗುಂಡಿ ಮುಚ್ಚಲು ಬಳಸಲಾಗುತ್ತಿದೆ?
ಈಗಾಗಲೇ ಮುಚ್ಚಿದ ಗುಂಡಿಗಳು ಮತ್ತೆ ಬಾಯ್ತೆರೆಯುತ್ತಿವೆ. ಇದೇನಾ ನಿಮ್ಮ 'ಗುಣಮಟ್ಟದ' ಕೆಲಸ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

13,000 ರಸ್ತೆಗುಂಡಿಗೆ ಮುಕ್ತಿ!

ಬೆಂಗಳೂರಿನಲ್ಲಿ ಈಗಾಗಲೇ 13,000 ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ, ಉಳಿದ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್‌ ಹೇಳಿಕೆ ನೀಡಿದ್ದರು. ಗುಂಡಿಗಳನ್ನು ಮುಚ್ಚಲು 750 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ವಾರ್ಡ್‌ಗಳ ಮಟ್ಟದಲ್ಲಿ ರಸ್ತೆ ಸುಧಾರಣೆಗೆ 1,100 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ರಸ್ತೆಗುಂಡಿ ನಿವಾರಣೆಯೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ನಮ್ಮ ಸರ್ಕಾರ ಬದ್ಧ ಎಂದಿದ್ದರು.

ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದವರು ಗುಣಮಟ್ಟದ ರಸ್ತೆ ನಿರ್ಮಿಸಿದ್ದರೆ, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆಗಳೇ ಬರುತ್ತಿರಲಿಲ್ಲ. ಬಿಜೆಪಿಯವರು ನಿರ್ಮಿಸಿದ ರಸ್ತೆಗಳು ಎರಡು ಮೂರು ವರ್ಷಕ್ಕೆ ಡಾಂಬರು ಕಿತ್ತು ಹೋಗುತ್ತಿದೆ. ಮಳೆ ನಿಂತ ಬಳಿಕ ರಸ್ತೆ ದುರಸ್ತಿ ಪಡಿಸಲು ನಮ್ಮ ಸರ್ಕಾರ ಬದ್ಧವಿದೆ ಎಂದು ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು.

ಬೆಂಗಳೂರಿನ ರಸ್ತೆ ಗುಂಡಿ ಮತ್ತು ಮೂಲಸೌಕರ್ಯ ಕುರಿತು ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್‌ ಲೇವಡಿ ಮಾಡಿದ್ದು, ಬೆಂಗಳೂರಿನ ಐಟಿ ಕಂಪನಿಗಳನ್ನು ನೇರವಾಗಿ ತಮ್ಮ ರಾಜ್ಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಇದಕ್ಕೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ತಿರುಗೇಟು ನೀಡಿದ್ದಾರೆ. ರಸ್ತೆ ಗುಂಡಿ ವಿಚಾರವು ಅಂತರರಾಜ್ಯ ಗಲಾಟೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+