Get Updates
Get notified of breaking news, exclusive insights, and must-see stories!

Polio Drops: ಕೇಂದ್ರ ನಗರ ಪಾಲಿಕೆಯಿಂದ ಮೊದಲ ದಿನ ಶೇ.94% ಮಕ್ಕಳಿಗೆ ಪೋಲಿಯೋ ಲಸಿಕೆ

ಬೆಂಗಳೂರು: ಬೆಂಗಳೂರು ನಗರಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಆರಂಭವಾಗಲಿದೆ. ಮೊದಲ ದಿನ ಇಂದು ಭಾನುವಾರ (ಡಿಸೆಂಬರ್ 21) ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಹಾಕುವುದು ಯಶಸ್ವಿ ಆಯಿತು. ಒಟ್ಟು ಶೇ. 94.90 ರಷ್ಟು ಗುರಿ ಸಾಧಿಸಲಾಗಿದೆ ಎಂದು ಪಾಲಿಕೆ ರಾಜೇಂದ್ರ ಚೋಳನ್ ಮಾಹಿತಿ ನೀಡಿದರು.

ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸದಾಶಿವರ ನಗರದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ಲಸಿಕೆ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು. ಕೇಂದ್ರ ನಗರಪಾಲಿಕೆ ವ್ಯಾಪ್ತಿಯಲ್ಲಿನ 28 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 45 ನಮ್ಮ ಕ್ಲಿನಿಕ್/ ಹೆರಿಗೆ ಆಸ್ಪತ್ರೆ/ ರೆಫರಲ್ ಆಸ್ಪತ್ರೆಗಳಲ್ಲಿ ಇಂದು ಡಿಸೆಂಬರ್ 21 ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಆರಂಭವಾಯಿತು.

Bengaluru Polio Drop Drive 94 9 Pc Success Rate Achieved on Day One in Central City Corporation

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಹಾಕಲು ಗುರಿ ನಿಗದಿಪಡಿಸಿದ 5 ವರ್ಷದೊಳಗಿನ ಮಕ್ಕಳ ಸಂಖ್ಯೆ 1,85,888 ಇದೆ. ಇದರಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲ ದಿನ ಭಾನುವಾರದಂದು 1,76,413 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈ ಮೂಲಕ ಶೇ. 94.90 ರಷ್ಟು ಗುರಿ ಸಾಧಿಸಲಾಗಿದೆ ಎಂದು ಅವರು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿನ ಇಂದಿನ ಸಾಧನೆ ವಿವರ

* ಕೊಳಚೆ ಪ್ರದೇಶಗಳ ಸಂಖ್ಯೆ : 200
* ಕೊಳಚೆ ಪ್ರದೇಶಗಳ ಮಕ್ಕಳ ಸಂಖ್ಯೆ(0-5) : 49,717
* ವಲಸೆ ಜನಾಂಗದ ಪ್ರದೇಶಗಳು : 13
* ವಲಸೆ ಜನಸಂಖ್ಯೆ : 4,874
* ವಲಸೆ ಜನಾಂಗದ ಮಕ್ಕಳ ಸಂಖ್ಯೆ (0-5) : 538
* ಬೂತ್ ಗಳ ಸಂಖ್ಯೆ : 557
* ಸ್ಥಿರ ಬೂತ್ ಗಳು: 239
* ಟ್ರಾನ್ಸಿಟ್ ತಂಡಗಳು: 225
* ಸಂಚಾರಿ ತಂಡಗಳು : 93
* ಒಟ್ಟು ಲಸಿಕಾ ಕಾರ್ಯಕರ್ತರು : 3500
* ಒಟ್ಟು ಮೇಲ್ವಿಚಾರಕರು: 169

ಅಪರ ಆಯುಕ್ತರಿಂದ ಅಭಿಯಾನ ಪರಿಶೀಲನೆ

ಬೆಂಗಳೂರು ಕೇಂದ್ರ ನಗರ ಪಾಲಿಕೆ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಗೂ ನಮ್ಮ ಕ್ಲಿನಿಕ್ ಗಳಿಗೆ ಭೇಟಿ ನೀಡಿ, ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಪರಿಶೀಲನೆ ನಡೆಸಿದರು. 5 ವರ್ಷದೊಳಗಿನ ಹಲವು ಮಕ್ಕಳಿಗೆ ಅವರು ಲಸಿಕೆ ಹಾಕಿದರು.

ಎಲ್ಲೆಲ್ಲಿ ಲಸಿಕೆ ಹಾಕಲಾಯಿತು?

ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಔಷಧಾಲಯಗಳು, ಅಂಗನವಾಡಿ ಕೇಂದ್ರಗಳು, ಶಾಲೆಗಳಲ್ಲಿ ಸ್ಥಿರ ಮತ್ತು ಸಂಚಾರಿ ತಂಡಗಳನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸ್ವಯಂ ಸೇವಾ ಸಂಸ್ಥೆಯ ಆಸ್ಪತ್ರೆಗಳು, ಮಾಲ್ ಗಳಲ್ಲಿ, ಖಾಸಗಿ ನರ್ಸಿಂಗ್ ಹೋಂಗಳು, ವೈದ್ಯಕೀಯ ಮಹಾವಿದ್ಯಾಲಯ, ಪ್ರಮುಖ ಉದ್ಯಾನವನಗಳು, ಮೆಟ್ರೋ ನಿಲ್ದಾಣ, ಕೊಳಚೆ ಪ್ರದೇಶಗಳಲ್ಲಿ ಇನ್ನು ಮುಂತಾದ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಸಂಚಾರಿ ತಂಡಗಳ ಪಲ್ಸ್ ಪೋಲಿಯೊ ಬೂತ್ ಲಸಿಕೆ ಹಾಕಿರುವ ಬಗ್ಗೆ ಖಚಿತಪಡಿಸಿದರು.

ಪೋಲಿಯೋ ಲಸಿಕೆ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ಸ್, ಹೋರ್ಡಿಂಗ್ಸ್, ತ್ಯಾಜ್ಯ ನಿರ್ವಹಣೆ ಆಟೋ ಟಿಪ್ಪರ್ ಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ, ವಿವಿಧ ಸಾಮಾಜಿಕ ಜಾಲತಾಣಗಳು, ಮನೆಮನೆಗೆ ಭೇಟಿ, ವ್ಯಾಪಕ ಪ್ರಚಾರ ವ್ಯವಸ್ಥೆಯನ್ನು ಮಾಡಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರೋಟರಿ ಸಂಸ್ಥೆ, ಯುನಿಸೆಫ್, ಯು.ಎನ್.ಡಿ.ಪಿ, ಲಯನ್ಸ್,
ಇತರೇ ಸ್ವಯಂ ಸೇವಾ ಸಂಸ್ಥೆಗಳು, ನರ್ಸಿಂಗ್ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ಈ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ಮತ್ತು ಸಹಯೋಗ ನೀಡಿವೆ. ಸಾರ್ವಜನಿಕರು 5 ವರ್ಷದೊಳಗಿನ ಮಕ್ಕಳನ್ನು ಬೂತ್ ಗೆ ಕರೆತಂದು ಎರಡು ಹನಿ ಪೋಲಿಯೊ ಹಾಕಿಸುವಂತೆ ಅವರು ವಿನಂತಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+