ಮಾದಕ ವಸ್ತು ಗಾಂಜಾ ಸಾಗಣೆ ಮಾಡುತ್ತಿದ್ದ 6 ಜನ ಅರೆಸ್ಟ್
ಬೆಂಗಳೂರು, ಮಾರ್ಚ್ 4: ಮಾದಕ ವಸ್ತು ಗಾಂಜಾವನ್ನು ಸಾಗಣೆ ಮಾಡುತ್ತಿದ್ದ 6 ಜನರನ್ನು ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗ ಹಾಗೂ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
23 ವರ್ಷದ ಸವರ ಕವಿತಾ, 25 ವರ್ಷದ ಕಿಲ್ಲೊ ಧನುರ್ಜಯ್, 26 ವರ್ಷದ ಪಂಗಿ ಮೃತ್ಯರಾಜು, 42 ವರ್ಷದ ಉಪ್ಪಲಪಟ್ಟಿ ಸುಬ್ಬಾರೆಡ್ಡಿ ಎನ್, 25 ವರ್ಷದ ಗೌರವ್, 22 ವರ್ಷದ ಮಹಮದ್ ಅಮ್ಮರ್ ಶಂಷಾದ್ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಆಂಧ್ರಪ್ರದೇಶದ ವೈಜಾಕ್ ನಿಂದ ಬಸ್ಸಿನಲ್ಲಿ ಗಾಂಜಾ ತಂದು, ತಮ್ಮ ಬಳಿ ಇಟ್ಟುಕೊಂಡು, ಬೆಂಗಳೂರು ನಗರದ ಇಂದಿರಾನಗರದ ಮತ್ತು ಮೈಕೋ ಲೇಔಟ್ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಮಾರಾಟ ಮಾಡುತ್ತಿದ್ದರು. ತಮ್ಮದೆ ಗಿರಾಕಿಗಳಿಗೆ ಗಾಂಜಾ ಮಾಡಿ, ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದರು.

ತಮಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಅಧಿಕಾರಿಗಳು, ಒಬ್ಬ ಮಹಿಳೆ ಸೇರಿದಂತೆ 6 ಜನರನ್ನು ಹಿಡಿದಿದ್ದಾರೆ. ಅವರ ಬಳಿ ಇದ್ದ 43 ಕೆಜಿ ಗಾಂಜಾ, 6 ಮೊಬೈಲ್ ಹಾಗೂ 20 ನಗದು ಹಣ, ಒಂದು ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ. ಗಾಂಜಾ ಮಾಲಿನ ಮಾಲ್ಯ ಸುಮಾರು 23 ಲಕ್ಷ ರೂಪಾಯಿ ಇರಬಹುದು ಎಂದು ಊಹಿಸಲಾಗಿದೆ.












Click it and Unblock the Notifications