• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪತ್ನಿ ಮೇಲೆ ಆ್ಯಸಿಡ್ ಎರಚಿದ್ದವ ಪೊಲೀಸರ ಅತಿಥಿ

|

ಬೆಂಗಳೂರು, ಮಾರ್ಚ್ 12: ಬಾಡಿಗೆ ತಾಯ್ತನದಿಂದ ಹಣಗಳಿಸಲು ಮುಂದಾಗಿದ್ದ ಪತಿಗೆ ಹಣ ನೀಡದಿದ್ದಕ್ಕೆ ಹೆಂಡತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಪರಗಣ ಜಿಲ್ಲೆ ಮೂಲದ ಚಿರಂಜಿತ್ ಬಿಸ್ವಾಸ್(34) ಬಂಧಿತ. ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ತಪಸ್ವಿ ಮತ್ತು ಸಂತ್ರಸ್ತೆ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

ಬಾಡಿಗೆ ತಾಯ್ತನದಿಂದ ಹಣ ಗಣಿಸುವ ಆಸೆಗೆ ತಣ್ಣೀರು, ಪತ್ನಿ ಮೇಲೆ ಆ್ಯಸಿಡ್ ದಾಳಿ

ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಚಿರಂಜಿತ್ ಕೆಸಲಕ್ಕೆ ಹೋಗದೆ ಮಧ್ಯವ್ಯಸನಿಯಾಗಿದ್ದ, ಒಂದು ವರ್ಷದ ಹಿಂದೆ ಚಿರಂಜಿತ್ ಸ್ನೇಹಿತನಒಬ್ಬ ಬಾಡಿಗೆ ತಾಯ್ತನದಿಂದ ಹಣ ಸಂಪಾದನೆ ಮಾಡಬಹುದು ಎಂದು ಹೇಳಿ ದಂಪತಿಯನ್ನು ನಗರಕ್ಕೆ ಕರೆ ತಂದಿದ್ದ.

ನಾಗರಬಾವಿ ವರದಾ ಫರ್ಟಿಲಿಟಿ ಕೇಂದ್ರಕ್ಕೆ ಕರೆದೊಯ್ದು ಡಾ. ಪ್ರಕಾಶ್ ಪರಿಚಯಿಸಿದ್ದ ಅಲ್ಲೇ ಹದಿನೈದು ದಿನ ಇರಿಸಿಕೊಂಡು ತಪಸಿ ಗರ್ಭದಿಂದ ವೈದ್ಯರು ಅಂಡಾಣು ತೆಗೆದುಕೊಂಡಿದ್ದರು. ಬಳಿಕ ಎರಡು ವಾರ ಬಿಟ್ಟು ಬರುವಂತೆ ತಿಳಿಸಿದ್ದರು.

ಫೆ. 10ಕ್ಕೆ ಚಿರಂಜಿತ್ ಪತ್ನಿಯನ್ನು ಕರೆದುಕೊಂಡು ವರದಾ ಫರ್ಟಿಲಿಟಿ ಕೇಂದ್ರದಲ್ಲಿ ಬಿಟ್ಟು ಊರಿಗೆ ಹೋಗಿದ್ದ, ದೂರವಾಣಿ ಕರೆ ಮಾಡಿ 10 ಸಾವಿರ ರೂ ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಹೇಳಿದ್ದ. ಅದಕ್ಕೆ ಪತ್ನಿ ಇಲ್ಲಿ ಯಾವುದೇ ಕೆಲಸವಾಗಿಲ್ಲ, ಹಣ ಕೊಟ್ಟಿಲ್ಲ ಎಂದು ಹೇಳಿದ್ದಳು. ಆತ ವಾಪಸ್ ಬಂದ ಮೇಲೆ ಮತ್ತೆ ಹಣಕ್ಕಾಗಿ ಪೀಡಿಸಿದ್ದಾನೆ ಬಳಿಕ ಆ್ಯಸಿಡ್ ದಾಳಿ ನಡೆಸಿದ್ದ.

English summary
Bengaluru police have arrested acid attacker who belonged to Kolkatta. Recently he attacked on wife with acid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X