ಬೆಂಗಳೂರು ಪೊಲೀಸರಿಂದ ಟ್ವಿಟ್ಟರಲ್ಲಿ ಭಾರಿ ಪ್ರಮಾದ
ಸಾಮಾಜಿಕ ಜಾಲ ತಾಣಗಳನ್ನು ಬಳಕೆ ಮಾಡುವಲಿ ಅಗ್ರಗಣ್ಯ ಸಂಸ್ಥೆ ಎನಿಸಿಕೊಂಡಿರುವ ಬೆಂಗಳೂರು ಪೊಲೀಸರು ಭಾರಿ ಪ್ರಮಾದ ಎಸಗಿರುವುದು ಬೆಳಕಿಗೆ ಬಂದಿದೆ. ಸರಿ ಸುಮಾರು 40, 000ಕ್ಕೂ ಅಧಿಕ ಫೋನ್ ನಂಬರ್ ಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 06: ಸಾಮಾಜಿಕ ಜಾಲ ತಾಣಗಳನ್ನು ಬಳಕೆ ಮಾಡುವಲಿ ಅಗ್ರಗಣ್ಯ ಸಂಸ್ಥೆ ಎನಿಸಿಕೊಂಡಿರುವ ಬೆಂಗಳೂರು ಪೊಲೀಸರು ಭಾರಿ ಪ್ರಮಾದ ಎಸಗಿರುವುದು ಬೆಳಕಿಗೆ ಬಂದಿದೆ.
ಸರಿ ಸುಮಾರು 40, 000ಕ್ಕೂ ಅಧಿಕ ಫೋನ್ ನಂಬರ್ ಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದಾರೆ. ಅದು ಕೂಡಾ ಬೆಂಗಳೂರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಒಂದು ಟ್ವಿಟ್ಟರ್ ಖಾತೆಯಿಂದ ಈ ಪ್ರಮಾದ ನಡೆದಿದೆ.

ಆಂತರಿಕ ಬಳಕೆಗಾಗಿ ಮೀಸಲಾಗಿದ್ದ ಟ್ವಿಟ್ಟರ್ ಖಾತೆಯೊಂದರಿಂದ ಈ ಫೋನ್ ನಂಬರ್ ಗಳು ಲೀಕ್ ಆಗಿವೆ. ಈ ಬಗ್ಗೆ ತಿಳಿದ ಮೇಲೆ ಆ ಖಾತೆಯನ್ನು ಸಂರಕ್ಷಿಸಲಾಗಿದೆ.
Thank you, @gkjohn for helping convince @BlrCityPolice not to publish complainants phone numbers on Twitter @BCPCR: https://t.co/eY06PkWKk9
— Pranesh Prakash (@pranesh) April 6, 2017
ಯಾರದು ಈ ನಂಬರ್ಸ್ : ವಿವಿಧ ಠಾಣೆಗಳಲ್ಲಿ ಹಾಗೂ ಕಂಟ್ರೋಲ್ ರೂಮಿಗೆ ಬಂದಿರುವ ದೂರಿನಲ್ಲಿ ನಮೂದಾಗಿರುವ ದೂರುದಾರರ ಸಂಖ್ಯೆಗಳಾಗಿವೆ. ಈ ಬಗ್ಗೆ ಪೊಲೀಸರು ಎಚ್ಚೆತ್ತುಕೊಳ್ಳುವುದು ತಡವಾಗಿದೆ. 40 ಸಾವಿರ ಸಾರ್ವಜನಿಕರ ನಂಬರ್ ಗಳು ಅನೇಕ ಕಿಡಿಗೇಡಿಗಳ ಕೈ ಸೇರಿದೆ.












Click it and Unblock the Notifications