Bengaluru Infrastructure: ಬೆಂಗಳೂರಿಗಾಗಿ ₹54,000 ಕೋಟಿ ವೆಚ್ಚದ ಯೋಜನೆಗಳಿಗೆ ಅಸ್ತು, ಏನೆಲ್ಲ ಪ್ರಯೋಜನ?

ಸಿಲಿಕಾನ್‌ ಸಿಟಿ ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಇಲ್ಲಿನ ಮೂಲಸೌಕರ್ಯಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಹಲವು ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಲೇ ಇದೆ. ಇದೀಗ ಬೆಂಗಳೂರಿಗಾಗಿ ಬರೋಬ್ಬರಿ 54,000 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಂದಿನ 30 ವರ್ಷಗಳ ಅವಧಿಗಾಗಿ ಯೋಜನೆ ರೂಪಿಸಿದೆ.

ಮುಖ್ಯವಾಗಿ ಬೆಂಗಳೂರಿನಲ್ಲಿ ಮಿತಿಮೀರುತ್ತಿರುವ ಟ್ರಾಫಿಕ್‌ ದಟ್ಟಣೆ ನಿಯಂತ್ರಣ ಮಾಡುವುದು ಹಾಗೂ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದೊಂದಿಗೆ 16 ಮೇಲ್ಸೇತುವೆಗಳು, ಅಂಡರ್‌ಪಾಸ್‌ ಹಾಗೂ ಎರಡು ಡಬಲ್‌ ಡೆಕ್ಕರ್‌ ಕಾರಿಡಾರ್‌, ಸುರಂಗ ರಸ್ತೆ ನಿರ್ಮಿಸಲು ಮುಂದಾಗಿದೆ. ಇವುಗಳಿಗೆ 54 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗಳು ಸಿದ್ಧಗೊಂಡಿವೆ ಎಂದು ವರದಿಯಾಗಿದೆ.

Bengaluru Plans 54 000 Crore Projects To Tackle Traffic And Improve Connectivity

ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ ಯೋಜನೆಯಡಿ ಇಲ್ಲಿನ ಸಂಚಾರ ತಗ್ಗಿಸುವುದು ಹಾಗೂ ಅವುಗಳ ನಿರ್ವಹಣೆಗಾಗಿ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಸಂಸ್ಥೆಯೊಂದು ಬಿಬಿಎಂಪಿಗೆ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಈ ಹೊಸ ಯೋಜನೆಗಳೂ ಸೇರಿದಂತೆ ಈಗಿರುವ ರಸ್ತೆ ಹಾಗೂ ಜಂಕ್ಷನ್‌ಗಳಲ್ಲೂ ಸುಗಮ ಸಂಚಾರಕ್ಕೆ ಮಹತ್ವದ ಸಲಹೆಗಳನ್ನು ಕೂಡ ಉಲ್ಲೇಖ ಮಾಡಲಾಗಿದೆ. ಪ್ರಮುಖವಾಗಿ ಮೈಸೂರು ರಸ್ತೆ, ತುಮಕೂರು ರಸ್ತೆ, ಹಳೆ ಮದ್ರಾಸ್‌ ರಸ್ತೆಗಳಲ್ಲಿ ಅತಿಹೆಚ್ಚು ದಟ್ಟಣೆ ಇರುವ ಪ್ರದೇಶಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳ ಸಮಸ್ಯೆಯನ್ನು ಕೂಡ ಇದರಲ್ಲಿ ಉಲ್ಲೇಖಿಸಲಾಗಿದೆ.

