Bengaluru Traffic Update: ನಮ್ಮ ಮೆಟ್ರೋ ಕಾಮಗಾರಿ! ORR ರಸ್ತೆಯಲ್ಲಿ ಓಡಾಡುವವರು ಗಮನಿಸಿ
ಬೆಂಗಳೂರು, ಮಾರ್ಚ್ 19: ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಇತ್ತೀಚೆಗೆ ನಮ್ಮ ಮೆಟ್ರೋ ಕ್ರೇನ್ ಯಂತ್ರ ವಾಲಿದ್ದರಿಂದ ಇಲ್ಲಿನ ಮೇಲ್ಸೇತುವೆಯನ್ನು ಇತ್ತೀಚೆಗೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಅದರ ಬೆನ್ನಲ್ಲೆ ಮೆಟ್ರೋ ಮಾರ್ಗ ನಿರ್ಮಾಣ ಕೆಲಸ, ರಸ್ತೆ ಅಗಲೀಕರಣದಿಂದಾಗಿ ಈ ಮಾರ್ಗದಿಂದ ಐಟಿ ಕಾರಿಡಾರ್‌ಗಳಿಗೆ ಓಡಾಡುವ ರಸ್ತೆಗಳಲ್ಲಿ ಸಂಚಾರ ಸಮಸ್ಯೆ ಉಂಟಾಗಿದೆ. ವಾಹನ ಸವಾರರು ಈ ಮಾರ್ಗಗಳಲ್ಲಿ ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿದೆ. ಇನ್ನು ಕೆಲವು ದಿನಗಳ ಕಾಲ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿರುತ್ತದೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಹೊರ ವರ್ತುಲ ರಸ್ತೆಯ ಸಲೆಮ್ ರೈಲ್ವೆ ಬ್ರಿಡ್ಜ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಮತ್ತೊಂದೆಡೆ ಇದೇ ಭಾಗದಲ್ಲಿ ಬಿಬಿಎಂಪಿ ರಸ್ತೆ ಅಗಲೀಕರಣ ನಡೆಸುತ್ತಿದೆ. ಹೀಗಾಗಿ ಹೊರ ವರ್ತುಲ ರಸ್ತೆ ಮಾರ್ಗವಾಗಿ ಮಹಾದೇವಪುರದಿಂದ ಮಾತ್ತಹಳ್ಳಿವರೆಗೆ, ಮಾತ್ತಹಳ್ಳಿಯಿಂದ ಮರಳಿ ಮಹಾದೇವಪುರ ಕಡೆಗೆ ಬರುವ ವಾಹನಗಳಿಗೆ ಸಂಚಾರ ಎಚ್ಚರಿಕೆ ಕೊಡಲಾಗಿದೆ.

ಈ ರಸ್ತೆ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಕಂಡು ಬರಲಿದೆ. ಮೆಟ್ರೋ ಕಾಮಗಾರಿಯಿಂದಾಗಿ ವಾಹನಗಳು ನಿಧಾನವಾಗಿ ಸಾಗಲಿವೆ. ಸಾರ್ವಜನಿಕರು ಸಹಕರಿಸವುಂತೆ ಟ್ರಾಫಿಕ್ ಪೊಲೀಸರು ಕೋರಿದ್ದಾರೆ. ಇನ್ನು ಮಾರತ್ತಹಳ್ಳಿ ಪೊಲೀಸ್ ಠಾಣೆ ಮುಂದೆಯು ಮೆಟ್ರೋ ಪಿಲ್ಲರ್, ವಯಾಡಕ್ಟ್ ನಿರ್ಮಾಣಕ್ಕಾಗಿ ರಸ್ತೆಯಲ್ಲಿ ಕಬ್ಬಿಣದ ಸಲಕರಣೆ ಹಾಕಲಾಗಿದೆ. ಕೆಲಸ ನಡೆಯುತ್ತಿದೆ.
ಇಲ್ಲಿಂದ ಕಾಡುಬೀಸನಹಳ್ಳಿ, ಅಲ್ಲಿಂದ ಕಾರ್ತಿಕ್ ನಗರ ಕಡೆಗೆ ತೆರಳುವ ರಸ್ತೆಗಳಲ್ಲಿ ವಾಹನ ಸಂಚಾರ ನಿಧಾನವಾಗಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಎಚ್‌ಎಎಲ್ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೋ ನೀಲಿ ಮಾರ್ಗದ ನಿರ್ಮಾಣ ಕುರಿತು..
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವತಿಯಿಂದ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ನೀಲಿ ಮಾರ್ಗದ ನಿರ್ಮಾಣ ಕೆಲಸ ನಡೆದಿದೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌ಪುರಂ ವರೆಗೆ 2ಎ ಹಂತದಲ್ಲಿ ಕೆಲಸ ಬರದಿಂದ ಸಾಗಿದೆ. ಹೀಗಾಗಿ ಅಲ್ಲಲ್ಲಿ ರಸ್ತೆ ಪಕ್ಕದಲ್ಲಿ ನಿರ್ಮಾಣದ ಸಲಕೆರಣೆಗಳು ಇವೆ. ಹಗಲು ಹೊತ್ತು ಕೆಲಸ ನಡೆಯುತ್ತಿದೆ. ಹೀಗಾಗಿ ಕೆಲವು ದಿನಗಳ ಕಾಲ ವಾಹನ ಸಂಚಾರಕ್ಕೆ ತೊಂದರೆ ಆಗುವ ನಿರೀಕ್ಷೆ ಇದೆ.
Traffic Advisory:-
— HAL AIRPORT TRAFFIC BTP (@halairporttrfps) March 17, 2025
Due to ongoing metro work at Outer Ring Road Salem Railway Bridge, the traffic from Mahadevpur towords Marathahalli and from Marathahalli towards Mahadevpur will be slow,please co-operate with us and plan accordingly. Thank you@CPBlr @Jointcptraffic pic.twitter.com/LYpG6ePV9e
ಸುಮಾರು 58 ಕಿ.ಮೀ. ಉದ್ದದ ಮೆಟ್ರೋ ನೀಲಿ ಮಾರ್ಗವು ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರು ಏರ್‌ಪೋರ್ಟ್‌ವೆರೆಗೆ ಎರಡು ಹಂತಗಳಲ್ಲಿ ನಿರ್ಮಾಣವಾಗುತ್ತಿದೆ. ಕೆಲವೆಡೆ ವಾಹನಗಳಿಗೆ ಮೇಲ್ಸೇತುವೆ, ಡೌನ್ ರ್ಯಾಂಪ್ ನಿರ್ಮಾಣವು ಪ್ರಗತಿಯಲ್ಲಿದೆ. 2026ರ ಜೂನ್ ಹೊತ್ತಿಗೆ ಈ ನೀಲಿ ಮಾರ್ಗವು ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ.












Click it and Unblock the Notifications