Bengaluru: ನಾವು ಯಾರಿಗೂ ಕಮ್ಮಿ ಇಲ್ಲ: ಆಟೋ ಚಾಲಕನ ಹೈ-ಫೈ ಕುರ್ಚಿ ಕಂಡು ಬೆರಗಾದ ನೆಟ್ಟಿಗರು

ಬೆಂಗಳೂರು ಸೆಪ್ಟೆಂಬರ್ 25: ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬನ ಸ್ಮಾರ್ಟ್ ಕಾರ್ಯಕ್ಕೆ ಬೆಂಗಳೂರಿಗರು ಫಿದಾ ಆಗಿದ್ದಾರೆ. ಆಟೋ ಚಾಲಕನ ಹೈ-ಫೈ ಕುರ್ಚಿ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಸಾಫ್ಟ್‌ವೇರ್ ಕಂಪನಿಗಳಿವೆ. ಅಲ್ಲಿನ ಉದ್ಯೋಗಿಗಳಿಗೆ, ಸಿಬ್ಬಂದಿಗಳಿಗೆ ಅರಾಮಾಗಿ ಕುಳಿತು ಕೆಲಸ ಮಾಡಲು ಬೆಲೆ ಬಾಳುವ ಚೇರ್‌ಗಳನ್ನ ಇಡಲಾಗಿರುತ್ತದೆ. ಆದರೆ ಇಂತಹ ಚೇರ್‌ಗಳು ಆಟೋದಲ್ಲಿ ಇರುತ್ತದೆ ಅಂದ್ರೆ ನೀವು ನಂಬ್ತೀರಾ...? ಅಂತಹದೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Bengaluru: Netizens are amazed to find an auto drivers hi-fi chair

ಆಟೋ ರಾಜ ಶಂಕರ್‌ನಾಗ್, ವಿಷ್ಣವರ್ಧನ್, ಉಪೇಂದ್ರ, ದರ್ಶನ್ ಹೀಗೆ ಸ್ಯಾಂಡರ್‌ವುಡ್‌ ನ ಅನೇಕ ನಟರು ಆಟೋ ಓಡಿಸುವಂತಹ ಸಿನಿಮಾಗಳಿಂದ ಚಾಲಕರ ಮನಗೆದ್ದಿದ್ದಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕ ತನ್ನ ಸೀಟ್‌ಗೆ ರಿವಾಲ್ವಿಂಗ್ ಕುರ್ಚಿಯನ್ನು ಹೊಂದಿಸುವ ಮೂಲಕ ಅಂತರ್ಜಾಲದಲ್ಲಿ ಹೀರೋ ಆಗಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಮೂಲಕ ಸರಾಗವಾಗಿ, ಆರಾಮವಾಗಿ ಪ್ರಯಾಣಿಸಲು ತನ್ನ ಡ್ರೈವಿಂಗ್ ಸೀಟಿನಲ್ಲಿ ರಿವಾಲ್ವಿಂಗ್ ಕುರ್ಚಿಯನ್ನು ಆಟೋ ಚಾಲಕ ಹೊಂದಿಸಿದ್ದಾನೆ. ಟ್ರಾಫಿಕ್‌ನಿಂದಾಗಿ ಗಂಟೆಗಟ್ಟಲೆ ರಸ್ತೆಯಲ್ಲಿ ನಿಲ್ಲುವ ಆಟೋಗಳ ಚಾಲಕರ ಸೀಟುಗಳು ಹೇಗಿರುತ್ತವೆ ಅನ್ನೋದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆಟೋಗಳಲ್ಲಿ ಬಹುತೇಕ ಸೀಟುಗಳಿಗೆ ಒರಗಿಕೊಳ್ಳುವ ವ್ಯವಸ್ಥೆಯೇ ಇರುವುದಿಲ್ಲ. ಹೀಗಾಗಿ ಇದು ಚಾಲಕರಿಗೆ ಕೊಂಚ ಕಿರಿಕಿರಿಯನ್ನುಂಟು ಮಾಡುತ್ತದೆ.

ಇದನ್ನು ತಪ್ಪಿಸಲು ಎಷ್ಟೋ ಚಾಲಕರು ಹಿಂಬದಿಯಲ್ಲಿ ದಿಂಬು ಇಟ್ಟುಕೊಳ್ಳುವು ಅಥವಾ ಬಟ್ಟೆ ಗಂಟನ್ನು ಇಟ್ಟುಕೊಳ್ಳುವುದನ್ನು ಮಾಡುತ್ತಾರೆ. ಆದರೆ ವೈರಲ್ ಫೋಟೋದಲ್ಲಿನ ಚಾಲಕರ ಕೊಂಚ ವಿಭಿನ್ನವಾಗಿ ಯೋಚಿಸಿದ್ದಾನೆ. ತನ್ನ ಸೀಟಿನ ಹಿಂಬದಿಯಲ್ಲಿ ರಿವಾಲ್ವಿಂಗ್ ಕುರ್ಚಿಯ ಹಿಂಬದಿ ಸೀಟ್ ಅನ್ನು ಹೊಂದಿಸಿದ್ದಾನೆ. ಇದು ನೋಡುಗರ ಗಮನವನ್ನು ಸೆಳೆದಿದೆ.

