ಬೆಂಗಳೂರಲ್ಲಿ ಮಾದಕ ವಸ್ತು ಮಾರುತ್ತಿದ್ದ ಮೂವರ ಬಂಧನ

ಬೆಂಗಳೂರು, ಜ. 29: ನಗರದ ಕೋರಮಂಗಲ 2ನೇ ಬ್ಲಾಕ್‌ನಲ್ಲಿ ನೂರ್ ಮಸೀದಿ ಬಳಿ ಸಾರ್ವಜನಿಕರಿಗೆ ಮಾದಕ ವಸ್ತು ಮಾರುತ್ತಿದ್ದ ಆರೋಪದ ಮೇಲೆ ಮೂವರು ಯುವಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ಗಿರಾಕಿಗಳಿಗೆ ಮಾರುತ್ತಿದ್ದರು. ಈ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. [ಅಸ್ಸಾಂ ದಾಳಿಯ ಸೂತ್ರದಾರ ಸಂಜು ಅರೆಸ್ಟ್]

arrest

ನದೀಂ ಸಲೀಂ ಸೊರಾಟಿಯಾ (26), ಮಹಮ್ಮದ್ ಆರೀಫ್ (28) ಹಾಗೂ ಸೈಯದ್ ಇನಾಯತ್ ಬಿನ್ (26) ಬಂಧಿತ ಆರೋಪಿಗಳು. ಅವರಿಂದ ಒಟ್ಟು 85 ಗ್ರಾಂ ಮೆಥ್ ಮಾದಕ ವಸ್ತು ಹಾಗೂ ಒಂದು ಮೊಬೈಲ್ ಮಾದರಿಯ ಇಲೆಕ್ಟ್ರಾನಿಕ್ ವಸ್ತು ವಶಪಡಿಸಿಕೊಳ್ಳಲಾಗಿದೆ. [ಶಂಕಿತ ಐಎಸ್ಐ ಏಜೆಂಟ್ ಬಂಧನ]

ಆರೋಪಿಗಳು ಮಾದಕ ವಸ್ತುವನ್ನು ಮುಂಬೈನಿಂದ ಬೆಂಗಳೂರಿಗೆ ತಂದು ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ 2,500 ರು.ಗಳಿಗೆ 1 ಗ್ರಾಂ. ನಂತೆ ಮಾರುತ್ತಿದ್ದರು. ಬಂಧಿತರಿಂದ 2,12,500 ರು. ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+