Bengaluru rain: ಮುಂದಿನ 48 ಗಂಟೆ ನಗರಕ್ಕೆ ಭಾರೀ ಮಳೆ, 6 ದಿನದ ಹವಾಮಾನ ವರದಿ

ಬೆಂಗಳೂರು, ಅಕ್ಟೋಬರ್ 11: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿವಾಸಿಗಳು ಮಳೆಗಾಲದ ವಾತಾವರಣವನ್ನು ಅನುಭವಿಸುತ್ತಿದ್ದಾರೆ. ಈವರೆಗಿನ ಬಿಸಿಲಿನ ವಾತಾವರಣ ಕಣ್ಮರೆಯಾಗಿದ್ದು, ಜೋರು ಮಳೆ ಸುರಿಯಲಾರಂಭಿಸಿದೆ. ಈ ಮಳೆ ಮುಂದಿನ 48 ಗಂಟೆವರೆಗೆ ಮುಂದುವರಿಯಲಿದ್ದು, ನಂತರ ತುಸು ಬಿಡುವು ಕೊಡುವ ಮುನ್ಸೂಚನೆಗಳು ಇವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

ಇಂದು ಬುಧವಾರ ಮತ್ತು ಗುರುವಾರ ಎರಡು ದಿನ ಗುಡುಗು ಮಿಂಚು ಮತ್ತು ಜೋರು ಗಾಳಿ ಸಹಿತ ನಗರದಲ್ಲಿ ಮಳೆ ಆರ್ಭಟಿಸಲಿದೆ. ಮಂಗಳವಾರ ಸಂಜೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಇವತ್ತು ಸಹ ಮುಂದುವರಿದಿದೆ.

bengaluru-next-48-hours-may-receive-heavy-rain

ಇಂದು ಅಕ್ಟೋಬರ್ 11ರ ಸಂಜೆ ಹೊತ್ತಿಗೆ ಜೋರು ಮಳೆ ಆಗಲಿದ್ದು, ಇದು ಗುರುವಾರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಂಧ್ರ ಪ್ರದೇಶದ ರಾಯಲ್ ಸೀಮಾದಿಂದ ತಮಿಳುನಾಡು ಮೂಲಕ ಕನ್ಯಾಕುಮಾರಿ ಅವರೆಗೆ ಬೃಹತ್ ಸುಳಿಗಾಳಿ ಹಾದು ಹೋಗಿದೆ.

ಶುಕ್ರವಾರ ಬಳಿಕ ಮಳೆ ಕ್ಷೀಣ ಸಾಧ್ಯತೆ

ಈ ಹವಾಮಾನ ವೈಪರಿತ್ಯದ ಪ್ರಭಾವದಿಂದ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅತ್ಯಧಿಕ ಮಳೆ, ಜೋರು ಗಾಳಿ ಮತ್ತು ತಂಪು ವಾತಾವರಣ ಕಂಡು ಬರುತ್ತಿದೆ. ಇನ್ನೂ ಕೆಲವು ದಿನ ಕಡಿಮೆ ತಾಪಮಾನದ ವಾತಾವರಣವೇ ಮುಂದುವರಿಯಲಿದೆ.

bengaluru-next-48-hours-may-receive-heavy-rain

ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಬಹುತೇಕ ಬಡಾವಣೆಗಳಲ್ಲಿ ಅಬ್ಬರದ ಮಳೆ ಕಂಡು ಬರಲಿದೆ. ನಂತರ ಶುಕ್ರವಾರದಿಂದ ಅಕ್ಟೋಬರ್ 16ರವರೆಗೆ ಅಲ್ಲಲ್ಲಿ ಸಾಮಾನ್ಯ ಮತ್ತು ಹಗುರು ಮಳೆ ಆಗಲಿದೆ. ಮುಂದಿನ ಕೆಲವು ದಿನಗಳು ತಾಪಮಾನ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಗಳು ಇದೆ.

ಮಂಗಳವಾರ ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?

ನಗರದಲ್ಲಿ ಮಂಗಳವಾರ ಸಂಜೆ ಅಲ್ಲಲ್ಲಿ ಬಿರುಸಿನ ಮಳೆ ದಾಖಲಾಗಿದೆ. ಮಹಾದೇವಪುರ ವಲಯದ ಎಚ್‌ಎಎಲ್ ಏರ್‌ಪೋರ್ಟ್ ನಲ್ಲಿ 19 ಮಿಲಿ ಮೀಟರ್, ಹೂಡಿ 16 ಮಿ.ಮೀ, ಮಾರತ್ತಹಳ್ಳಿ ಮತ್ತು ವರ್ತೂರಿನಲ್ಲಿ ತಲಾ 12.5 ಮಿ.ಮೀ, ಗುರುಡಾಚಾರ್‌ಪಾಳ್ಯ 12 ಮಿ.ಮೀ ಹಾಗೂ ಬಸವನಪುರದಲ್ಲಿ 11 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಇಲಾಖೆ ವರದಿ ತಿಳಿಸಿದೆ.

ಈ ಮಳೆಗೆ ನಗರದ ಸರ್ಜಾಪುರ, ಕೋರಮಂಗಲ, ಮಾರತ್ತಹಳ್ಳಿ, ಎಚ್‌ಎಎಲ್ ವಿಮಾನ ನಿಲ್ದಾಕ್ಕೆ ಹೋಗುವ ರಸ್ತೆಗಳು ಸೇರಿದಂತೆ ವಿವಿಧೆಡೆ ರಸ್ತೆಗಳ ಮೇಲೆ ನೀರು ನಿಂತ ಪರಿಣಾಮ ವಾಹನಗಳ ಸಂಚಾರ ತೊಂದರೆ ಆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+