ಅನುಜ್ ಬನ್ಸಾಲ್ ಎಂಬ ಬಳಕೆದಾರರು ಎಕ್ಸ್ (ಟ್ವೀಟ್‌)ಯಲ್ಲಿ "ಟೆಕ್ಬ್ರೋಸ್ ಏಕೆ ಎಲ್ಲಾ ವಿನೋದವನ್ನು ಹೊಂದಿರಬೇಕು?" ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಮೂರು ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಜೊತೆಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಅಭಿನಯ್ ಓಂಕಾರ್ ಎಂಬ ವ್ಯಕ್ತಿ, 'ಇದು ಗೇಮಿಂಗ್ ಚೇರ್, ಅವರು ಅರೆಕಾಲಿಕ ಗೇಮರ್' ಎಂದು ಬರೆದಿದ್ದಾರೆ.

ಮತ್ತೊಬ್ಬರು, 'ಇವರು ಸ್ಟಾಕ್ ವ್ಯಾಪಾರಿ ಆಗಿರಬೇಕು' ಎಂದು ಬರೆದಿದ್ದಾರೆ.

ಇನ್ನೊಬ್ಬ ವ್ಯಕ್ತಿ , 'ಬಹುಶಃ ಅವನು ಅರೆಕಾಲಿಕ ಟೆಕ್ಬ್ರೋ ಆಗಿರಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನ ಮಹಿಳೆಯೊಬ್ಬರು ಇವರನ್ನು "ಟೋನಿ ಸ್ಟಾರ್ಕ್" ಎಂದು ಕರೆದಿದ್ದಾರೆ.

ಕ್ಯೂಆರ್ ಕೋರ್ಟ್ ಇರುವ ಸ್ಮಾರ್ಟ್ ವಾಚ್

ಇತ್ತೀಚೆಗೆ ಆಟೋ ಚಾಲಕರ ಸ್ಮಾರ್ಟ್ ವರ್ಕ್ ಸಾಕಷ್ಟು ಗಮನಸೆಳೆಯುತ್ತಿವೆ. ಹಿಂದೊಮ್ಮೆ ಬೆಂಗಳೂರು ಆಟೋ ಚಾಲಕ ಹಣ ಪಾವತಿಗಾಗಿ ಕ್ಯೂಆರ್ ಕೋರ್ಟ್ ಇರುವ ಸ್ಮಾರ್ಟ್ ವಾಚ್ ತೋರಿಸಿದ್ದು, ಈ ಬಗ್ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರಲ್ಲೂ ಬೆಂಗಳೂರಿನ ಗದ್ದಲದ ಬೀದಿಗಳಲ್ಲಿ ಹೊಸ ಟೆಕ್ನಾಲಜಿ ಬಳಕೆ ಹೊಸತನಕ್ಕೆ ಹೊಸದೇನಲ್ಲ. ಆದರೆ ಸ್ಮಾರ್ಟ್‌ವಾಚ್‌ನಲ್ಲಿ ಸ್ಕ್ರೀನ್‌ಸೇವರ್‌ನಂತೆ ಕ್ಯೂಆರ್ ಕೋಡ್ ಬಳಕೆ ಮಾಡಿದ ಆಟೋ ಡ್ರ್ಐವರ್‌ದು ಮಾತ್ರ ವಿಶೇಷ ಕೆಲಸವಾಗಿದೆ.

'ಪೀಕ್ ಬೆಂಗಳೂರು' ಎಂದು ಜನಪ್ರಿಯವಾಗುತ್ತಿರುವ ಟೆಕ್ ಸಿಟಿ ಬೆಂಗಳೂರಿನಲ್ಲಿ ಈ ಪ್ರತಿಕ್ಷಣವೂ ಸ್ಟಾರ್ಟ್‌ಅಪ್‌ ಸಂಸ್ಕೃತಿ, ಐಟಿ ಉದ್ಯಮ, ಟ್ರಾಫಿಕ್, ಗಗನಕ್ಕೇರುತ್ತಿರುವ ಬಾಡಿಗೆಗಳು ಮತ್ತು ನಾವಿನ್ಯತೆ ಮತ್ತು ಸೃಜನಶೀಲತೆ ಮೂಲಕ ಭಾರೀ ಸದ್ದು ಮಾಡುತ್ತಿರುತ್ತದೆ. ಅಷ್ಟು ಮಾತ್ರವಲ್ಲದೆ ಸಂಚಾರ ದಟ್ಟಣೆಯಿಂದಲೂ ಹೆಸರುವಾಸಿ. ಈ ನಡುವೆ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಆಟೋ ಪ್ರಯಾಣಿಕನೊಬ್ಬ ತನ್ನ ಸ್ಟಾರ್ಟ್‌ವಾಚ್‌ ಅನ್ನು ಸೃಜನಶೀಲತೆಯಿಂದ ಬಳಕೆ ಮಾಡಿದ್ದಾನೆ. ಆಟೋ ಚಾಲಕ ಪ್ರಯಾಣಿಕನಿಗೆ ಕ್ಯೂಆರ್‌ ಕೋಡ್ ಕಾಗದ ತೋರಿಸುವ ಬದಲು ಅವರ ಸ್ಮಾರ್ಟ್‌ ವಾಚ್ ಅನ್ನು ತೋರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+