Bengaluru Plans 54 000 Crore Projects To Tackle Traffic And Improve Connectivity

ಈ ಸಮಸ್ಯೆಗಳ ಪರಿಹಾರಕ್ಕೆ ಬಸ್‌ಗಳ ನಿಲುಗಡೆ ತಾಣ ಹಾಗೂ ನಿಲ್ದಾಣಗಳನ್ನು ಮತ್ತೆ ಬದಲಿಸುವುದು, ಫುಟ್‌ಪಾತ್‌ಗಳಲ್ಲಿ ಇರುವ ತೊಡಕುಗಳನ್ನು ತೆರವು ಮಾಡುವುದು, ರಸ್ತೆಗಳನ್ನು ವಿಸ್ತರಿಸುವುದು ಸೇರಿದಂತೆ ಹಲವು ಪರಿಹಾರಗಳನ್ನು ಈ ವರದಿಯಲ್ಲಿ ತಿಳಿಸಲಾಗಿದೆಯಂತೆ.

2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿರುವ ಹಲವು ಯೋಜನೆಗಳು, ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಘೋಷಿಸಿರುವ ಯೋಜನೆಗಳು ಹಾಗೂ ಬಿಬಿಎಂಪಿ ಕೈಗೆತ್ತಿಕೊಂಡಿರುವ ಹಳೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಈ ವರದಿ ಒಳಗೊಂಡಿದೆ ಎನ್ನಲಾಗಿದೆ.

Bengaluru Plans 54 000 Crore Projects To Tackle Traffic And Improve Connectivity

ವರದಿಯಲ್ಲಿರುವ ಪ್ರಮುಖ ಅಂಶಗಳು: ಬೆಂಗಳೂರಿನಲ್ಲಿ ಸದ್ಯ ವಾಹನಗಳು ಪ್ರತಿ ಗಂಟೆಗೆ 10 ಕಿ.ಮೀ ವೇಗದಲ್ಲಿ ಸಂಚರಿಸುತ್ತಿವೆ. ಎಲಿವೇಟೆಡ್‌ ಕಾರಿಡಾರ್‌ಗಳು ನಿರ್ಮಾಣವಾದ ಬಳಿಕ 2051ರ ವೇಳೆಗೆ 40 ಕಿ.ಮೀ ವೇಗದಲ್ಲಿ ಸಂಚರಿಸಬಹುದು ಎಂದು ಹೇಳಿದೆ.

ಬೆಂಗಳೂರಿನ ಎಲ್ಲ ಕಾರಿಡಾರ್‌ಗಳಲ್ಲಿ ಟ್ರಾಫಿಕ್‌ ಜಾಮ್‌ ಮಿತಿಮೀರಿದ್ದು, ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ವರದಿಯಲ್ಲಿರುವ ಕಾರಿಡಾರ್‌ಗಳಲ್ಲಿ ಎಲ್ಲ ಸಮಯದಲ್ಲು ಕೂಡ ಟ್ರಾಫಿಕ್‌ ಜಾಮ್‌ ಹೆಚ್ಚಾಗಿಯೇ ಇರುತ್ತೆ. ಹಾಗಾಗಿ ಇಲ್ಲಿ ಇನ್ನೂ ಆಧುನಿಕ ತಂತ್ರಜ್ಞಾನ ಒಳಗೊಂಡ ಟ್ರಾಫಿಕ್‌ ಸಿಗ್ನಲ್‌ಗಳನ್ನು ತುರ್ತಾಗಿ ಅಳವಡಿಸಬೇಕು ಎಂದು ತಿಳಿಸಿದೆ.

ಇನ್ನು 54,000 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಂದಿನ ಮೂರು ದಶಕದ ದೃಷ್ಟಿಯಿಂದ ರೂಪಿಸಲಾಗಿದೆ. ಇವುಗಳು ಬೆಂಗಳೂರಿನ ಸುಗಮ ಸಂಚಾರವನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶವನ್ನು ಒಳಗೊಂಡಿವೆ. ಇದರಿಂದ ಟ್ರಾಫಿಕ್‌ನಿಂದ ಮುಕ್ತಿ ಪಡೆಯಬಹುದು ಎಂದು ಬೆಂಗಳೂರಿಗರು ನಿರೀಕ್ಷೆಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+